H16 News
Logo
ಭಾರತೀಯ ಮೂಲದ ಮಮ್ದಾನಿ ನ್ಯೂಯಾರ್ಕ್ ನೂತನ ಮೇಯರ್
Breaking News
ಭಾರತೀಯ ಮೂಲದ ಮಮ್ದಾನಿ ನ್ಯೂಯಾರ್ಕ್ ನೂತನ ಮೇಯರ್

ನ್ಯೂಯಾರ್ಕ್ನ ನೂತನ ಮೇಯರ್ ಮಮ್ದಾನಿ ಅವರು ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಹಮೂದ್ ಮಮ್ದಾನಿ ಅವರ ಪುತ್ರನಾಗಿದ್ದಾರೆ.

2025-11-05

1 ವರ್ಷದೊಳಗಿನ ಮಕ್ಕಳಿಗೆ ಎಳನೀರನ್ನು ನೀಡಬಹುದೇ
Health
1 ವರ್ಷದೊಳಗಿನ ಮಕ್ಕಳಿಗೆ ಎಳನೀರನ್ನು ನೀಡಬಹುದೇ

ಎಳನೀರು ನೀರು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದು ತಿಳಿದಂತಹ ವಿಚಾರ. ಇದರಲ್ಲಿ ಅಮೃತದ ಗುಣವಿದ್ದು ಅನೇಕ ರೀತಿಯ ಕಾಯಿಲೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಅದಕ್ಕಾಗಿಯೇ ಇದನ್ನು ನಿಯಮಿತವಾಗಿ ಸೇವನೆ ಮಾಡಿ ಎಂದು ಹೇಳಲಾಗುತ್ತದೆ. ಆದರೆ ಇದು ಎಲ್ಲರಿಗೂ ಒಳ್ಳೆಯದೇ? ಅದರಲ್ಲಿಯೂ 1 ವರ್ಷದೊಳಗಿನ ಮಕ್ಕಳಿಗೆ ಎಳನೀರನ್ನು ನೀಡಬಹುದೇ? ಎಂಬ ಅನುಮಾನ ಹಲವರಿಗಿರಬಹುದು. ಇದರ ಬಗ್ಗೆ ಡಾ. ರಾಕೇಶ್ ಬಾಗ್ರಿ ಅವರು ಮಾತನಾಡಿದ್ದು ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ನಿಮ್ಮ ಮನೆಯಲ್ಲಿಯೂ ಚಿಕ್ಕ ಮಕ್ಕಳಿದ್ದು ನಿಮಗೂ ಇದೇ ರೀತಿ ಗೊಂದಲಗಳಿದ್ದರೆ ನೀವು ಈ ಸ್ಟೋರಿಯನ್ನು ಮಿಸ್ ಮಾಡ್ದೆ ಓದಿ.

2025-11-05

ವಿಜಯ್  ಸಿನಿಮಾ ಜೊತೆ ರಶ್ಮಿಕಾ ಸಿನಿಮಾ ಹೋಲಿಸುತ್ತಿರುವುದು ಏಕೆ
Entertainment
ವಿಜಯ್ ಸಿನಿಮಾ ಜೊತೆ ರಶ್ಮಿಕಾ ಸಿನಿಮಾ ಹೋಲಿಸುತ್ತಿರುವುದು ಏಕೆ

Rashmika Mandanna: ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್ಫ್ರೆಂಡ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್, ಟೀಸರ್, ಹಾಡುಗಳನ್ನು ನೋಡಿದ ಜನ ‘ದಿ ಗರ್ಲ್ಫ್ರೆಂಡ್’ ಸಿನಿಮಾವನ್ನು ವಿಜಯ್ ದೇವಕರೊಂಡ ನಟನೆಯ ‘ಅರ್ಜುನ್ ರೆಡ್ಡಿ’ ಸಿನಿಮಾದೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಎರಡೂ ಸಿನಿಮಾಗಳ ನಡುವಿನ ಸಾಮ್ಯತೆ ಏನು?

2025-11-05

ಎಸ್ಎಸ್ಎಲ್ ಸಿ, ಪಿಯುಸಿ ಪರೀಕ್ಷೆ 1 ಮತ್ತು 2ರ ಅಂತಿಮ ವೇಳಾಪಟ್ಟಿ ಪ್ರಕಟ
Education
ಎಸ್ಎಸ್ಎಲ್ ಸಿ, ಪಿಯುಸಿ ಪರೀಕ್ಷೆ 1 ಮತ್ತು 2ರ ಅಂತಿಮ ವೇಳಾಪಟ್ಟಿ ಪ್ರಕಟ

ಎಸ್ಎಸ್ಎಲ್ಸಿ ಪರೀಕ್ಷೆ ಮಾರ್ಚ್ 18ರಿಂದ ಮತ್ತು ಪಿಯುಸಿ ಪರೀಕ್ಷೆ 1 ಮಾರ್ಚ್ 28ರಿಂದ ಆರಂಭವಾಗಲಿದೆ.

2025-11-05

ಬೆಂಗಳೂರಲ್ಲಿ ತುಳು, ಕನ್ನಡ ಭಾಷೆಯ ‘ಜೈ’ ಸಿನಿಮಾ ಟ್ರೇಲರ್ ಬಿಡುಗಡೆ
Entertainment
ಬೆಂಗಳೂರಲ್ಲಿ ತುಳು, ಕನ್ನಡ ಭಾಷೆಯ ‘ಜೈ’ ಸಿನಿಮಾ ಟ್ರೇಲರ್ ಬಿಡುಗಡೆ

ರೂಪೇಶ್ ಶೆಟ್ಟಿ ನಟನೆಯ ಕನ್ನಡ-ತುಳು ಭಾಷೆಯ ‘ಜೈ’ ಸಿನಿಮಾದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ ಆಗಿದೆ. ನವೆಂಬರ್ 7ರಂದು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಟ್ರೇಲರ್ ಬಿಡುಗಡೆ ಮಾಡಲು ಬೆಂಗಳೂರಿಗೆ ಆಗಮಿಸಲಿದ್ದಾರೆ. ‘ಜೈ’ ಸಿನಿಮಾದ ಟೀಸರ್ ಈಗಾಗಲೇ ಗಮನ ಸೆಳೆದಿದೆ. ವಿದೇಶದಲ್ಲಿ ನಡೆದ ಪ್ರೀಮಿಯರ್ ಶೋನಲ್ಲಿ ಜನಮೆಚ್ಚುಗೆ ಸಿಕ್ಕಿದೆ.

2025-11-05

'ರಾಹುಲ್ ಗಾಂಧಿ, ಆತನ ಖಾಂದಾನ್ ಚೋರ್': ಛಲವಾದಿ ನಾರಾಯಣಸ್ವಾಮಿ
Breaking News
'ರಾಹುಲ್ ಗಾಂಧಿ, ಆತನ ಖಾಂದಾನ್ ಚೋರ್': ಛಲವಾದಿ ನಾರಾಯಣಸ್ವಾಮಿ

ರಾಹುಲ್ ಗಾಂಧಿ ಖಾಂದಾನದ ಚೋರ್ಗಳೆಲ್ಲ ಸೇರಿ ಇವತ್ತು ಚೋರಿ ಮಾಡಲಾಗದ ಮಷಿನ್ಗಳನ್ನು ಚೋರಿ ಆಗಿದೆ ಅಂತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

2025-11-05

ಹೊಸಬರ ‘ಪ್ರೇಮಂ ಮಧುರಂ’ ಸಿನಿಮಾ ಟ್ರೇಲರ್ ಬಿಡುಗಡೆ
Entertainment
ಹೊಸಬರ ‘ಪ್ರೇಮಂ ಮಧುರಂ’ ಸಿನಿಮಾ ಟ್ರೇಲರ್ ಬಿಡುಗಡೆ

ಪ್ರೇಮಂ ಮಧುರಂ’ ಚಿತ್ರದಲ್ಲಿ ಗಾಂಧಿ ಎ.ಬಿ., ಐಶ್ವರ್ಯಾ ದಿನೇಶ್, ಅನುಷಾ ಜೈನ್ ಅವರು ಮುಖ್ಯ ಪಾತ್ರ ಮಾಡಿದ್ದಾರೆ. ಹೊಸ ಕಲಾವಿದರಿಗೆ ಅವಕಾಶ ನೀಡಬೇಕು ಎಂಬ ಸಲುವಾಗಿ ಅರಗೊಂಡ ಶೇಖರ್ ರೆಡ್ಡಿ ಅವರು ಈ ಸಿನಿಮಾ ನಿರ್ಮಿಸಿದ್ದಾರೆ. ಈಗ ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಶೀಘ್ರದಲ್ಲೇ ಸಿನಿಮಾ ತೆರೆಕಾಣಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.

2025-11-05

ಖಂಡ್ರೆ: ಯೋಜನೆಗೆ ಅನುಮತಿ ನೀಡುವಾಗ ವನ್ಯಜೀವಿಗಳಿಗೆ ತೊಂದರೆಯಾಗದಂತೆ ಕ್ರಮವಹಿಸಿ
Breaking News
ಖಂಡ್ರೆ: ಯೋಜನೆಗೆ ಅನುಮತಿ ನೀಡುವಾಗ ವನ್ಯಜೀವಿಗಳಿಗೆ ತೊಂದರೆಯಾಗದಂತೆ ಕ್ರಮವಹಿಸಿ

ವನ್ಯಜೀವಿಧಾಮದಲ್ಲಿ ರಸ್ತೆ ನಿರ್ಮಾಣ, ಅಗಲೀಕರಣ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ಯೋಜನೆಗಳಿಗೆ ಅನುಮೋದನೆ ನೀಡುವ ಪೂರ್ವದಲ್ಲಿ ವನ್ಯಜೀವಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

2025-11-05

ಕದ್ರಿ ಪಾರ್ಕ್ಗೆ ಟೋಲ್ ಮಾದರಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ
Trending
ಕದ್ರಿ ಪಾರ್ಕ್ಗೆ ಟೋಲ್ ಮಾದರಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ

ಪಾರ್ಕ್ ರಸ್ತೆಗೆ ಎಂಟ್ರಿಯಾಗುವ ಇಕ್ಕೆಲಗಳಲ್ಲಿ ಈ ಟೋಲ್ಗೇಟ್ ಮಾದರಿಯ ತಂತ್ರಜ್ಞಾನ ಅಳವಡಿಸಲಿದ್ದು, ವಾಹನಗಳು ಎಂಟ್ರಿಯಾಗಿ 5 ನಿಮಿಷದೊಳಗೆ ಹೊರಗಡೆ ಪಾಸ್ ಆಗದೇ ಇದ್ದಲ್ಲಿ ನಿಗದಿತ ಶುಲ್ಕ ಕಟ್ ಆಗಲಿದೆ.

2025-11-05

ಅರ್ಧ ಬೆಲೆಗೆ ಗೃಹೋಪಯೋಗಿ ವಸ್ತು ಆಮಿಷ ನೂರಾರು ಮಂದಿಗೆ ಮಕ್ಮಲ್ ಟೋಪಿ
Breaking News
ಅರ್ಧ ಬೆಲೆಗೆ ಗೃಹೋಪಯೋಗಿ ವಸ್ತು ಆಮಿಷ ನೂರಾರು ಮಂದಿಗೆ ಮಕ್ಮಲ್ ಟೋಪಿ

ಉತ್ತರ ಕನ್ನಡದ ಭಟ್ಕಳದಲ್ಲಿ ಗ್ಲೋಬಲ್ ಎಂಟರ್ಪ್ರೈಸಸ್ ಹೆಸರಿನಲ್ಲಿ ಭಾರಿ ವಂಚನೆ ಬೆಳಕಿಗೆ ಬಂದಿದೆ. ಅರ್ಧ ಬೆಲೆಗೆ ಗೃಹೋಪಯೋಗಿ ವಸ್ತುಗಳ ಆಮಿಷವೊಡ್ಡಿ ನೂರಾರು ಗ್ರಾಹಕರಿಂದ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹಿಸಿ ತಮಿಳುನಾಡು ಮೂಲದ ವಂಚಕರು ರಾತ್ರೋರಾತ್ರಿ ಎಸ್ಕೇಪ್ ಆಗಿದ್ದಾರೆ. ವಂಚನೆ ಬಯಲಾಗುತ್ತಿದ್ದಂತೆ ಗ್ರಾಹಕರು ಅಂಗಡಿಗೆ ನುಗ್ಗಿ ಸಿಕ್ಕ ಸಿಕ್ಕ ವಸ್ತು ದೋಚಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

2025-11-05

ಚೆಲುವರಾಯಸ್ವಾಮಿ: ನಾಳಿನ ಸಚಿವ ಸಂಪುಟ ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳ ಚರ್ಚೆ
Breaking News
ಚೆಲುವರಾಯಸ್ವಾಮಿ: ನಾಳಿನ ಸಚಿವ ಸಂಪುಟ ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳ ಚರ್ಚೆ

ನಾಳೆ ನಡೆಯಲಿರುವ ಸಂಪುಟ ಸಭೆಯಲ್ಲಿ ಸಕ್ಕರೆ ಸಚಿವರು ಸೇರಿದಂತೆ ಆ ಭಾಗದ ಸಚಿವರು ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

2025-11-05

ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ
Breaking News
ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ

Karnataka Weather:ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮಳೆರಾಯನ ಆರ್ಭಟ ಕಡಿಮೆಯಾಗಿದ್ದು, ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಪ್ರದೇಶಗಳ ಕೆಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಧಾನಿ ಬೆಂಗಳೂರಲ್ಲಿ ಮೋಡಕವಿದ ವಾತಾವರಣದ ಸಾಧ್ಯತೆ ಇದ್ದರೆ, ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

2025-11-04

ಪಿಂಕ್ ಲೈನ್ ಮೆಟ್ರೋ ಆರಂಭ ಯಾವಾಗ
Breaking News
ಪಿಂಕ್ ಲೈನ್ ಮೆಟ್ರೋ ಆರಂಭ ಯಾವಾಗ

ನಮ್ಮ ಮೆಟ್ರೋ ಪಿಂಕ್ ಲೈನ್ ಕಾರ್ಯಾಚರಣೆ ಬಗ್ಗೆ BMRCL ಮಹತ್ವದ ಮಾಹಿತಿ ನೀಡಿದೆ. ಪಿಂಕ್ ಲೈನ್ ಮೆಟ್ರೋ ಎರಡು ಹಂತಗಳಲ್ಲಿ ಉದ್ಘಾಟನೆಯಾಗಲಿದೆ. ಕಾಳೇನ ಅಗ್ರಹಾರ-ತಾವರೆಕೆರೆ 7.5 ಕಿಮೀ ಎಲಿವೇಟೆಡ್ ವಿಭಾಗ 2026ರ ಮೇ ವೇಳೆಗೆ, ಉಳಿದ 13.76 ಕಿಮೀ ಸುರಂಗ ಮಾರ್ಗ ಡಿಸೆಂಬರ್ 2026ರ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

2025-11-04

ರೈಲ್ವೆ ಟಿಕೆಟ್ ಖರೀದಿಸಲು ಇನ್ಮುಂದೆ ಕ್ಯೂ ನಿಲ್ಬೇಕಿಲ್ಲ
Breaking News
ರೈಲ್ವೆ ಟಿಕೆಟ್ ಖರೀದಿಸಲು ಇನ್ಮುಂದೆ ಕ್ಯೂ ನಿಲ್ಬೇಕಿಲ್ಲ

ಈ ಹಿಂದೆ ರೈಲುಗಳಲ್ಲಿ ಪ್ರಯಾಣ ಮಾಡಬೇಕೆಂದರೆ ಟಿಕೆಟ್ ಕೌಂಟರ್ನಲ್ಲಿ ಗಂಟೆಗಟ್ಟಲೆ ಕ್ಯೂ ನಿಂತು ಟಿಕೆಟ್ ಖರೀದಿ ಮಾಡಬೇಕಿತ್ತು. ಆದರೆ, ಇನ್ಮುಂದೆ ರೈಲ್ವೆ ಸ್ಟೇಷನ್ ಎಂಟ್ರಿ ಗೇಟ್ನಲ್ಲೇ ಕೇವಲ ಮೂರೇ ನಿಮಿಷಗಳಲ್ಲಿ ಟಿಕೆಟ್ ನಿಮ್ಮ ಕೈಗೆ ಸಿಗಲಿದೆ ನೋಡಿ. ಬೆಂಗಳೂರಿನ ಕೆಎಸ್ಆರ್ ನಿಲ್ದಾಣದಲ್ಲಿ ದೇಶದಲ್ಲೇ ಮೊದಲ ಬಾರಿಗೆ MUTS ಸಹಾಯಕ್ ಪರಿಚಯಿಸಲಾಗಿದೆ. ಈ ಕುರಿತು ವಿವರ ಇಲ್ಲಿದೆ.

2025-11-04

ದ್ವಿಶತಕ ಬಾರಿಸಿದ ದೀಪಕ್ ಹೂಡಾ
Sports
ದ್ವಿಶತಕ ಬಾರಿಸಿದ ದೀಪಕ್ ಹೂಡಾ

Deepak Hooda: ದೀಪಕ್ ಹೂಡಾ ಈ ಹಿಂದೆ ಬರೋಡಾ ಪರ ರಣಜಿ ಪಂದ್ಯಗಳನ್ನಾಡುತ್ತಿದ್ದರು. ಇದೀಗ ರಾಜಸ್ಥಾನ್ ಪರ ಹೊಸ ಇನಿಂಗ್ಸ್ ಆರಂಭಿಸಿರುವ ಹೂಡಾ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಈ ಡಬಲ್ ಸೆಂಚುರಿಯೊಂದಿಗೆ ಮುಂಬೈ ವಿರುದ್ಧ ರಾಜಸ್ಥಾನ್ ತಂಡವು ಮೊದಲ ಇನಿಂಗ್ಸ್ನಲ್ಲಿ ಬರೋಬ್ಬರಿ 363 ರನ್ಗಳ ಬೃಹತ್ ಮುನ್ನಡೆ ಪಡೆದುಕೊಂಡಿದೆ.

2025-11-04

ಭಾರತ vs ಆಸ್ಟ್ರೇಲಿಯಾ 4ನೇ ಟಿ20 ಪಂದ್ಯ ಯಾವಾಗ
Sports
ಭಾರತ vs ಆಸ್ಟ್ರೇಲಿಯಾ 4ನೇ ಟಿ20 ಪಂದ್ಯ ಯಾವಾಗ

India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಟಿ20 ಸರಣಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈ ಸರಣಿಯ ಮೊದಲ ಮ್ಯಾಚ್ ಮಳೆಗೆ ಆಹುತಿಯಾಗಿದೆ. ಎರಡನೇ ಮತ್ತು ಮೂರನೇ ಪಂದ್ಯಗಳಲ್ಲಿ ಉಭಯ ತಂಡಗಳು ಗೆಲುವು ದಾಖಲಿಸಿದೆ. ಇದೀಗ ನಾಲ್ಕನೇ ಪಂದ್ಯಕ್ಕಾಗಿ ಎರಡು ತಂಡಗಳು ಸಜ್ಜಾಗಿದ್ದು, ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ.

2025-11-04

ಇನ್ನೂ ಸಿಗದ ಏಷ್ಯಾಕಪ್ ಟ್ರೋಫಿ  ಬಿಸಿಸಿಐಯಿಂದ
Sports
ಇನ್ನೂ ಸಿಗದ ಏಷ್ಯಾಕಪ್ ಟ್ರೋಫಿ ಬಿಸಿಸಿಐಯಿಂದ

Asia Cup 2025 Trophy: 2025 ರ ಏಷ್ಯಾ ಕಪ್ ಟ್ರೋಫಿಗೆ ಸಂಬಂಧಿಸಿದಂತೆ ಬಿಸಿಸಿಐ ಮತ್ತು ಎಸಿಸಿ ನಡುವಿನ ವಿವಾದ ಮುಂದುವರೆದಿದೆ. ನವೆಂಬರ್ 3 ರೊಳಗೆ ಟ್ರೋಫಿ ಸಿಗದಿದ್ದರೆ, ಮುಂಬರುವ ಐಸಿಸಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟಪಡಿಸಿದ್ದಾರೆ.

2025-11-04

ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ವಜ್ರಾಭರಣ ಗಿಫ್ಟ್
Sports
ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ವಜ್ರಾಭರಣ ಗಿಫ್ಟ್

India Women vs South Africa Women, Final: ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ನ ಫೈನಲ್ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 45.3 ಓವರ್ಗಳಲ್ಲಿ 246 ರನ್ಗಳಿಸಿ ಆಲೌಟ್ ಆಗಿ 52 ರನ್ಗಳಿಂದ ಸೋಲೊಪ್ಪಿಕೊಂಡಿತು.

2025-11-04

ಕೇವಲ 49 ರನ್ಗೆ ಆಲೌಟ 243 ರನ್ಗಳ ಅಮೋಘ ಜಯ
Sports
ಕೇವಲ 49 ರನ್ಗೆ ಆಲೌಟ 243 ರನ್ಗಳ ಅಮೋಘ ಜಯ

United Arab Emirates vs United States of America: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಸ್ಎ ತಂಡ ಸಾಯಿತೇಜ ಅಜೇಯ 137 ರನ್ ಬಾರಿಸಿದರೆ, ಮಿಲಿಂದ್ ಕುಮಾರ್ ಅಜೇಯ 123 ರನ್ ಸಿಡಿಸಿದರು. ಈ ಭರ್ಜರಿ ಶತಕಗಳ ನೆರವಿನೊಂದಿಗೆ ಯುಎಸ್ಎ ತಂಡ 50 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 292 ರನ್ ಕಲೆಹಾಕಿದ್ದರು.

2025-11-04

ಬೆಳಗಾವಿ: ಕಬ್ಬು ಬೆಳೆಗಾರರ ಹೋರಾಟ ತೀವ್ರ, ಪ್ರಮುಖ ಭಾಗದಲ್ಲಿ
Trending
ಬೆಳಗಾವಿ: ಕಬ್ಬು ಬೆಳೆಗಾರರ ಹೋರಾಟ ತೀವ್ರ, ಪ್ರಮುಖ ಭಾಗದಲ್ಲಿ

ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದೆ. ಕಬ್ಬಿಗೆ ಉತ್ತಮ ದರ ನಿಗದಿ ಹಾಗೂ ಬಾಕಿ ಪಾವತಿಗೆ ಆಗ್ರಹಿಸಿ ಅಥಣಿ, ಗೋಕಾಕ್ ಸೇರಿ ಹಲವೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಂದ್ಗೆ ಕರೆ ನೀಡಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಚಿವರು ರೈತರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.

2025-11-04

ಕನ್ನಡಿಗರ ಬಗ್ಗೆ ರಶ್ಮಿಕಾ ಮಂದಣ್ಣ ಕಾಳಜಿ, ನೀಡಿದರು ಸಲಹೆ
Entertainment
ಕನ್ನಡಿಗರ ಬಗ್ಗೆ ರಶ್ಮಿಕಾ ಮಂದಣ್ಣ ಕಾಳಜಿ, ನೀಡಿದರು ಸಲಹೆ

Rashmika Mandanna: ನಟಿ ರಶ್ಮಿಕಾ ಮಂದಣ್ಣ ಈ ಹಿಂದೆ ನೀಡಿದ್ದ ಕೆಲ ಹೇಳಿಕೆಗಳಿಂದ ಕನ್ನಡಿಗರು ನಟಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ವಿಪರೀತ ಟ್ರೋಲಿಂಗ್ ಸಹ ನಟಿಯ ಮೇಲೆ ನಡೆದಿತ್ತು. ಇದೀಗ ರಶ್ಮಿಕಾ ತಮ್ಮ ಕನ್ನಡಿಗ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ. ರಶ್ಮಿಕಾ ಕನ್ನಡಿಗರ ಪರ ತಮ್ಮ ಕಾಳಜಿ ಮತ್ತು ಪ್ರೀತಿ ವ್ಯಕ್ತಪಡಿಸಿದ್ದಾರೆ.

2025-11-04

ರಾಜ್ದೂತ್ ಓಡಿಸಿ, ಸಿಗರೇಟ್ ಸೇದಿದ ರಮ್ಯಾ ಕೃಷ್ಣ
Entertainment
ರಾಜ್ದೂತ್ ಓಡಿಸಿ, ಸಿಗರೇಟ್ ಸೇದಿದ ರಮ್ಯಾ ಕೃಷ್ಣ

Ramya Krishna: ರಮ್ಯಾ ಕೃಷ್ಣ ಅವರು ಕನ್ನಡಿಗರಿಗೂ ಪರಿಚಿತರು. ಅವರು ಕನ್ನಡದಲ್ಲೂ ಸಿನಿಮಾಗಳನ್ನು ಮಾಡಿದ್ದಾರೆ. ಈಗ ರಮ್ಯಾ ಕೃಷ್ಣ ಅವರ ಹೊಸ ಫೋಟೋಗಳು ವೈರಲ್ ಆಗಿವೆ. ಅವರ ಹೊಸ ಸಿನಿಮಾದ ಲುಕ್ ಇದಾಗಿದೆ. ಅವರ ಲುಕ್ ಸಾಕಷ್ಟು ಗಮನ ಸೆಳೆಯುವ ರೀತಿಯಲ್ಲಿ ಇದೆ.

2025-11-04

ಕಲ್ಯಾಣ ಕರ್ನಾಟಕದ 38 ಹಳ್ಳಿಗಳ ಮಹಿಳೆಯರಿಗಿಲ್ಲ ಶಕ್ತಿ ಯೋಜನೆ ಭಾಗ್ಯ
Breaking News
ಕಲ್ಯಾಣ ಕರ್ನಾಟಕದ 38 ಹಳ್ಳಿಗಳ ಮಹಿಳೆಯರಿಗಿಲ್ಲ ಶಕ್ತಿ ಯೋಜನೆ ಭಾಗ್ಯ

ಕಲ್ಯಾಣ ಕರ್ನಾಟಕದ 38 ಹಳ್ಳಿಗಳಲ್ಲಿ ಬಸ್, ರಸ್ತೆ ಇಲ್ಲದೆ ಶಕ್ತಿ ಯೋಜನೆ ನಿರುಪಯುಕ್ತವಾಗಿರುವ ಬಗ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜತೆಗೆ, ಬೆಂಗಳೂರು ಟೆಕ್ ಸಮ್ಮಿಟ್ಗೆ ಮುನ್ನ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸಲು ಒತ್ತಾಯಿಸಿದ್ದಾರೆ.

2025-11-04

Gold Rate Today Bangalore: ಚಿನ್ನದ ಬೆಲೆ 65 ರೂ ಏರಿಕೆ
Business
Gold Rate Today Bangalore: ಚಿನ್ನದ ಬೆಲೆ 65 ರೂ ಏರಿಕೆ

Bullion Market 2025 November 4th: ಸೋಮವಾರ ಹೆಚ್ಚಿದ್ದ ಚಿನ್ನ, ಬೆಳ್ಳಿ ಬೆಲೆಗಳು ಮಂಗಳವಾರ ಭರ್ಜರಿ ಇಳಿಕೆ ಕಂಡಿವೆ. ಚಿನ್ನದ ಬೆಲೆ 65 ರೂ ಕಡಿಮೆಯಾದರೆ, ಬೆಳ್ಳಿ ಬೆಲೆ 3 ರೂ ಇಳಿದಿದೆ. 22 ಕ್ಯಾರಟ್ ಚಿನ್ನದ ಬೆಲೆ 11,290 ರೂನಿಂದ 11,225 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 12,246 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 151 ರೂಗೆ ಕುಸಿದಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 165 ರೂಗೆ ಇಳಿದಿದೆ.

2025-11-04

ಚಿಕ್ಕ ಮಕ್ಕಳ ಕೆಮ್ಮು ಬೇಗ ಕಡಿಮೆ ಆಗಬೇಕು ಅಂದ್ರೆ ಆಯುರ್ವೇದದಲ್ಲಿ
Health
ಚಿಕ್ಕ ಮಕ್ಕಳ ಕೆಮ್ಮು ಬೇಗ ಕಡಿಮೆ ಆಗಬೇಕು ಅಂದ್ರೆ ಆಯುರ್ವೇದದಲ್ಲಿ

ಹವಾಮಾನ ಬದಲಾವಣೆಯಿಂದ ಚಿಕ್ಕ ಮಕ್ಕಳಲ್ಲಿ ಕೆಮ್ಮಿನ ಅಪಾಯ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಪೋಷಕರು ಈ ಸಮಸ್ಯೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಇಂತಹ ಸಂದರ್ಭಗಳಲ್ಲಿ, ಕೆಮ್ಮನ್ನು ಕಡಿಮೆ ಮಾಡುವ ಮೂಲಕ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಚಿಕ್ಕ ಮಕ್ಕಳಿಗೆ ಆಯುರ್ವೇದದಲ್ಲಿ ನೀಡಿರುವ ಪರಿಹಾರಗಳನ್ನು ಪಾಲಿಸಬಹುದು. ಆರೋಗ್ಯ ತಜ್ಞರು ಈ ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದು ನೀವು ಕೂಡ ಮನೆಯಲ್ಲಿ ಟ್ರೈ ಮಾಡಬಹುದು. ಪ್ರತಿಯೊಬ್ಬರ ಮನೆಯಲ್ಲಿಯೂ ಲಭ್ಯವಿರುವ ಪದಾರ್ಥಗಳನ್ನು ಬಳಸಿಕೊಂಡು ಕೆಮ್ಮನ್ನು ಬಹುಬೇಗ ಶಮನ ಮಾಡಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

2025-11-04

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy