H16 News
Logo
ತೆಲಂಗಾಣ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮೊಹಮ್ಮದ್ ಅಜರುದ್ದೀನ್
Trending
ತೆಲಂಗಾಣ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮೊಹಮ್ಮದ್ ಅಜರುದ್ದೀನ್

ತೆಲಂಗಾಣ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಅವರು ತೆಲಂಗಾಣ ರಾಜಭವನದಲ್ಲಿ ಇಂದು ಅಜರುದ್ದೀನ್ ಅವರಿಗೆ ಪ್ರಮಾಣವಚನ ಬೋಧಿಸಿದರು.

2025-10-31

ಭಾರತವನ್ನು ಗೆಲ್ಲಿಸಿ ಅಳುತ್ತಲೇ ಮನದಾಳ ತೆರೆದಿಟ್ಟ ಜೆಮಿಮಾ ರೊಡ್ರಿಗಸ್
Sports
ಭಾರತವನ್ನು ಗೆಲ್ಲಿಸಿ ಅಳುತ್ತಲೇ ಮನದಾಳ ತೆರೆದಿಟ್ಟ ಜೆಮಿಮಾ ರೊಡ್ರಿಗಸ್

emimah Rodrigues: ಆಸ್ಟ್ರೇಲಿಯಾ ವಿರುದ್ಧದ ಮಹಿಳಾ ವಿಶ್ವಕಪ್ ಸೆಮಿಫೈನಲ್ನಲ್ಲಿ ಜೆಮಿಮಾ ರೊಡ್ರಿಗಸ್ ಶತಕ ಬಾರಿಸಿ ಭಾರತವನ್ನು ಫೈನಲ್ಗೆ ಕೊಂಡೊಯ್ದರು. ಈ ಐತಿಹಾಸಿಕ ಗೆಲುವಿನ ನಂತರ ಜೆಮಿಮಾ ಭಾವುಕರಾಗಿ ಕಣ್ಣೀರಿಟ್ಟರು. ಕಠಿಣ ಸಮಯದ ನಂತರ ಬಂದ ಈ ಯಶಸ್ಸಿಗೆ ದೇವರು, ಕುಟುಂಬ ಮತ್ತು ತರಬೇತುದಾರರಿಗೆ ಕೃತಜ್ಞತೆ ಸಲ್ಲಿಸಿದರು. ಮೂರನೇ ಕ್ರಮಾಂಕದಲ್ಲಿ ಅನಿರೀಕ್ಷಿತ ಬ್ಯಾಟಿಂಗ್ ಮತ್ತು ತಂಡದ ಗೆಲುವಿಗೆ ಶತಕ ಸಮರ್ಪಿಸುವ ಬಗ್ಗೆ ಅವರು ಮಾತನಾಡಿದರು.

2025-10-31

10 ವರ್ಷಗಳ ಕಾಲ ರಕ್ಷಣಾ ಕ್ಷೇತ್ರದಲ್ಲಿ ಸಹಕಾರ: ಭಾರತ-ಅಮೆರಿಕ ಸಹಿ
Trending
10 ವರ್ಷಗಳ ಕಾಲ ರಕ್ಷಣಾ ಕ್ಷೇತ್ರದಲ್ಲಿ ಸಹಕಾರ: ಭಾರತ-ಅಮೆರಿಕ ಸಹಿ

ಕೌಲಾಲಂಪುರದಲ್ಲಿ ನಡೆದ ಸಭೆಯಲ್ಲಿ 10 ವರ್ಷಗಳ ಕಾಲ ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ನೀಡುವ ಒಪ್ಪಂದಕ್ಕೆ ಭಾರತ-ಅಮೆರಿಕ ಸಹಿ ಹಾಕಿವೆ.

2025-10-31

ಕಳ್ಳ ಕಾಕರ ಅಡ್ಡೆಯಾದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇ
Breaking News
ಕಳ್ಳ ಕಾಕರ ಅಡ್ಡೆಯಾದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇ

ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಅಪಘಾತಗಳ ಜೊತೆಗೆ ಅಪರಾಧಗಳ ತಾಣವಾಗಿದೆ. ಸರ್ವೀಸ್ ರಸ್ತೆ ಕಾಮಗಾರಿ ಅಪೂರ್ಣ ಮತ್ತು ಅವೈಜ್ಞಾನಿಕವಾಗಿದ್ದು, ಸಿಸಿ ಕ್ಯಾಮೆರಾ, ಬೀದಿ ದೀಪ, ಪೊಲೀಸ್ ಗಸ್ತು ಇಲ್ಲದಿರುವುದರಿಂದ ಕಳ್ಳತನ & ದರೋಡೆಗಳು ಹೆಚ್ಚಿವೆ. ವಾಹನ ಸವಾರರ ಸುರಕ್ಷತೆ ದೊಡ್ಡ ಸವಾಲಾಗಿದ್ದು, ಪೊಲೀಸರನ್ನೇ ದೋಚಿದ ಘಟನೆ ಆತಂಕ ಮೂಡಿಸಿದೆ.

2025-10-31

ಈ ಊರಲ್ಲಿ ದೇಗುಲದ ರಾಜಗೋಪುರಕ್ಕಿಂತ ಎತ್ತರದ ಮನೆಗಳಿಲ್ಲ
Trending
ಈ ಊರಲ್ಲಿ ದೇಗುಲದ ರಾಜಗೋಪುರಕ್ಕಿಂತ ಎತ್ತರದ ಮನೆಗಳಿಲ್ಲ

ಊರಿನ ದೇವರ ಮೇಲಿನ ಭಕ್ತಿ ಪೂರ್ವಕ ಆಚರಣೆಯೊಂದು ತಲೆ ತಲಾಂತರದಿಂದ ನಡೆದು ಬಂದಿದ್ದು, ಇದನ್ನು ಇಂದಿಗೂ ಈ ಜನರು ಪಾಲಿಸಿಕೊಂಡು ಬಂದಿದ್ದಾರೆ.

2025-10-31

ಆರ್ಥಿಕ ಸಂಕಷ್ಟದಲ್ಲಿ ಹುಬ್ಬಳ್ಳಿ-ಧಾರವಾಡ ಪಾಲಿಕೆ
Breaking News
ಆರ್ಥಿಕ ಸಂಕಷ್ಟದಲ್ಲಿ ಹುಬ್ಬಳ್ಳಿ-ಧಾರವಾಡ ಪಾಲಿಕೆ

ಕರ್ನಾಟಕದ ಅಂತ್ಯತ ಹಳೆಯ ಮಹಾನಗರ ಪಾಲಿಕೆಯಲ್ಲಿ ಒಂದಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯ ಸರ್ಕಾರ ಪಾಲಿಕೆಗೆ ನೀಡಬೇಕಾದ ಅನುದಾನವನ್ನು ಕೂಡಲೇ ನೀಡಬೇಕು ಅಂತ ಬಿಜೆಪಿ ಆಡಳಿತವಿರುವ ಪಾಲಿಕೆ ಸದಸ್ಯರು ಆಗ್ರಹಿಸುತ್ತಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

2025-10-31

IND vs AUS 2ನೇ ಟಿ20: 17 ವರ್ಷಗಳ ಬಳಿಕ ಸೋತ ಟೀಮ್ ಇಂಡಿಯಾ
Sports
IND vs AUS 2ನೇ ಟಿ20: 17 ವರ್ಷಗಳ ಬಳಿಕ ಸೋತ ಟೀಮ್ ಇಂಡಿಯಾ

ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲನುಭವಿಸಿದ್ದು 5 ಪಂದ್ಯಗಳ ಸರಣಿಯಲ್ಲಿ 1-0 ದಿಂದ ಹಿನ್ನಡೆ ಸಾಧಿಸಿದೆ

2025-10-31

IND vs AUS, 2ನೇ ಟಿ20: ಆಸೀಸ್ ಬೌಲಿಂಗ್ ದಾಳಿಗೆ ಭಾರತ ತತ್ತರ
Sports
IND vs AUS, 2ನೇ ಟಿ20: ಆಸೀಸ್ ಬೌಲಿಂಗ್ ದಾಳಿಗೆ ಭಾರತ ತತ್ತರ

ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿತು.

2025-10-31

ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ವಶಕ್ಕೆ
Breaking News
ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ವಶಕ್ಕೆ

ಪ್ರಚೋದನಕಾರಿ ಪೋಸ್ಟ್ ಶೇರ್ ಮಾಡಿದ ಆರೋಪದ ಮೇಲೆ ಮಂಗಳೂರಿನಲ್ಲಿ ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ FIR ದಾಖಲಾಗಿದೆ. ಪ್ರಕರಣ ಸಂಬಂಧ ಶರಣ್ ಪಂಪ್ವೆಲ್ ವಶಕ್ಕೆ ಪಡೆದ ಪೊಲೀಸರು, ಮುಚ್ಚಳಿಕೆ ಬರೆಸಿಕೊಂಡು ಬಿಟ್ಟು ಕಳುಹಿಸುವ ಸಾಧ್ಯತೆ ಇದೆ. ಮತ್ತೊಂದೆಡೆ ಪೊಲೀಸರ ಕ್ರಮದ ಬಗ್ಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಿಡಿ ಕಾರಿದ್ದಾರೆ.

2025-10-31

ಉಕ್ರೇನ್ನ ವಿದ್ಯುತ್ ಕೇಂದ್ರಗಳ ಮೇಲೆ ರಷ್ಯಾ ಬೃಹತ್ ದಾಳಿ
Breaking News
ಉಕ್ರೇನ್ನ ವಿದ್ಯುತ್ ಕೇಂದ್ರಗಳ ಮೇಲೆ ರಷ್ಯಾ ಬೃಹತ್ ದಾಳಿ

ದಾಳಿಯಲ್ಲಿ ರಷ್ಯಾ 653 ಡ್ರೋನ್ಗಳು ಮತ್ತು ವಿವಿಧ ರೀತಿಯ 52 ಕ್ಷಿಪಣಿಗಳನ್ನು ಉಡಾಯಿಸಿದೆ. ಅವುಗಳಲ್ಲಿ 623 ವೈಮಾನಿಕ ದಾಳಿಗಳನ್ನು ತಡೆಹಿಡಿಯಲಾಗಿದೆ.

2025-10-31

ಕರ್ನಾಟಕ ರಾಜ್ಯೋತ್ಸವದಂದೇ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್
Breaking News
ಕರ್ನಾಟಕ ರಾಜ್ಯೋತ್ಸವದಂದೇ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್

ನವೆಂಬರ್ 1ರಿಂದ ಹಳದಿ ಮಾರ್ಗದಲ್ಲಿ 5ನೇ ಮೆಟ್ರೋ ರೈಲು ಸೇವೆ ಆರಂಭಿಸಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಆ ಮೂಲಕ ಕರ್ನಾಟಕ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಯೆಲ್ಲೋ ಲೈನ್ನಲ್ಲಿ ಪ್ರತಿದಿನ 5 ಮೆಟ್ರೋ ಸಂಚರಿಸಲಿವೆ.

2025-10-31

ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ - ಡೊನಾಲ್ಡ್ ಟ್ರಂಪ್ ಭೇಟಿ
Trending
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ - ಡೊನಾಲ್ಡ್ ಟ್ರಂಪ್ ಭೇಟಿ

ಚೀನಾ ಅಧ್ಯಕ್ಷರೊಂದಿಗಿನ ತಮ್ಮ ಭೇಟಿ ಅತ್ಯುತ್ತಮವಾಗಿತ್ತು ಎಂದಿರುವ ಟ್ರಂಪ್, ಚೀನಾದ ಮೇಲಿನ ಒಟ್ಟು ಸುಂಕದ ದರವನ್ನು ಶೇ 57 ರಿಂದ 47ಕ್ಕೆ ಇಳಿಸುವುದಾಗಿ ತಿಳಿಸಿದ್ದಾರೆ.

2025-10-31

17 ವರ್ಷಗಳ ನಂತರ ಮೆಲ್ಬೋರ್ನ್ನಲ್ಲಿ ಸೋತ ಭಾರತ
Sports
17 ವರ್ಷಗಳ ನಂತರ ಮೆಲ್ಬೋರ್ನ್ನಲ್ಲಿ ಸೋತ ಭಾರತ

India vs Australia T20: ಮೆಲ್ಬೋರ್ನ್ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ನಾಲ್ಕು ವಿಕೆಟ್ಗಳ ಸೋಲು ಕಂಡಿದೆ. ಭಾರತದ ಬ್ಯಾಟಿಂಗ್ ವೈಫಲ್ಯದಿಂದಾಗಿ ಕೇವಲ 125 ರನ್ಗಳಿಗೆ ಆಲೌಟ್ ಆಗಿ, ಸುಲಭ ಗುರಿ ನೀಡಿತು. ಈ ಸೋಲು ಮೆಲ್ಬೋರ್ನ್ನಲ್ಲಿ ಭಾರತದ 17 ವರ್ಷಗಳ ಅಜೇಯ ದಾಖಲೆಯನ್ನು ಮುರಿಯಿತು. ಮುಂದಿನ ಟಿ20 ವಿಶ್ವಕಪ್ ಸಿದ್ಧತೆಗೆ ಇದು ಹಿನ್ನಡೆಯಾಗಿದೆ. ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ.

2025-10-31

ರಷ್ಯಾ ಬೆನ್ನಲ್ಲೇ ಪರಮಾಣು ಚಾಲಿತ ಕ್ಷಿಪಣಿ ಪರೀಕ್ಷೆಗೆ ಮುಂದಾದ US
Breaking News
ರಷ್ಯಾ ಬೆನ್ನಲ್ಲೇ ಪರಮಾಣು ಚಾಲಿತ ಕ್ಷಿಪಣಿ ಪರೀಕ್ಷೆಗೆ ಮುಂದಾದ US

ಮಾಸ್ಕೋ ಪರಮಾಣು ಚಾಲಿತ ಡ್ರೋನ್ ಪರೀಕ್ಷೆ ಬೆನ್ನಲ್ಲೇ ಟ್ರಂಪ್ ಈ ಬಗೆಗಿನ ಪರೀಕ್ಷೆ ನಡೆಸುವಂತೆ ರಕ್ಷಣಾ ಇಲಾಖೆಗೆ ಸೂಚಿಸಿದ್ದಾರೆ.

2025-10-31

ಸಿಡೆನ್ಸಿ ಲೀಗಲ್ ಇಂಡಸ್ಟ್ರಿ ಇಂಟರ್ಫೇಸ್ ಸಮಿಟ್ 2025 ಸಂಪನ್ನ
Breaking News
ಸಿಡೆನ್ಸಿ ಲೀಗಲ್ ಇಂಡಸ್ಟ್ರಿ ಇಂಟರ್ಫೇಸ್ ಸಮಿಟ್ 2025 ಸಂಪನ್ನ

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲಾ ವತಿಯಿಂದ ಪ್ರೆಸಿಡೆನ್ಸಿ ಲೀಗಲ್ ಇಂಡಸ್ಟ್ರಿ ಇಂಟರ್ಫೇಸ್ ಸಮಿಟ್ 2025 ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲ ಉದಯ ಹೊಳ್ಳ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉದಯ ಹೊಳ್ಳಾ, ರಾಮಸ್ವಾಮಿ ಮತ್ತು ಡಾ. ಸರೋಜ್ ಶರ್ಮಾ ಅವರನ್ನು ವಿಶ್ವವಿದ್ಯಾಲಯದ ಚಾನ್ಸಲರ್ ಡಾ. ನಿಸ್ಸಾರ್ ಅಹಮದ್ ಸನ್ಮಾನಿಸಿದರು.

2025-10-31

ಮೆಟ್ರೋ ಹಳದಿ ಮಾರ್ಗದಲ್ಲಿ ನಾಳೆಯಿಂದ ಐದನೇ ರೈಲು
Breaking News
ಮೆಟ್ರೋ ಹಳದಿ ಮಾರ್ಗದಲ್ಲಿ ನಾಳೆಯಿಂದ ಐದನೇ ರೈಲು

ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಮತ್ತೊಂದು ರೈಲು ಸೇವೆ ಆರಂಭವಾಗಲಿದೆ. ಈ ಮೂಲಕ ಪ್ರತಿ 15 ನಿಮಿಷಕ್ಕೊಂದು ಈ ಮಾರ್ಗದಲ್ಲಿ ರೈಲು ಸೇವೆ ಲಭ್ಯವಾಗಲಿದೆ.

2025-10-31

ಎರಡು ಬಾರಿ ಕ್ಯಾನ್ಸರ್ ಬಂದರೂ ಮುಂದುವರಿದ ಸಮಾಜಸೇವೆ
Trending
ಎರಡು ಬಾರಿ ಕ್ಯಾನ್ಸರ್ ಬಂದರೂ ಮುಂದುವರಿದ ಸಮಾಜಸೇವೆ

ಎರಡು ಬಾರಿ ಕ್ಯಾನ್ಸರ್ ಬಂದರೂ ಕೊರಿನಾ ರಸ್ಕಿನ್ ಅವರ ಸಮಾಜ ಸೇವೆ ಮುಂದುವರೆದಿದೆ. ಹೀಗಾಗಿ, ಇವರಿಗೆ 2025ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

2025-10-31

ಕನೇರಿ ಸ್ವಾಮೀಜಿ ಮತ್ತೊಂದು ಶಾಕ್ ಕೊಟ್ಟ ಕೋರ್ಟ್
Breaking News
ಕನೇರಿ ಸ್ವಾಮೀಜಿ ಮತ್ತೊಂದು ಶಾಕ್ ಕೊಟ್ಟ ಕೋರ್ಟ್

ಲಿಂಗಾಯತ ಸ್ವಾಮೀಜಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ, ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಸ್ವಾಮೀಜಿಗಳ ಕೀಳುಮಟ್ಟದ ಹೇಳಿಕೆಗೆ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಮೌನವಾಗಿ ಧ್ಯಾನ ಮಾಡುವಂತೆ ಸಲಹೆ ನೀಡಿ ಹೈಕೋರ್ಟ್ ಆದೇಶವನ್ನೂ ಎತ್ತಿಹಿಡಿದಿದೆ. ಇದರ ಬೆನ್ನಲ್ಲೇ ಇದೀಗ ಲಿಂಗಾಯತ ಮಠಗಳ ಒಕ್ಕೂಟ ಸಲ್ಲಿಸಿದ ದೂರಿನ ಮೇರೆಗೆ ಕೋರ್ಟ್, ಸ್ವಾಮೀಜಿ ಖಡಕ್ ಸೂಚನೆ ನೋಡಿದೆ.

2025-10-31

ಅಭಿಷೇಕ್ ಶರ್ಮಾ ಆರ್ಭಟಕ್ಕೆ ಮೊಹಮ್ಮದ್ ರಿಜ್ವಾನ್ ದಾಖಲೆ ಉಡೀಸ್
Sports
ಅಭಿಷೇಕ್ ಶರ್ಮಾ ಆರ್ಭಟಕ್ಕೆ ಮೊಹಮ್ಮದ್ ರಿಜ್ವಾನ್ ದಾಖಲೆ ಉಡೀಸ್

India vs Australia 2nd T20I: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ, ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ 68 ರನ್ಗಳ ಇನ್ನಿಂಗ್ಸ್ ಆಡಿದರು, ಇದರಲ್ಲಿ ಅವರು 2 ಸಿಕ್ಸರ್ಗಳನ್ನು ಬಾರಿಸುವಲ್ಲಿ ಯಶಸ್ವಿಯಾದರು. ಈ ಸಿಕ್ಸ್ನೊಂದಿಗೆ ಇವರು ನೂತನ ದಾಖಲೆ ಬರೆದಿದ್ದಾರೆ.

2025-10-31

ಜಮ್ಮು ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ರಾಜ್ಯ ಸ್ಥಾನಮಾನ
Trending
ಜಮ್ಮು ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ರಾಜ್ಯ ಸ್ಥಾನಮಾನ

ಜಮ್ಮು ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ರಾಜ್ಯ ಸ್ಥಾನಮಾನ ಸಿಗಲಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ನಾ ತಿಳಿಸಿದರು.

2025-10-31

ಸೌತ್ ಆಫ್ರಿಕಾ ವಿರುದ್ಧ ಕಣಕ್ಕಿಳಿದ ರಿಷಭ್
Sports
ಸೌತ್ ಆಫ್ರಿಕಾ ವಿರುದ್ಧ ಕಣಕ್ಕಿಳಿದ ರಿಷಭ್

India A vs South Africa A: ಭಾರತ ಎ ಮತ್ತು ಸೌತ್ ಆಫ್ರಿಕಾ ಎ ತಂಡಗಳ ನಡುವೆ 4 ದಿನಗಳ 2 ಟೆಸ್ಟ್ ಪಂದ್ಯಗಳು ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯ ಮ್ಯಾಚ್ ಶುರುವಾಗಿದ್ದು, ಎರಡನೇ ಪಂದ್ಯವು ನವೆಂಬರ್ 6 ರಂದು ಆರಂಭವಾಗಲಿದೆ. ಇದಾದ ಬಳಿಕ ಉಭಯ ತಂಡಗಳ ನಡುವೆ ಏಕದಿನ ಸರಣಿ ಕೂಡ ನಡೆಯಲಿದೆ.

2025-10-30

ಭಾರತ vs ಆಸ್ಟ್ರೇಲಿಯಾ 2ನೇ ಟಿ20 ಪಂದ್ಯ ಯಾವಾಗ
Sports
ಭಾರತ vs ಆಸ್ಟ್ರೇಲಿಯಾ 2ನೇ ಟಿ20 ಪಂದ್ಯ ಯಾವಾಗ

India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಟಿ20 ಸರಣಿ ಶುರುವಾಗಿದೆ. ಈ ಸರಣಿಯ ಮೊದಲ ಮ್ಯಾಚ್ ಮಳೆಗೆ ಆಹುತಿಯಾಗಿದೆ. ಇದೀಗ ಉಭಯ ತಂಡಗಳು ದ್ವಿತೀಯ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಅತ್ತ ಮೊದಲ ಪಂದ್ಯ ರದ್ದಾದ ಕಾರಣ ಈ ಸರಣಿಯನ್ನು ಗೆಲ್ಲಲು 3 ಮ್ಯಾಚ್ಗಳಲ್ಲಿ ಜಯ ಸಾಧಿಸಲೇಬೇಕು.

2025-10-30

ಶ್ರೇಯಸ್ ಅಯ್ಯರ್ ಗಾಯದಿಂದಾಗಿ ಟೀಮ್ ಇಂಡಿಯಾಗೆ ಹಿನ್ನಡೆ
Sports
ಶ್ರೇಯಸ್ ಅಯ್ಯರ್ ಗಾಯದಿಂದಾಗಿ ಟೀಮ್ ಇಂಡಿಯಾಗೆ ಹಿನ್ನಡೆ

Shreyas Iyer Health Update: ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಶ್ರೇಯಸ್ ಅಯ್ಯರ್ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಅವರನ್ನು ಸಿಡ್ನಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ವೈದ್ಯರ ಮೇಲ್ವಿಚಾರಣೆಯಲ್ಲಿರುವ ಅಯ್ಯರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಹೀಗಾಗಿ ಇನ್ನೊಂದು ವಾರದಲ್ಲಿ ಅವರು ಭಾರತಕ್ಕೆ ಮರಳುವ ಸಾಧ್ಯತೆಯಿದೆ.

2025-10-30

ಅಂತರದಲ್ಲಿ ಸಚಿನ್ ವಿಶ್ವ ದಾಖಲೆ ಅಳಿಸಿ ಹಾಕಿದ ರೋಹಿತ್ ಶರ್ಮಾ
Sports
ಅಂತರದಲ್ಲಿ ಸಚಿನ್ ವಿಶ್ವ ದಾಖಲೆ ಅಳಿಸಿ ಹಾಕಿದ ರೋಹಿತ್ ಶರ್ಮಾ

Rohit Sharma World Record: ಐಸಿಸಿ ಪ್ರಕಟಿಸಿರುವ ಒಡಿಐ ಬ್ಯಾಟರ್ಗಳ ನೂತನ ರ್ಯಾಂಕಿಂಗ್ನಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಬಾರಿ ಮೂರನೇ ಸ್ಥಾನದಲ್ಲಿದ್ದ ಹಿಟ್ಮ್ಯಾನ್ ಈ ಬಾರಿ ಶುಭ್ಮನ್ ಗಿಲ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದಿದ್ದಾರೆ.

2025-10-30

ಸಿಎಂ ಕ್ಷೇತ್ರ ವರುಣಾದಲ್ಲೇ ವಿದ್ಯುತ್ ಬಿಲ್ ಕಟ್ಟಿಲ್ಲವೆಂದು ವೃದ್ಧೆಯ ಮೇಲೆ
Politics
ಸಿಎಂ ಕ್ಷೇತ್ರ ವರುಣಾದಲ್ಲೇ ವಿದ್ಯುತ್ ಬಿಲ್ ಕಟ್ಟಿಲ್ಲವೆಂದು ವೃದ್ಧೆಯ ಮೇಲೆ

ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರ ವರುಣಾದಲ್ಲೇ ಚೆಸ್ಕಾಂ ಅಧಿಕಾರಿಗಳು ಅಂಧ ವೃದ್ಧೆಯ ಮೇಲೆ ದರ್ಪ ತೋರಿದ್ದಾರೆ. ಭಾಗ್ಯಜ್ಯೋತಿ ಯೋಜನೆ ಫಲಾನುಭವಿ ವೃದ್ಧೆಗೆ ತಪ್ಪಾಗಿ ವಿದ್ಯುತ್ ಬಿಲ್ ನೀಡಿದ ಚೆಸ್ಕಾಂ ಸಿಬ್ಬಂದಿ, ಬಿಲ್ ಪಾವತಿ ಮಾಡಿಲ್ಲವೆಂದು ಫ್ಯೂಸ್ ತೆಗೆಯಲು ಯತ್ನಿಸಿದ್ದಾರೆ. ಇದಕ್ಕೆ ಪ್ರತಿರೋಧ ತೋರಿದಾಗ ವೃದ್ಧೆಯನ್ನು ತಳ್ಳಾಡಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

2025-10-30

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy