ಮಹಾರಾಷ್ಟ್ರದ ಶಿಕ್ರಾಪುರ ಗ್ರಾಮದಲ್ಲಿ ನಾಲ್ಕು ಕಾಲಿನ ವಿಚಿತ್ರ ಕೋಳಿ ಪತ್ತೆಯಾಗಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ಇದನ್ನು ನೋಡಲು ಬರುತ್ತಿದ್ದಾರೆ. ಇದು ಪಾಲಿಮೆಲಿಯಾ ಎಂಬ ಅಪರೂಪದ ಅನುವಂಶಿಕ ದೋಷದಿಂದ ಉಂಟಾಗಿದೆ ಎಂದು ತಜ್ಞರು ಹೇಳಿದ್ದಾರೆ. ಈ ವಿಚಿತ್ರ ಘಟನೆ ಗ್ರಾಮಕ್ಕೆ ಪ್ರಸಿದ್ಧಿ ತಂದಿದೆ.
2025-11-19
ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ರಾಜ್ಯ ಸರ್ಕಾರ ಕಿಯೊ (KEO) ಪಿಸಿ ಬಿಡುಗಡೆ ಮಾಡಿದೆ. ಇದು ರಾಜ್ಯಾದ್ಯಂತ ವಿದ್ಯಾರ್ಥಿಗಳು, ಸಣ್ಣ ವ್ಯವಹಾರಗಳು ಮತ್ತು ಮನೆಗಳಿಗೆ ಡಿಜಿಟಲ್ ಸೌಲಭ್ಯ ಸುಧಾರಣೆಗೆ ನೆರವಾಗಲಿದೆ.
2025-11-19
ಇತ್ತೀಚೆಗೆಷ್ಟೇ ಬೀದರ್ ನಲ್ಲಿ ಎಟಿಎಂ ವಾಹನ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಕೋಟ್ಯಾಂತರ ರೂಪಾಯಿ ಇದ್ದ ಹಣದ ಟ್ರಂಕ್ ದೋಚಿರುವ ಘಟನೆ ಮಾಸುವ ಮುನ್ನವೇ ಬೆಂಗಳೂರಿನ ಹೃದಯಭಾಗದಲ್ಲೇ ಅತಿದೊಡ್ಡ ದರೋಡೆ ನಡೆದಿದೆ. ಗ್ಯಾಂಗ್ವೊಂದು ಹಾಡಹಗಲೇ ಎಟಿಎಂಗೆ ಹಣ ಹಾಕಲು ಹೊರಟಿದ್ದ ವಾಹನ ತಡೆದು ಬರೋಬ್ಬರಿ 7.11 ಕೋಟಿ ರೂಪಾಯಿ ಹಣ ದೋಚಿಕೊಂಡು ಪರಾರಿಯಾಗಿದೆ.
2025-11-19
ನಿಗದಿಯಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯ ಚುನಾವಣೆ ನಡೆಸಲು ಹೈಕೋರ್ಟ್ ಇಂದು ನಿರ್ದೇಶನ ನೀಡಿದೆ.
2025-11-19
ಮಾಜಿ ಸೈನಿಕನೋರ್ವ ಪತ್ನಿ ಹಾಗೂ ಅತ್ತೆಯನ್ನು ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
2025-11-19
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಭಾರತ ಮೂಲದ ಮಹಿಳೆ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆಕೆ ಮಗುವಿಗೆ ಜನ್ಮ ನೀಡಲು ಕೆಲವೇ ಕೆಲವು ವಾರಗಳು ಬಾಕಿ ಉಳಿದಿದ್ದವು. ಎಂಟು ತಿಂಗಳ ಗರ್ಭಿಣಿಯಾಗಿದ್ದ ಸಮನ್ವಿತಾ ಧಾರೇಶ್ವರ್ ತನ್ನ ಪತಿ ಮತ್ತು ಮೂರು ವರ್ಷದ ಮಗನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2025-11-19
ದೆಹಲಿ ಸ್ಫೋಟ ಪ್ರಕರಣದಲ್ಲಿ ಅಲ್ ಫಲಾಹ್ ಗ್ರೂಪ್ ಅಧ್ಯಕ್ಷ ಜವಾದ್ ಸಿದ್ದಿಕಿಯನ್ನು ಬಂಧಿಸಲಾಗಿದ್ದು, 13 ದಿನಗಳ ಇಡಿ ಕಸ್ಟಡಿಗೆ ಒಪ್ಪಿಸಲಾಗಿದೆ.
2025-11-19
Rashmika Mandanna: ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಶೀಘ್ರ ವಿವಾಹ ಆಗಲಿದ್ದಾರೆ. ಆದರೆ ಈ ಖುಷಿಯ ಸಂದರ್ಭದಲ್ಲಿ ಸುಖಾ-ಸುಮ್ಮನೆ ತಮ್ಮ ಮಾಜಿ ಪ್ರೇಮಿಯ ಬಗ್ಗೆ ದೂರುಗಳನ್ನು ಹೇಳಿಕೊಂಡು ಓಡಾಡುತ್ತಿರುವ ರಶ್ಮಿಕಾ, ಮಾಜಿ ಪ್ರೇಮಿ ಒಬ್ಬ ದುಷ್ಟ ವ್ಯಕ್ತಿ ಎಂಬ ನರೇಟಿವ್ ಸೆಟ್ ಮಾಡುವ ಪ್ರಯತ್ನದಲ್ಲಿ ಇದ್ದಂತಿದೆ. ಆದರೆ ಇದು ಅವರಿಗೇ ಉಲ್ಟಾ ಹೊಡೆದಿದ್ದು, ಇದೀಗ ಮತ್ತೆ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿ ಆಗುತ್ತಿದ್ದಾರೆ. ಆದರೂ ಸಹ ಮಾಜಿ ಪ್ರೇಮಿಯ ಬಗ್ಗೆ ದೂರು ಹೇಳುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ.
2025-11-19
ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ, ಬಾಬಾ ಅವರ ಜೀವನ, ಬೋಧನೆಗಳು ಮತ್ತು ಸೇವೆಯ ಸ್ಮರಣಾರ್ಥ 100 ರೂಪಾಯಿ ನಾಣ್ಯ ಮತ್ತು 4 ಅಂಚೆ ಚೀಟಿಗಳನ್ನು ಅನಾವರಣಗೊಳಿಸಿದರು.
2025-11-19
Upendra as Andhra King: ಕನ್ನಡದಲ್ಲಿ ಇರುವಂತೆ ಉಪೇಂದ್ರ ಅವರಿಗೆ ತೆಲುಗು ರಾಜ್ಯಗಳಲ್ಲಿಯೂ ಅಭಿಮಾನಿಗಳಿದ್ದಾರೆ. ಈ ವರೆಗೆ ಹಲವು ತೆಲುಗು ಸಿನಿಮಾಗಳಲ್ಲಿ ಉಪ್ಪಿ ನಟಿಸಿದ್ದಾರೆ ಮಾತ್ರವಲ್ಲದೆ ಅವರ ಹಲವು ಸಿನಿಮಾಗಳಿಗೆ ತೆಲುಗಿಗೆ ಡಬ್ ಆಗಿ ಸೂಪರ್ ಹಿಟ್ ಆಗಿವೆ. ಇದೀಗ ಉಪೇಂದ್ರ ನಟನೆಯ ಹೊಸ ತೆಲುಗು ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ರಾಮ್ ಪೋತಿನೇನಿ ಸಹ ನಟಿಸಿದ್ದಾರೆ. ಇಲ್ಲಿದೆ ಸಿನಿಮಾ ಬಗ್ಗೆ ಮಾಹಿತಿ...
2025-11-19
ವಿಮಾನ ನಿಲ್ದಾಣದ ರನ್ವೇ ಕಾರ್ಯಾಚರಣೆಯ ಪರಿಶೀಲನೆ, ದುರಸ್ತಿ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದರಿಂದ ವಿಮಾನ ಹಾರಾಟ ಕಾರ್ಯಾಚರಣೆಯಲ್ಲಿ ಅಡಚಣೆಯಾಗಲಿದೆ.
2025-11-19
ಪತಿ, ಮೊದಲ ಮಗನೊಂದಿಗೆ ರಸ್ತೆ ದಾಟುವಾಗ ಈ ಅನಾಹುತ ಸಂಭವಿಸಿದ್ದು, ಮೃತಪಟ್ಟ ಮಹಿಳೆಯ ಡೆಲಿವರಿಗೆ ಮುಂದಿನ ವಾರ ದಿನಾಂಕ ನಿಗದಿಯಾಗಿತ್ತು.
2025-11-19
Darshan Case: ನಟ ದರ್ಶನ್ ಜೈಲಿನಲ್ಲಿ ಚಳಿಯಿಂದಾಗಿ ಕಷ್ಟಪಡುತ್ತಿದ್ದು, ಕಂಬಳಿ ನೀಡುವಂತೆ ಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ. "ನಿದ್ರಿಸಲು ಸಹ ಆಗುತ್ತಿಲ್ಲ" ಎಂದು ದರ್ಶನ್ ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ಜಡ್ಜ್, ಜೈಲು ಅಧಿಕಾರಿಗಳಿಗೆ ಕಂಬಳಿ ನೀಡಲು ಆದೇಶಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಡಿ.3ಕ್ಕೆ ಮುಂದೂಡಲಾಗಿದೆ.
2025-11-19
ನಟಿ ರಚಿತಾ ರಾಮ್ ಬಸವನಗುಡಿ ಕಡಲೆಕಾಯಿ ಪರಿಷೆಗೆ ಮಾಸ್ಕ್ ಧರಿಸಿ ಭೇಟಿ ನೀಡಿದರು. ಅಭಿಮಾನಿಗಳಿಂದ ಗುರುತಿಸಲ್ಪಡದೆ ಸಾರ್ವಜನಿಕರಂತೆ ಸುತ್ತಾಡಿ ಖುಷಿ ಪಟ್ಟರು. 18 ವರ್ಷಗಳ ನಂತರ ಪರಿಷೆಗೆ ಬಂದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಅವರ ಹೊಸ ಸಿನಿಮಾ 'ಕ್ರಿಮಿನಲ್' ಟೈಟಲ್ ಲಾಂಚ್ ಕೂಡ ಇಲ್ಲೇ ನಡೆದಿತ್ತು. ಅವರನ್ನು ಗುರುತಿಸಲಾಗದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
2025-11-19
ಇಸ್ರೇಲ್ ದಾಳಿಯನ್ನು ಹಮಾಸ್ ಖಂಡಿಸಿದೆ, ಆದರೆ ಅತ್ತ ಇಸ್ರೇಲ್ ಆರೋಪವನ್ನು ತಳ್ಳಿ ಹಾಕಿದೆ.
2025-11-19
Mushfiqur Rahim Test Records: ಬಾಂಗ್ಲಾದೇಶ್ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗೆ 108 ಆಟಗಾರರು ಕಣಕ್ಕಿಳಿದಿದ್ದಾರೆ. ಇವರಲ್ಲಿ 107 ಆಟಗಾರರಿಗೆ ಸಾಧ್ಯವಾಗದೇ ಇರುವುದನ್ನು ಮುಶ್ಫಿಕುರ್ ರಹೀಮ್ ಸಾಧಿಸಿ ತೋರಿಸಿದ್ದಾರೆ. ಅದು ಕೂಡ ಬರೋಬ್ಬರಿ 20 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡುವ ಮೂಲಕ ಎಂಬುದು ವಿಶೇಷ.
2025-11-19
India vs South Africa Test: ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ರೋಚಕ ಜಯ ಸಾಧಿಸಿತ್ತು. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದ ಕೊನೆಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾಗೆ 124 ರನ್ಗಳ ಗುರಿ ನೀಡಲಾಗಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾಗಿ ಭಾರತ ತಂಡ 30 ರನ್ಗಳಿಂದ ಸೋಲನುಭವಿಸಿತ್ತು. ಇದೀಗ ಉಭಯ ತಂಡಗಳು ದ್ವಿತೀಯ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ.
2025-11-19
Barsapara Cricket Stadium: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವು ನವೆಂಬರ್ 22 ರಿಂದ ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿರುವುದು ಇದೇ ಮೊದಲು. ಅಂದರೆ ಟೀಮ್ ಇಂಡಿಯಾ ಇಲ್ಲಿ ಬಿಳಿ ಜೆರ್ಸಿ ಧರಿಸಿ ಆಡುತ್ತಿರುವುದು ಇದೇ ಮೊದಲು.
2025-11-19
ಆಸ್ಟ್ರಿಯನ್ ಮೂಲದ ವರ್ಣಚಿತ್ರಕಾರನ ಈ ಕಲಾಕೃತಿಗೆ ಸುಮಾರು 20 ನಿಮಿಷಗಳ ಕಾಲ ಬಿಡ್ಡಿಂಗ್ ನಡೆಯಿತು.
2025-11-19
Pakistan vs Zimbabwe: ಝಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಗೆಲುವು ದಾಖಲಿಸಿದೆ. ರಾವಲ್ಪಿಂಡಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ 20 ಓವರ್ಗಳಲ್ಲಿ 147 ರನ್ ಕಲೆಹಾಕಿದ್ದರು. ಈ ಗುರಿಯನ್ನು ಪಾಕಿಸ್ತಾನ್ ತಂಡ 19.2 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ 5 ವಿಕೆಟ್ಗಳ ಜಯ ಸಾಧಿಸಿದೆ.
2025-11-19
India vs South Africa: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ಏಕದಿನ ಸಿರೀಸ್ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಯು ನವೆಂಬರ್ 30 ರಿಂದ ಆರಂಭವಾಗಲಿದೆ. ಆದರೆ ಈ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
2025-11-19
ಮೂಲತಃ ಮಂಗಳೂರಿನವರಾದ ಐಶ್ವರ್ಯಾ ರೈ ಬಚ್ಚನ್ ವಿಶ್ವ ಸುಂದರಿ ಪಟ್ಟ ಗೆದ್ದು ಇಂದಿಗೆ 31 ವರ್ಷಗಳಾಗಿವೆ.
2025-11-19
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್ ಚಡ್ಡಾ ತಮ್ಮ ಗಂಡು ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದಾರೆ.
2025-11-19
ಜೈಲಿನಲ್ಲಿ ಕೈದಿಗಳ ಮದ್ಯದ ಪಾರ್ಟಿ ವಿಡಿಯೋ ವೈರಲ್ ಪ್ರಕರಣದಲ್ಲಿ ನಟ ಧನ್ವೀರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೆಸರನ್ನು ಬಾಯ್ಬಿಟ್ಟಿದ್ದಾರೆ. ಈ ವಿಡಿಯೋವನ್ನು ವಕೀಲರಿಂದ ಪಡೆದು ವಿಜಯಲಕ್ಷ್ಮೀಗೆ ಕಳುಹಿಸಿದ್ದಾಗಿ ಧನ್ವೀರ್ ವಿಚಾರಣೆ ವೇಳೆ ತಿಳಿಸಿದ್ದಾರೆ. ಇದರಿಂದ ವಿಜಯಲಕ್ಷ್ಮೀ ಸಹ ತನಿಖೆ ಎದುರಿಸುವ ಸಾಧ್ಯತೆ ಇದೆ.
2025-11-19
ಬೆಂಗಳೂರು ನಗರದೆಲ್ಲೆಡೆ ಪೊಲೀಸರು ನಾಕಾಬಂದಿ ಹಾಕಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.
2025-11-19
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy