ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮಟ್ಟೂರು ತಾಂಡಾದಲ್ಲಿ ಕೌಟುಂಬಿಕ ಕಲಹದ ವಿಚಾರಣೆಗೆ ತೆರಳಿದ್ದ ಎಎಸ್ಐ ಮತ್ತು ಪಿಎಸ್ಐ ಮೇಲೆ ದಂಪತಿ ಹಲ್ಲೆ ನಡೆಸಿದ್ದಾರೆ. ವಿಚಾರಣೆಗೆ ಬಂದ ಪೊಲೀಸರನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರೂ ಅಧಿಕಾರಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2025-11-12
ಅನಾಥ ಮಕ್ಕಳ ರಕ್ಷಣೆ ದೃಷ್ಟಿಯಿಂದ ಬೆಂಗಳೂರು ನಗರ ಜಿಲ್ಲಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಮ್ಮಿಕೊಂಡಿರುವ ಮಹತ್ವದ ಯೋಜನೆ ‘ಮಮತೆಯ ತೊಟ್ಟಿಲು’ ಒಂದು ವರ್ಷ ಪೂರೈಸಿದೆ. ಮತ್ತೊಂದೆಡೆ, ರಾಜ್ಯದಲ್ಲಿ ನವಜಾತ ಶಿಶುಗಳನ್ನು ಕಸದ ತೊಟ್ಟಿಗಳಲ್ಲಿ, ಚರಂಡಿಗಳಲ್ಲಿ ಬಿಟ್ಟು ಹೋಗುವ ಪ್ರಕ್ರಿಯೆಯೂ ಹೆಚ್ಚಾಗಿದೆ. ಹೀಗಾಗಿ ‘ಮಮತೆಯ ತೊಟ್ಟಿಲು’ ಯೋಜನೆಯನ್ನು ಬಳಸಿಕೊಳ್ಳುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮನವಿ ಮಾಡಿದೆ. ಏನಿದು ಯೋಜನೆ? ಬೆಂಗಳೂರಿನಲ್ಲಿ ಎಲ್ಲೆಲ್ಲಿ ‘ಮಮತೆಯ ತೊಟ್ಟಿಲು’ ಇವೆ ಎಂಬ ಮಾಹಿತಿ ಇಲ್ಲಿದೆ.
2025-11-12
Ranji Trophy 2025: ಕರ್ನಾಟಕ ತಂಡವು ಈ ಬಾರಿಯ ರಣಜಿ ಟೂರ್ನಿಯಲ್ಲಿ ಈವರೆಗೆ 4 ಪಂದ್ಯಗಳನ್ನಾಡಿದೆ. ಈ ನಾಲ್ಕು ಮ್ಯಾಚ್ಗಳಲ್ಲಿ ಕೇರಳ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದರೆ, ಗೋವಾ, ಸೌರಾಷ್ಟ್ರ ಹಾಗೂ ಮಹಾರಾಷ್ಟ್ರ ವಿರುದ್ಧದ ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಇನ್ನು ತನ್ನ ಮುಂದಿನ ಪಂದ್ಯದಲ್ಲಿ ಚಂಡೀಗಢ್ ತಂಡವನ್ನು ಎದುರಿಸಲಿದೆ.
2025-11-12
Pakistan vs Sri Lanka, 1st ODI: 300 ರನ್ಗಳ ಕಠಿಣ ಗುರಿ ಪಡೆದ ಶ್ರೀಲಂಕಾ ತಂಡವು 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 293 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಪಾಕಿಸ್ತಾನ್ ತಂಡವು 6 ರನ್ಗಳ ರೋಚಕ ಜಯ ಸಾಧಿಸಿದೆ. ಇದು ಕಳೆದ 36 ವರ್ಷಗಳಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ್ ತಂಡ ಸಾಧಿಸಿದ ರೋಚಕ ಗೆಲುವು.
2025-11-12
India vs South Africa Test Series: ಭಾರತ ಮತ್ತು ಸೌತ್ ಆಫ್ರಿಕಾ ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗೆ 44 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ 16 ಪಂದ್ಯಗಳನ್ನು. ಅತ್ತ ಸೌತ್ ಆಫ್ರಿಕಾ ತಂಡ 18 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು 10 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ.
2025-11-12
ಧರ್ಮಸ್ಥಳ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡದ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ರಾಜ್ಯ ಹೈಕೋರ್ಟ್ ತೆರವು ಮಾಡಿದೆ.
2025-11-12
rajasthan royals, chennai super kings, ravindra jadeja, sanju samson, sam curran, csk retained players 2026, rr retained players 2026, kannada cricket news, cricket news in kannada, ರವೀಂದ್ರ ಜಡೇಜಾ, ಸ್ಯಾಮ್ ಕರನ್, ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಐಪಿಎಲ್ 2026.
2025-11-12
ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಮಕ್ಕಳನ್ನು ಬಿಟ್ಟು ಇನ್ನುಳಿದ ತರಗತಿಗಳ ಸ್ಕೌಟ್ಸ್, ಗೈಡ್ಸ್, ರೋವರ್ ಮತ್ತು ರೇಂಜರ್ಗಳು ಸೇರಿ 5 ಸಾವಿರಕ್ಕೂ ಅಧಿಕ ಮಕ್ಕಳು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
2025-11-12
ಧರ್ಮಸ್ಥಳ ತಲೆಬುರುಡೆ ಪ್ರಕರಣ ಸಂಬಂಧ ಎಫ್ಐಆರ್ 39/2025ರ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿದೆ. ಹೀಗಾಗಿ ಎಸ್ಐಟಿ ವಿಚಾರಣೆ ಮುಂದುವರಿಯಲಿದ್ದು,ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಪ್ರಮುಖರು ಮತ್ತೆ ತನಿಖೆ ಎದುರಿಸಬೇಕಿದೆ. ಮ್ಯಾಜಿಸ್ಟ್ರೇಟ್ ಅನುಮತಿ ಪಡೆದೇ ತನಿಖೆ ನಡೆಯುತ್ತಿದೆ ಎಂದು ಎಸ್ಐಟಿ ವಾದಿಸಿತ್ತು.
2025-11-12
ಮಂಗಳೂರಿನ ಗೋಡಂಬಿ ಉದ್ಯಮಕ್ಕೆ ನೂರು ವರ್ಷ ತುಂಬುತ್ತಿದ್ದು, 'ಮಂಗಳೂರು ಬ್ರ್ಯಾಂಡ್'ಗೆ ಈಗಲೂ ವಿಶೇಷ ಬೇಡಿಕೆ ಇದೆ.
2025-11-12
ಶರಾವತಿ ಕಣಿವೆ ಉಳಿಸಿ ಸಮಿತಿ ಮಾಧ್ಯಮಗೋಷ್ಟಿ ನಡೆಸಿದ್ದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
2025-11-12
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟೋರಿಯಸ್ ರೌಡಿಗಳು, ಉಗ್ರಗಾಮಿಗಳು ಖುಲ್ಲಂಖುಲ್ಲಾ ಮೊಬೈಲ್ ಬಳಕೆ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಆದರೆ ಮಂಗಳೂರಿನ ಕಾರಾಗೃಹದ ಕತೆ ಬೇರೆಯೇ ಆಗಿದೆ. ಇಲ್ಲಿ ಜೈಲಿನ ಹೊರಗೆ ಓಡಾಡುವವರೂ ಮೊಬೈಲ್ ಫೋನ್ ಬಳಕೆ ಮಾಡದಂತಹ ಪರಿಸ್ಥಿತಿ ಉಂಟಾಗಿದ್ದು ಈ ವಿಚಾರ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ.
2025-11-12
ಉಪೇಂದ್ರ-ಪ್ರಿಯಾಂಕಾ ದಂಪತಿಯ ಮೊಬೈಲ್ ಫೋನ್ ಹ್ಯಾಕ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
2025-11-12
ಕಾದಾಟದಲ್ಲಿ ದಂತ ಕಳೆದುಕೊಂಡಿರುವ ಭೀಮ, ಜಗಬೋರನಹಳ್ಳಿಯ ಸಮೀಪದ ಚಲ್ಲೇನಹಳ್ಳಿ ಕಾಫಿತೋಟದಲ್ಲಿ ಕಾಣಿಸಿಕೊಂಡು ಜನರಲ್ಲಿ ಮತ್ತೆ ಆತಂಕ ಸೃಷ್ಟಿಸಿದ್ದಾನೆ.
2025-11-12
ಬೆಂಗಳೂರಿನಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಪಾಕಿಸ್ತಾನ ಮತ್ತು ಚೀನಾ ಪ್ರಜೆಗಳ ಸ್ಥಿರ ಆಸ್ತಿಗಳು ಪತ್ತೆಯಾಗಿವೆ. ಎನಿಮಿ ಪ್ರಾಪರ್ಟೀಸ್ ಕಾಯ್ದೆ ಅಡಿ ಇವುಗಳನ್ನು ಗುರುತಿಸಲಾಗಿದ್ದು, ರಾಜಭವನ ರಸ್ತೆ ಸೇರಿ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಈ ಆಸ್ತಿಗಳಿವೆ. ಸರ್ಕಾರವು ಇವುಗಳ ಮೌಲ್ಯಮಾಪನ ಪೂರ್ಣಗೊಳಿಸಿ, ಹರಾಜು ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆಸಿದೆ.
2025-11-12
ಗಾಯಕಿ ಪಲಕ್ ಮುಚ್ಚಲ್ ಅವರ ಕಂಠ ಎಷ್ಟು ಸುಮಧುರ ಆಗಿದೆಯೋ ಅವರ ಹೃದಯವಂತಿಕೆ ಕೂಡ ಅಷ್ಟೇ ವಿಶಾಲ. ಬಾಲ್ಯದಿಂದಲೂ ಜನಪರ ಕಾರ್ಯ ಮಾಡುತ್ತ ಬಂದಿರುವ ಅವರ ಹೆಸರು ಈಗ ಗಿನ್ನೆಸ್ ಹಾಗೂ ಲಿಮ್ಕಾ ಪುಟ ಸೇರಿದೆ. ತಮ್ಮ ಖರ್ಚಿನಿಂದ ಶಸ್ತ್ರಚಿಕಿತ್ಸೆ ಮಾಡಿಸಿ ಈವರೆಗೂ 3800 ಮಕ್ಕಳ ಜೀವವನ್ನು ಪಲಕ್ ಮುಚ್ಚಲ್ ಅವರು ಉಳಿಸಿದ್ದಾರೆ.
2025-11-12
ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕ್ರಿಕೆಟ್ನ ಗತವೈಭವ ಮರಳಿಸುವುದು ನಮ್ಮ ಗುರಿ ಎಂದು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.
2025-11-12
ಕಲಬೆರಕೆ ತುಪ್ಪ ಪೂರೈಕೆದಾರರಿಂದ ಈ ಹಣ ಲಂಚ ರೂಪವಾಗಿ ಪಡೆದಿರುವುದು ಎಸ್ಐಟಿ ತನಿಖೆಯಲ್ಲಿ ಬಯಲಾಗಿದೆ.
2025-11-12
ಸೃಜನ್ ಲೋಕೇಶ್ ಅವರು ನಿರ್ದೇಶನ ಮಾಡಿರುವ ಚೊಚ್ಚಲ ಸಿನಿಮಾ ‘ಜಿಎಸ್ಟಿ’ ಬಿಡುಗಡೆಗೆ ಸಜ್ಜಾಗಿದೆ. ಉಪೇಂದ್ರ ಅವರು ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ. ಚಿತ್ರತಂಡ ಸುದ್ದಿಗೋಷ್ಠಿ ಮಾಡಿದೆ. ಇದು ಹಾರರ್ ಸಿನಿಮಾ ಆದರೂ ಕೂಡ ನಗು ಇರಲಿದೆ ಎಂದು ಸೃಜನ್ ಲೋಕೇಶ್ ಅವರು ಹೇಳಿದ್ದಾರೆ.
2025-11-12
ಜಂಗಲ್ ರಾಜ್ ವಿರುದ್ಧ 1ನೇ ಗುಂಡು, 2ನೇ ಗುಂಡು ಭಯದ ವಿರುದ್ಧ, ಮೂರನೇ ಗುಂಡು ಭ್ರಷ್ಟಾಚಾರದ ವಿರುದ್ಧ, ನಾಲ್ಕನೇ ಗುಂಡು ದಲಿತ ದಬ್ಬಾಳಿಕೆಯ ವಿರುದ್ಧ, ಐದನೇ ಗುಂಡು ಅಪರಾಧದ ವಿರುದ್ಧ. ಆರನೇಯದ್ದು ದ್ವೇಷದ ವಿರುದ್ಧ.
2025-11-12
ODI Super League Set for 2028 Return: ಏಕದಿನ ಕ್ರಿಕೆಟ್ಗೆ ಮರುಜೀವ ನೀಡಲು ಐಸಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. 2023ರ ವಿಶ್ವಕಪ್ ನಂತರ ಸ್ಥಗಿತಗೊಂಡಿದ್ದ ಏಕದಿನ ಸೂಪರ್ ಲೀಗ್ ಅನ್ನು 2028ರಿಂದ ಪುನರಾರಂಭಿಸಲು ಸಿದ್ಧತೆ ನಡೆಸಿದೆ. T20 ಅಬ್ಬರದ ನಡುವೆ 50 ಓವರ್ ಸ್ವರೂಪದ ಮಹತ್ವವನ್ನು ಹೆಚ್ಚಿಸುವುದು ಇದರ ಉದ್ದೇಶ. ವಿಶ್ವಕಪ್ ಅರ್ಹತೆ ಹಾಗೂ ಕಡಿಮೆ ಶ್ರೇಯಾಂಕದ ತಂಡಗಳಿಗೆ ಅವಕಾಶ ಕಲ್ಪಿಸುವುದು ಈ ಲೀಗ್ನ ಪ್ರಮುಖ ಗುರಿ.
2025-11-12
ಬಿಹಾರ ಚುನಾವಣಾ ಮತದಾನೋತ್ತರ ಸಮೀಕ್ಷೆಗಳು ಹೊರ ಬಿದ್ದಿರುವ ಹಿನ್ನೆಲೆಯಲ್ಲಿ NDA ನಾಯಕರಲ್ಲಿ ಉತ್ಸಾಹ ಹೆಚ್ಚಿದೆ. ಅದಕ್ಕಾಗಿಯೇ ಅವರು ಈಗಾಗಲೇ ಆಚರಣೆಗೆ ತಯಾರಿ ನಡೆಸುತ್ತಿದ್ದಾರೆ.
2025-11-12
India U19 Tri-Series: ಭಾರತ ಅಂಡರ್-19 'ಎ' ಮತ್ತು 'ಬಿ' ತಂಡಗಳು ನವೆಂಬರ್ 17 ರಿಂದ ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ಅಂಡರ್-19 ತಂಡದೊಂದಿಗೆ ತ್ರಿಕೋನ ಕ್ರಿಕೆಟ್ ಸರಣಿಯನ್ನು ಆಡಲಿವೆ. ಡಬಲ್ ರೌಂಡ್-ರಾಬಿನ್ ಸ್ವರೂಪದಲ್ಲಿ ನಡೆಯುವ ಈ ಸರಣಿಯಲ್ಲಿ ಅಗ್ರ ಎರಡು ತಂಡಗಳು ನವೆಂಬರ್ 30 ರಂದು ಫೈನಲ್ನಲ್ಲಿ ಸೆಣಸಲಿವೆ. ವಿಹಾನ್ ಮಲ್ಹೋತ್ರಾ ಮತ್ತು ಆರನ್ ಜಾರ್ಜ್ ಭಾರತೀಯ ತಂಡಗಳನ್ನು ಮುನ್ನಡೆಸಲಿದ್ದಾರೆ.
2025-11-12
India vs South Africa ODI: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಏಕದಿನ ಸರಣಿಯು ನವೆಂಬರ್ 30 ರಿಂದ ಶುರುವಾಗಲಿದೆ,. ಮೂರು ಪಂದ್ಯಗಳ ಈ ಸರಣಿಯ ಬಳಿಕ ಟೀಮ್ ಇಂಡಿಯಾ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ದೇಶೀಯ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
2025-11-12
IPL 2026 RCB: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿ ಬಿ) ತಂಡವು ಮುಂದಿನ ಸೀಸನ್ನಲ್ಲಿ ಹೊಸ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲಿದೆ. ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ 2ನೇ ತವರು ಮೈದಾನವನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಯಿದೆ.
2025-11-12
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy