ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಗೊಂದಲ ಹಾಗೂ ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶದ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿದರು.
2025-11-15
IPL 2026 Released Players List: ಇಂಡಿಯನ್ ಪ್ರೀಮಿಯರ್ ಲೀಗ್ನ ಮುಂದಿನ ಸೀಸನ್ಗಾಗಿ ಡಿಸೆಂಬರ್ 16 ರಂದು ಮಿನಿ ಹರಾಜು ನಡೆಯಲಿದೆ. ಈ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳು ಕೆಲ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದ್ದಾರೆ. ಹೀಗೆ ಹತ್ತು ತಂಡಗಳಿಂದ ಹೊರಬಿದ್ದ ಆಟಗಾರರ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ...
2025-11-15
ವೃಕ್ಷಮಾತೆ, ಶತಾಯುಷಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರ ಅಂತ್ಯಸಂಸ್ಕಾರವು ಬೆಂಗಳೂರಿನ ಜ್ಞಾನಭಾರತಿ ಕಲಾಗ್ರಾಮದಲ್ಲಿ ನೆರವೇರಿತು.
2025-11-15
Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್-ಭೂಮಿಕಾ ಐದು ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. ಶಕುಂತಲಾ ಕಾರಣದಿಂದ ದೂರವಿದ್ದ ಇವರ ಮಗ ಆಕಾಶ್ಗೆ ಈಗ ತನ್ನ ನಿಜವಾದ ತಂದೆ ಗೌತಮ್ ಎಂದು ಗೊತ್ತಾಗಿದೆ. ಸೂಟ್ಕೇಸ್ನಲ್ಲಿ ಸಿಕ್ಕ ಮದುವೆ ಫೋಟೋದಿಂದ ಆಕಾಶ್ ಸತ್ಯ ಅರಿತಿದ್ದಾನೆ.
2025-11-15
ಕೇಂದ್ರ ಸರ್ಕಾರ 500 ಗಿಗಾ ವ್ಯಾಟ್ನಷ್ಷು ಹಸಿರು ವಿದ್ಯುತ್ ಉತ್ಪಾದನೆ ಗುರಿ ಹೊಂದಿದ್ದು, ಜನಜೀವನ, ಪರಿಸರವನ್ನು ಹಾಳು ಮಾಡುವ ಯೋಜನೆಗಳಿಗೆ ಅನುಮತಿ ನೀಡುವುದು ಅನುಮಾನ ಎಂದು ಬಿ.ವೈ. ರಾಘವೇಂದ್ರ ಹೇಳಿದರು.
2025-11-15
ಮಹೇಶ್ ಬಾಬು-ರಾಜಮೌಳಿ ಅವರ 'ಗ್ಲೋಬ್ಟ್ರಾಟರ್' ಚಿತ್ರದ ನಾಯಕಿ ಪಾತ್ರಕ್ಕೆ ಮೊದಲು ಐಶ್ವರ್ಯಾ ರೈ ಅವರಿಗೆ ಆಫರ್ ನೀಡಲಾಗಿತ್ತು. ಅವರು ನಿರಾಕರಿಸಿದ ಬಳಿಕ ಕಾಜಲ್ ಅಗರ್ವಾಲ್ ಅವರನ್ನು ಪರಿಗಣಿಸಲಾಯಿತು. ಅಂತಿಮವಾಗಿ, ಪ್ರಿಯಾಂಕಾ ಚೋಪ್ರಾ ಮಂದಾಕಿನಿ ಪಾತ್ರಕ್ಕೆ ಆಯ್ಕೆಯಾದರು. ಅವರ ಫಸ್ಟ್ ಲುಕ್ ಭಾರಿ ಪ್ರತಿಕ್ರಿಯೆ ಪಡೆದಿದೆ.
2025-11-15
ಗೀತೆಯನ್ನು ಮಕ್ಕಳು ಅರಿತುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪಠ್ಯದಲ್ಲಿ ಗೀತೆ ಅಳವಡಿಸಬೇಕು ಎಂದು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.
2025-11-15
Karisma Kapoor: ಕಪೂರ್ ಕುಟುಂಬ ಭಾರತೀಯ ಚಿತ್ರರಂಗದ ಶ್ರೀಮಂತ ಕುಟುಂಬಗಳಲ್ಲಿ ಒಂದು.ಈ ಕುಟುಂಬ ಭಾರತೀಯ ಚಿತ್ರರಂಗಕ್ಕೆ ಹಲವಾರು ಸ್ಟಾರ್ ನಟ, ನಟಿಯರನ್ನು ನೀಡಿದೆ. ಅದರಲ್ಲಿ ಕರಿಶ್ಮಾ ಕಪೂರ್ ಸಹ ಒಬ್ಬರು. 90-2000 ದಶಕದಲ್ಲಿ ಬಾಲಿವುಡ್ ಅನ್ನೇ ಆಳಿದ ನಟಿ ಅವರು. ಆದರೆ ಈಗ ಅವರಿಗೆ ಮಗಳ ಶಾಲೆಯ ಶುಲ್ಕ ಕಟ್ಟಲು ಸಹ ಹಣವಿಲ್ಲವಂತೆ.
2025-11-15
ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಪೂಜಾರಿ ಗಾದೆಪ್ಪ ಹಾಗೂ ಉಪಮೇಯರ್ ಆಗಿ ಮುಬಿನಾ. ಬಿ. ಅವರು ಆಯ್ಕೆಯಾಗಿದ್ದಾರೆ.
2025-11-15
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ನವೆಂಬರ್ 30ರೊಳಗೆ ಎಲ್ಲಾ ಬಾಕಿ ವಾಹನ ನೋಂದಣಿ ಅರ್ಜಿಗಳನ್ನು ಇತ್ಯರ್ಥಪಡಿಸಲು ಆರ್ಟಿಓಗಳಿಗೆ ಸೂಚಿಸಿದ್ದಾರೆ. ಅವರು ಬಸ್ಸುಗಳಲ್ಲಿ ತುರ್ತು ನಿರ್ಗಮನ ಬಾಗಿಲು ಕಡ್ಡಾಯಗೊಳಿಸಿ, ಸುರಕ್ಷತೆಗೆ ಆದ್ಯತೆ ನೀಡುವಂತೆ ತಿಳಿಸಿದ್ದಾರೆ. ಅದಲ್ಲದೆ ಅಖಿಲ ಭಾರತ ಪರವಾನಗಿ ಬಸ್ಸುಗಳಿಗೆ ತೆರಿಗೆ ವಿಧಿಸುವ ಮೂಲಕ ಇಲಾಖೆಯ ಆದಾಯ ಗುರಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
2025-11-14
ಅವರಿಬ್ಬರು ಸಪ್ತಪದಿ ತುಳಿದು ಮದುವೆಯಾದವರು. ಹದಿಹರೆಯದ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಆದರೂ ಕೂಡಾ ಆಸ್ತಿಗಾಗಿ ಪತ್ನಿ ಮಾಡಬಾರದ ಕೆಲಸ ಮಾಡಿದ್ದಾಳೆ. ತಾಳಿಕಟ್ಟಿದ ಗಂಡನನ್ನೇ ಗೃಹ ಬಂಧನದಲ್ಲಿಟ್ಟು ಕ್ರೌರ್ಯ ಮೆರೆದಿದ್ದಾಳೆ. ಪತ್ನಿಯ ಕ್ರೂರತೆಗೆ ಪತಿ ಒದ್ದಾಡುವಂತಾಗಿದೆ. ಗದಗ ಬೆಟಗೇರಿ ಬಳಿ ಇಂಥದ್ದೊಂದು ಕೃತ್ಯ ನಡೆದಿದ್ದು, ಕೊನೆಗೂ ಗೃಹಬಂಧನದಿಂದ ಆ ವ್ಯಕ್ತಿ ಬಚಾವಾಗಿದ್ದಾರೆ. ಘಟನೆಯ ಪೂರ್ಣ ವಿವರ ಇಲ್ಲಿದೆ.
2025-11-14
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸುವ ಟೆಕ್ಕಿಗಳಿಗಾಗಿ ಸಂಸ್ಥೆಯೊಂದು ಉಚಿತ ಮೆಟ್ರೋ ಪಾಸ್ ನೀಡಲು ಮುಂದಾಗಿವೆ. ಇದರಿಂದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ದೊರಕಲಿದ್ದು, ಈ ಮೂಲಕ ಸುಮಾರು 2.5 ಲಕ್ಷ ಟೆಕ್ಕಿಗಳು ಕೇವಲ 30-40 ನಿಮಿಷಗಳಲ್ಲಿ ಕಚೇರಿ ತಲುಪಬಹುದು. ಟ್ರಾಫಿಕ್ನಲ್ಲಿ ಸಿಲುಕುವ ನೌಕರರ ಸಮಯವನ್ನು ಉಳಿಸಲು ಇದು ಪರಿಣಾಮಕಾರಿ ಹೆಜ್ಜೆಯಾಗಿದೆ.
2025-11-14
ಬೆಂಗಳೂರಿನ ಐತಿಹಾಸಿಕ ಕಡಲೆಕಾಯಿ ಪರಿಷೆ ಅಂದರೆ ನಗರದ ಹಾಗೂ ಹೊರವಲಯದ ಜನರಿಗೂ ಅಚ್ಚುಮೆಚ್ಚು. ದೊಡ್ಡ ಗಣಪನ ದರ್ಶನ ಪಡೆದು, ಒಂದೆರೆಡು ಸೇರು ಕಡ್ಲೆಕಾಯಿ ಖರೀದಿ ಮಾಡಿ, ಜಾತ್ರೆಯನ್ನು ಸಂಭ್ರಮಿಸಿ ಖುಷಿಪಡುತ್ತಾರೆ. ಈ ವರ್ಷದ ಪರಿಷೆಗೆ ಇದೇ 17 ರಿಂದ ಚಾಲನೆ ಸಿಗಲಿದ್ದು, ನವೆಂಬರ್ 21ರ ವರೆಗೆ ನಡೆಯಲಿದೆ.
2025-11-14
ಕರ್ನಾಟಕದಲ್ಲಿ ವನ್ಯಪ್ರಾಣಿ ಹಾಗೂ ಮಾನವ ಸಂಘರ್ಷ ಹೆಚ್ಚಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಕಡೆಗಳಲ್ಲಿ ಕಿಡಿಗೇಡಿಗಳು ಎಐ ವಿಡಿಯೋಗಳನ್ನು ಹರಿಯಬಿಡುತ್ತಿರುವುದರಿಂದ ಜನ ಸಂಕಷ್ಟಕ್ಕೀಡಾಗುತ್ತಿರುವ ಬಗ್ಗೆಯೂ ವರದಿಯಾಗಿದೆ. ಇದೀಗ ಮಾನವ-ವನ್ಯಪ್ರಾಣಿ ಸಂಘರ್ಷ ತಡೆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಕ್ರಮಕ್ಕೆ ಸೂಚಿಸಿದ್ದಾರೆ.
2025-11-14
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ದಾಖಲೆಯ ಮತದಾನ ಆಗಿದ್ದೇ ಆಗಿದ್ದು, ಫಲಿತಾಂಶದ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿದೆ. ಇದರ ಬೆನ್ನಲ್ಲೇ ಆರ್ಜೆಡಿ ಮತ್ತು ಜೆಡಿಯು ನಾಯಕರ ಮಧ್ಯೆ ಪೋಸ್ಟರ್ ಸಮರ ಶುರುವಾಗಿದ್ದು, ಪರಸ್ಪರ ವ್ಯಂಗ್ಯ ಮಾಡುವ ಮೂಲಕ ಕಾಲೆಳೆಯುತ್ತಿದ್ದಾರೆ. ಮತ ಎಣಿಕೆ ಇಂದು ನಡೆಯುತ್ತಿದ್ದು, ಮಧ್ಯಾಹ್ನದ ವೇಳೆಗೆ ಬಹುತೇಕ ಚಿತ್ರಣ ಸಿಗುವ ನಿರೀಕ್ಷೆ ಇದೆ.
2025-11-14
ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ(Bihar Assembly Election Results)ಕ್ಕೆ ಕ್ಷಣಗಣನೆ ಇದೆ. ಮಹಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮತ ಎಣಿಕೆ ನಿಧಾನಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ದೂರಿದ್ದಾರೆ. ಈ ಬಾರಿ ಬಿಹಾರ ಇತಿಹಾಸದಲ್ಲಿಯೇ ಅತಿ ಹೆಚ್ಚು ಮತದಾನವಾಗಿದೆ ಎಂದು ಅವರು ಹೇಳಿದರು. ಸುಮಾರು 8 ಮಿಲಿಯನ್ ಹೆಚ್ಚಿನ ಮತಗಳು ಚಲಾವಣೆಯಾಗಿವೆ.
2025-11-14
ಒಂದೇ ಯುವತಿಯನ್ನು ಪ್ರೀತಿಸಿದ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಇಬ್ಬರು ಯುವಕರಿಗೆ ಚಾಕು ಇರಿದ ಘಟನೆ ಹುಬ್ಬಳ್ಳಿಯ ಗ್ಲೋಬಲ್ ಕಾಲೇಜು ಬಳಿ ನಡೆದಿದೆ. ಗಾಯಾಳುಗಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಸೇರಿ 7 ಜನರನ್ನು ಬಂಧಿಸಿದ್ದಾರೆ. ನಗರದಲ್ಲಿ ಸಂಚಲನ ಮೂಡಿಸಿದ ಈ ಘಟನೆಯ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
2025-11-14
ಸಚಿವ ರಾಮಲಿಂಗಾ ರೆಡ್ಡಿ ಅವರು ಶಾಂತಿನಗರದಲ್ಲಿ KSRTC ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಶಟಲ್, ಕೇರಂ, ಚೆಸ್ ಆಡುವ ಮೂಲಕ ನೌಕರರನ್ನು ಪ್ರೋತ್ಸಾಹಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದ ಸಿಬ್ಬಂದಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಕ್ರೀಡೆಗಳು ನೌಕರರ ಆರೋಗ್ಯ, ಒತ್ತಡ ನಿವಾರಣೆ ಮತ್ತು ಮನರಂಜನೆಗೆ ಸಹಕಾರಿ ಎಂದು ಸಚಿವರು ಹೇಳಿದರು.
2025-11-14
ಪ್ರಧಾನಿ ಮೋದಿ ನವೆಂಬರ್ 28 ರಂದು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ನಗರದ ರಸ್ತೆ ದುರಸ್ತಿ ಕಾರ್ಯ ವೇಗ ಪಡೆದಿದೆ. ಮಲ್ಪೆ-ಮೊಳಕಾಲ್ಮೂರು ಹೆದ್ದಾರಿ ಕಾಮಗಾರಿಯೂ ಚುರುಕುಗೊಂಡಿದೆ. ಆದರೆ, ಗಣ್ಯರ ಭೇಟಿಗಾಗಿ ಮಾತ್ರ ರಸ್ತೆ ದುರಸ್ತಿ ಮಾಡುವುದನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಮಳೆಯಿಂದ ಹದಗೆಟ್ಟ ಗ್ರಾಮೀಣ ರಸ್ತೆಗಳ ಬಗ್ಗೆ ಜಿಲ್ಲಾಡಳಿತದ ನಿರ್ಲಕ್ಷ್ಯದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
2025-11-14
ಸಾಲುಮರದ ತಿಮ್ಮಕ್ಕ ನಿಧನ: ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಜಯನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ಮೃತಟಪಟ್ಟಿದ್ದಾರೆ. ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ರಾಜಕೀಯ ನಾಯಕರು, ಗಣ್ಯರಿಂದ ಸಂತಾಪ ವ್ಯಕ್ತವಾಗಿದೆ.
2025-11-14
ಚಾಮರಾಜನಗರದ ಗುಂಡ್ಲುಪೇಟೆ ಹೆದ್ದಾರಿ ಬಳಿ ವೃದ್ಧ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಾಲ ಮರುಪಾವತಿಸುವಂತೆ ಕೇಳಿದ್ದಕ್ಕಾಗಿ ಸಾಲಗಾರ ವೃದ್ಧನನ್ನು ಹತ್ಯೆಗೈದಿದ್ದು, ಚಿನ್ನಾಭರಣವನ್ನೂ ದೋಚಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರು ಬಂಧಿತರಿಂದ ಚಿನ್ನ ವಶಪಡಿಸಿಕೊಂಡಿದ್ದು, ಕೊಲೆಗಾರರ ವಿಚಾರಣೆ ಮುಂದುವರೆದಿದೆ.
2025-11-14
Varun Chakravarthy captain: ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2025ರ ತಮಿಳುನಾಡು ತಂಡದ ನಾಯಕತ್ವವನ್ನು ಕರ್ನಾಟಕ ಮೂಲದ ಟೀಂ ಇಂಡಿಯಾ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರಿಗೆ ನೀಡಲಾಗಿದೆ. ಟಿ20 ಸ್ವರೂಪದಲ್ಲಿ ಪ್ರಮುಖ ಆಟಗಾರರಾಗಿರುವ ವರುಣ್ ಚಕ್ರವರ್ತಿ, ನವೆಂಬರ್ 26ರಿಂದ ಪ್ರಾರಂಭವಾಗುವ ಪಂದ್ಯಾವಳಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಅವರು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 45 ವಿಕೆಟ್ಗಳನ್ನು ಪಡೆದಿದ್ದು, ಇದು ಅವರ ನಾಯಕತ್ವಕ್ಕೆ ಬಲ ನೀಡಲಿದೆ.
2025-11-14
IPL 2026 Trade Window: ಐಪಿಎಲ್ 2026 ಹರಾಜಿಗೂ ಮುನ್ನ ನವೆಂಬರ್ 15ರ ಗಡುವು ಸಮೀಪಿಸುತ್ತಿದೆ. ಸನ್ರೈಸರ್ಸ್ ಹೈದರಾಬಾದ್ ತಂಡ ಮೊಹಮ್ಮದ್ ಶಮಿ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕಳೆದ ಸೀಸನ್ನಲ್ಲಿ ಕಳಪೆ ಪ್ರದರ್ಶನ ಹಾಗೂ ಇಂಜುರಿಯಿಂದಾಗಿ ಶಮಿ ಟೀಂ ಇಂಡಿಯಾದಲ್ಲೂ ಸ್ಥಾನ ಕಳೆದುಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಶಮಿ ಅವರನ್ನು ಟ್ರೇಡಿಂಗ್ ವಿಂಡೋ ಮೂಲಕ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿಸಿವೆ.
2025-11-14
India vs South Africa Test at Eden Gardens: ಭಾರತ ಮತ್ತು ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯ ಮಹತ್ವದ ಪಂದ್ಯ 15 ವರ್ಷಗಳ ನಂತರ ಈಡನ್ ಗಾರ್ಡನ್ಸ್ನಲ್ಲಿ ನಡೆಯುತ್ತಿದೆ. ಐತಿಹಾಸಿಕವಾಗಿ ಭಾರತ 2-1 ಮುನ್ನಡೆ ಸಾಧಿಸಿದೆ. 25 ವರ್ಷಗಳಿಂದ ಭಾರತದಲ್ಲಿ ಸರಣಿ ಗೆಲ್ಲಲು ದಕ್ಷಿಣ ಆಫ್ರಿಕಾ ಕಾಯುತ್ತಿದೆ. ಪ್ರಸ್ತುತ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದೆ, ಭಾರತ ಮೊದಲು ಬೌಲಿಂಗ್ ಮಾಡಲಿದೆ. ಉಭಯ ತಂಡಗಳ ದಾಖಲೆಗಳು ರೋಚಕ ಕದನಕ್ಕೆ ಸಾಕ್ಷಿಯಾಗಲಿವೆ.
2025-11-14
ಸೌತ್ ವೆಸ್ಟರ್ನ್ ರೈಲ್ವೇ ನವೆಂಬರ್ 14ರಿಂದ ಡಿಸೆಂಬರ್ 28ರವರೆಗೆ ಬೆಂಗಳೂರು-ಮೈಸೂರು ನಡುವೆ ಮೆಮು ವಿಶೇಷ ರೈಲು ಸಂಚಾರವನ್ನು ಘೋಷಿಸಿದೆ. ವಾರಾಂತ್ಯ ಮತ್ತು ಶ್ರೀ ಸತ್ಯ ಸಾಯಿ ಬಾಬಾ ಶತಮಾನೋತ್ಸವ ಆಚರಣೆ ಹಿನ್ನಲೆ ಪ್ರಯಾಣಿಕರ ಅನುಕೂಲಕ್ಕಾಗಿ ಈ ಸೇವೆ ಒದಗಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
2025-11-14
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy