ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಗಾಗಿ ಪಶ್ಚಿಮ ಘಟ್ಟದ ಸುಮಾರು 54 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸಿಕೊಳ್ಳುವ ಕುರಿತ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ.
2025-11-09
ಬಿಹಾರದ ಸಮಸ್ತಿಪುರ ಜಿಲ್ಲೆಯ ಸರೈರಂಜನ್ ವಿಧಾನಸಭಾ ಕ್ಷೇತ್ರದಲ್ಲಿ ವಿವಿಪ್ಯಾಟ್ ಚೀಟಿಗಳ ರಾಶಿ ಪತ್ತೆಯಾಗಿದೆ.
2025-11-09
ಆರ್ಎಸ್ಎಸ್ ನೋಂದಣಿಯಾಗಿಲ್ಲ ಎಂಬ ಆರೋಪಕ್ಕೆ ಮೋಹನ್ ಭಾಗವತ್ ಸ್ಪಷ್ಟನೆ ನೀಡಿದ್ದಾರೆ. ಬ್ರಿಟಿಷ್ ಕಾಲದಲ್ಲಿ ಸಂಘ ಆರಂಭವಾಗಿದ್ದು, ಸ್ವಾತಂತ್ರ್ಯ ನಂತರವೂ ರಿಜಿಸ್ಟ್ರೇಶನ್ ಕಡ್ಡಾಯ ಮಾಡಿಲ್ಲ. ಇದು ಸ್ವತಂತ್ರ ಹಾಗೂ ಸಂವಿಧಾನಾತ್ಮಕ ಸಂಘವಾಗಿದ್ದು, ಆದಾಯ ತೆರಿಗೆ ಕೂಡ ಕಟ್ಟುತ್ತಿದ್ದೇವೆ. ಯಾವುದೇ ಧರ್ಮದವರು ಭಾರತ ಮಾತೆಯ ಮಕ್ಕಳಾಗಿ RSS ಸೇರಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
2025-11-09
ಕೋಯಿಕ್ಕೋಡ್ನ ಕೊಡಂಚೇರಿಯಲ್ಲಿ ಹಂದಿಗಳು ಏಕಾಏಕಿ ಸಾವನ್ನಪ್ಪಿದ್ದವು. ಈ ಹಿನ್ನೆಲೆ ಪರೀಕ್ಷೆ ನಡೆಸಲಾಗಿದ್ದು ಅದು ಆಫ್ರಿಕನ್ ಹಂದಿ ಜ್ವರವೆಂದು ದೃಢಪಟ್ಟಿದೆ.
2025-11-09
ನೊಬೆಲ್ ಪ್ರಶಸ್ತಿ ವಿಜೇತ, ಡಿಎನ್ಎ ಡಬಲ್ ಹಿಲಿಕ್ಸ್ ಸಹ-ಆವಿಷ್ಕಾರಕ ಜೇಮ್ಸ್ ವಾಟ್ಸನ್ (97) ನಿಧನರಾಗಿದ್ದಾರೆ. 1953ರಲ್ಲಿ ಫ್ರಾನ್ಸಿಸ್ ಕ್ರಿಕ್ ಜೊತೆ ಡಿಎನ್ಎ ರಚನೆ ಗುರುತಿಸಿ, ಆಣ್ವಿಕ ಜೀವಶಾಸ್ತ್ರಕ್ಕೆ ಕ್ರಾಂತಿಗೆ ಕಾರಣರಾಗಿದ್ದ ಇವರು, ಹಲವು ವಿವಾದಗಳಿಂದಲೂ ಸುದ್ದಿಯಾಗಿದ್ದರು. ನೊಬೆಲ್ ಚಿನ್ನದ ಪದಕವನ್ನು 2014ರಲ್ಲಿ ಹರಾಜಿನಲ್ಲಿ ಇವರು ಮಾರಿದ್ದು ಕೂಡ ಜನರು ಹುಬ್ಬೇರುವಂತೆ ಮಾಡಿತ್ತು.
2025-11-09
ಪ್ರಧಾನಿ ಮೋದಿ ಅವರು ಇಡಿ ಮತ್ತು ಸಿಬಿಐ ನಂತಹ ಸಂಸ್ಥೆಗಳ ಮೂಲಕ ವಿರೋಧಿಗಳಿಗೆ ಬೆದರಿಕೆ ಹಾಕುವ ಮೂಲಕ ಹಲವಾರು ಸರ್ಕಾರಗಳನ್ನು ರಚಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
2025-11-09
ಅಮೆರಿಕ ಸರ್ಕಾರ ಶಟ್ಡೌನ್ ಪರಿಣಾಮ ವಿಮಾನ ಹಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಶನಿವಾರ ಕೂಡ 1,000ಕ್ಕೂ ಹೆಚ್ಚು ವಿಮಾನ ಸಂಚಾರ ರದ್ದುಗೊಳಿಸಲಾಗಿತ್ತು.
2025-11-09
ನವೆಂಬರ್ ಕ್ರಾಂತಿ ಚರ್ಚೆಗಳ ನಡುವೆ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ನ.16ರಂದು ಸಂಸದ ಹಿಟ್ನಾಳ್ ಮನೆಯಲ್ಲಿ ಆಯೋಜಿಸಿರುವ ಔತಣಕೂಟದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಇದು ಹೈಕಮಾಂಡ್ಗೆ ಪ್ರಮುಖ ಸಂದೇಶ ರವಾನಿಸುವ ಪ್ರಯತ್ನ ಎನ್ನಲಾಗಿದ್ದು, ರಾಜ್ಯ ರಾಜಕೀಯದ ಹಲವು ವಿಚಾರಗಳು ಔತಣಕೂಟದಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.
2025-11-09
ರಾಯಭಾರಿ ಐನಾಟ್ ಕ್ರಾಂಜ್ ನೀಗರ್ ಅವರನ್ನು ಕೊಲ್ಲುವ ಸಂಚು ರೂಪಿಸಿದ್ದು, ಇದನ್ನು ವಿಫಲಗೊಳಿಸಿದ್ದೇವೆ ಎಂದು ಅಮೆರಿಕ ತಿಳಿಸಿದೆ. ಆದರೆ, ಈ ಬಗ್ಗೆ ಮೆಕ್ಸಿಕೋ ಯಾವುದೇ ಹೇಳಿಕೆ ನೀಡಿಲ್ಲ
2025-11-09
ಅಕ್ಟೋಬರ್ನಲ್ಲಿ 150,000 ಉದ್ಯೋಗಿಗಳ ವಜಾ ಮಾಡಲಾಗಿದೆ - ಕಳೆದ 20 ವರ್ಷಗಳಲ್ಲಿ ಒಂದೇ ತಿಂಗಳಲ್ಲಿ ಅತಿ ಹೆಚ್ಚು ಉದ್ಯೋಗಿಗಳನ್ನು ತೆಗೆದು ಹಾಕಲಾಗಿದೆ. AI ತಂತ್ರಜ್ಞಾನ ಮತ್ತು ವೆಚ್ಚ ಕಡಿತವೇ ಈ ಕಡಿತಕ್ಕೆ ಪ್ರಮುಖ ಕಾರಣಗಳು
2025-11-09
India vs Pakistan: ಏಷ್ಯಾಕಪ್ನ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.1 ಓವರ್ಗಳಲ್ಲಿ 146 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 19.4 ಓವರ್ಗಳಲ್ಲಿ 150 ರನ್ಗಳಿಸಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಭರ್ಜರಿ ಗೆಲುವಿನ ಹೊರತಾಗಿಯೂ ಟೀಮ್ ಇಂಡಿಯಾಗೆ ಇನ್ನೂ ಸಹ ಏಷ್ಯಾಕಪ್ ಟ್ರೋಫಿ ನೀಡಲಾಗಿಲ್ಲ.
2025-11-09
ಸರ್ಕಾರ ಸ್ಥಗಿತದ ಪರಿಣಾಮ ವೇತನದಲ್ಲಿ ಉಂಟಾಗಿರುವ ವ್ಯತ್ಯಯದಿಂದ ವಿಮಾನಯಾನ ಸೇವೆಯ ಅನೇಕರು ಕೆಲಸದಿಂದ ಹೊರ ಉಳಿದಿದ್ದಾರೆ.
2025-11-09
ಉತ್ತರ ಕರ್ನಾಟದಲ್ಲೇ ಪೂರ್ತಿ ಚಿತ್ರೀಕರಣ ಮಾಡಿರುವ ‘ಉಡಾಳ’ ಸಿನಿಮಾ ನವೆಂಬರ್ 14ಕ್ಕೆ ತೆರೆಕಾಣಲಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಪೃಥ್ವಿ ಶಾಮನೂರು ಮತ್ತು ಹೃತಿಕಾ ಶ್ರೀನಿವಾಸ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
2025-11-09
IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಡಿಸೆಂಬರ್ ಮೂರನೇ ವಾರದಲ್ಲಿ ನಡೆಯಲಿದೆ. ಈ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ರಿಟೈನ್ ಹಾಗೂ ರಿಲೀಸ್ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ. ಈ ಪಟ್ಟಿ ಸಲ್ಲಿಸಲು ಇದೀಗ ದಿನಾಂಕ ನಿಗದಿ ಮಾಡಲಾಗಿದೆ.
2025-11-09
ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರು ಪ್ರತಿ ವರ್ಷ ತಮ್ಮ ಆಸ್ತಿ ಬಹಿರಂಗಪಡಿಸಲು ಕಾಯ್ದೆಗೆ ತಿದ್ದುಪಡಿಗೆ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಕಾನೂನು ಸಚಿವರಿಗೆ ಪತ್ರದ ಮೂಲಕ ವಿನಂತಿಸಿದ್ದಾರೆ.
2025-11-09
ಶ್ರೀ ಕೃಷ್ಣಮಠದಲ್ಲಿ ಡಿ.7ರ ವರೆಗೆ ಹಮ್ಮಿಕೊಂಡಿರುವ ಬೃಹತ್ ಗೀತೋತ್ಸವನ್ನು ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಿದರು.
2025-11-09
ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ‘ಕಿಂಗ್’ ಸಿನಿಮಾದ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯ ಇದೆ. ಅಷ್ಟರಲ್ಲಾಗಲೇ ಈ ಚಿತ್ರದ ಕುರಿತು ಸಿಕ್ಕಾಪಟ್ಟೆ ಇಂಟರೆಸ್ಟಿಂಗ್ ಮಾಹಿತಿಗಳು ಕೇಳಿಬರಲು ಆರಂಭಿಸಿವೆ. ಈ ಸಿನಿಮಾದ ಬಜೆಟ್ 350 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಆ ಕುರಿತು ಇಲ್ಲಿದೆ ಮಾಹಿತಿ..
2025-11-09
WHO ಪ್ರಕಾರ, ವಿಶ್ವದ ಜನಸಂಖ್ಯೆಯ ಸರಿಸುಮಾರು ಮೂರನೇ ಒಂದು ಭಾಗದಷ್ಟು ಜನರು ಯಾವುದೋ ಒಂದು ರೀತಿಯ ಚಯಾಪಚಯ ಅಸಮತೋಲನದಿಂದ ಬಳಲುತ್ತಿದ್ದಾರೆ. ಈ ಪರಿಸ್ಥಿತಿಯು ಭಾರತದಲ್ಲಿಯೂ ಸಹ ಕಳವಳಕಾರಿ ವಿಷಯವಾಗಿದೆ ಎಂದು ರಾಜ್ಯಪಾಲರು ತಿಳಿಸಿದರು.
2025-11-09
ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಕೂನೂರು ಗ್ರಾಮದ ಬಳಿಯ ಹಾರೋಬೆಲೆ ಡ್ಯಾಂ ಹಿನ್ನೀರಿನಲ್ಲಿ ಎರಡು ಕಾಡಾನೆಗಳು ಮುಳುಗಿ ಸಾವನ್ನಪ್ಪಿರುವಂತಹ ಘಟನೆ ಕುನೂರು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದೆ. ಆಹಾರ ಅರಸಿ ನಾಡಿಗೆ ಬಂದಿದ್ದ ಗಂಡಾನೆಗಳು ನದಿ ದಾಟುವಾಗ ಜೊಂಡಿಗೆ ಸಿಲುಕಿ ಮುಳುಗಿ ಮೃತಪಟ್ಟಿವೆ.
2025-11-09
ಅನುಷ್ಕಾ ಶಂಕರ್, ಶಕ್ತಿ, ಚಾರು ಸೂರಿ ಮತ್ತು ಸಿದ್ಧಾಂತ್ ಭಾಟಿಯಾ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
2025-11-09
Ugram Manju: ಮಾಜಿ ಬಿಗ್ಬಾಸ್ ಸ್ಪರ್ಧಿ, ನಟ ಉಗ್ರಂ ಮಂಜು ಕೊನೆಗೂ ಜಂಟಿ ಆಗಿದ್ದಾರೆ. ಉಗ್ರಂ ಮಂಜು ಅವರು ಮದುವೆಗೆ ಸಜ್ಜಾಗಿದ್ದು, ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಉಗ್ರಂ ಮಂಜು ಅವರು ಸಂಧ್ಯಾ ಅವರೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡಿಕೊಂಡಿದ್ದು, ತಮ್ಮ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಉಗ್ರಂ ಮಂಜು ಮದುವೆ ಆಗಲಿರುವುದು ಯಾರನ್ನು.
2025-11-09
ಮತ ಕಳ್ಳತನವು ಗಂಭೀರ ಸಮಸ್ಯೆಯಾಗಿದ್ದು, SIR ಮೂಲಕ ಅದನ್ನು ಮುಚ್ಚಿಹಾಕಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪಾಪಿಸಿದ್ದಾರೆ.
2025-11-09
ಹೆಚ್ಸಿಎಂಸಿಟಿ ಮಣಿಪಾಲ್ ಆಸ್ಪತ್ರೆ ವೈದ್ಯರು, ಮಹಿಳೆಯ ಮೃತದೇಹದಲ್ಲಿ ರಕ್ತ ಪರಿಚಲನೆಯನ್ನು ಪುನಾರಂಭಿಸಿ ಅಂಗಾಂಗ ದಾನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
2025-11-09
ಈ ವರ್ಷದ ಕ್ರಿಸ್ಮಸ್ ಹಬ್ಬಕ್ಕೆ ಮೋಹನ್ಲಾಲ್ ಅವರ ಹೊಸ ಸಿನಿಮಾ ‘ವೃಷಭ’ ಬಿಡುಗಡೆ ಆಗುವುದು ಖಚಿತವಾಗಿದೆ. ಈ ಸಿನಿಮಾದಲ್ಲಿ ಕನ್ನಡದ ಕಲಾವಿದರಾದ ರಾಗಿಣಿ ದ್ವಿವೇದಿ, ಸಮರ್ಜಿತ್ ಲಂಕೇಶ್ ಮುಂತಾದವರು ನಟಿಸಿದ್ದಾರೆ. ಕನ್ನಡದ ಖ್ಯಾತ ಡೈರೆಕ್ಟರ್ ನಂದ ಕಿಶೋರ್ ಅವರು ಪ್ಯಾನ್ ಇಂಡಿಯಾ ‘ವೃಷಭ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
2025-11-09
ಬಹುಕೋಟಿಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸುತ್ತಿದ್ದ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯ 'ದಿ ಗರ್ಲ್ಫ್ರೆಂಡ್' ಸಿನಿಮಾದ ಗಳಿಕೆ ದೊಡ್ಡ ಮಟ್ಟದಲ್ಲಿಲ್ಲ. ಶನಿವಾರ, ಭಾನುವಾರದ ಗಳಿಕೆ ಮೇಲೆ ಎಲ್ಲರ ಗಮನವಿದೆ.
2025-11-09
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy