H16 News
Logo
ಹಂಪಿಗೆ ಭೇಟಿ ನೀಡುತ್ತಿದ್ದ ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಕೆ: ಕಾರಣ ಏನು ಗೊತ್ತಾ?
Breaking News
ಹಂಪಿಗೆ ಭೇಟಿ ನೀಡುತ್ತಿದ್ದ ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಕೆ: ಕಾರಣ ಏನು ಗೊತ್ತಾ?

ಯುನೆಸ್ಕೋ ಮಾನ್ಯತೆ ಪಡೆದಿರುವ ಹಂಪಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿದಿದೆ. 2024-25ರಲ್ಲಿ 3,818 ಪ್ರವಾಸಿಗರು ಮಾತ್ರ ಭೇಟಿ ನೀಡಿದ್ದಾರೆ. ಭದ್ರತೆಯ ಆತಂಕ ಮತ್ತು ಮೂಲಸೌಕರ್ಯ ಕೊರತೆ ಇದಕ್ಕೆ ಪ್ರಮುಖ ಕಾರಣ. ಇದು ಸ್ಥಳೀಯ ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ದೊಡ್ಡ ಹೊಡೆತ ನೀಡಿದೆ.

2025-11-17

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ
Breaking News
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ಬಿಹಾರ ವಿಧಾನಸಭಾ ಚುನಾವಣೆ ನಡೆದು ಎನ್ಡಿಯ ಬಹುಮತ ಗಳಿಸಿತ್ತು. ಇದೇ ನವೆಂಬರ್ 20ರಂದು ನೂತನ ಸಿಎಂ ಪ್ರಮಾಣವಚನ ಕಾರ್ಯಕ್ರಮ ನೆರವೇರಲಿದ್ದು, ಇದೀಗ ಸಿಎಂ ನಿತೀಶ್ ಕುಮಾರ್ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ 243 ಸ್ಥಾನಗಳಲ್ಲಿ 202 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್ಡಿಎ ನಾಲ್ಕನೇ ಮೂರು ಭಾಗದಷ್ಟು ಬಹುಮತವನ್ನು ಗಳಿಸಿತ್ತು.

2025-11-17

ಹೆಂಡತಿಯನ್ನೇ ಅಡವಿಟ್ಟು ಸೋತ ವ್ಯಕ್ತಿ, ಆಕೆಯ ಮೇಲೆ ಮಾವ  ಅತ್ಯಾಚಾರ
Breaking News
ಹೆಂಡತಿಯನ್ನೇ ಅಡವಿಟ್ಟು ಸೋತ ವ್ಯಕ್ತಿ, ಆಕೆಯ ಮೇಲೆ ಮಾವ ಅತ್ಯಾಚಾರ

ಗಂಡನಿಗೆ ಜೂಜಾಡುವ ಚಟ, ಹಣ ಸಾಲದ್ದಕ್ಕೆ ಹೆಂಡತಿಯನ್ನೇ ಅಡವಿಟ್ಟು ಸೋತು ಆಕೆಯ ಜೀವನವನ್ನೇ ಹಾಳು ಮಾಡಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ನಡೆದಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಮಹಿಳೆ ಮೀರತ್ನ ಖಿವಾಯ್ ಗ್ರಾಮದ ಡ್ಯಾನಿಶ್ ಎಂಬುವವರನ್ನು ಮದುವೆಯಾಗಿದ್ದಳು. ಮದುವೆಯಾಗಿ ಸ್ವಲ್ಪ ಸಮಯದ ಬಳಿಕ ಪತಿ ಮತ್ತು ಅತ್ತೆ ಮಾವ ನಿರಂತರ ದೈಹಿಕ ಹಿಂಸೆ ನೀಡಲು ಶುರು ಮಾಡಿದ್ದರು. ವರದಕ್ಷಿಣೆ ತೆಗೆದುಕೊಂಡು ಬರುವಂತೆ ನಿರಂತರ ಕಿರುಕುಳ ನೀಡುತ್ತಿದ್ದರು. ಹಲ್ಲೆ ನಿರಂತರವಾಗಿ ಮುಂದುವರೆದಿತ್ತು.

2025-11-17

Bengaluru Power Cut: ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ
Breaking News
Bengaluru Power Cut: ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ

ನವೆಂಬರ್ 18ರಂದು ಬೆಂಗಳೂರಿನ ಹಲವು ಭಾಗಗಳಲ್ಲಿ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. 66/11 ಕೆವಿ ಶೋಭಾ ಸಿಟಿ ಉಪಕೇಂದ್ರದಲ್ಲಿ ಬೆಸ್ಕಾಂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲಿರುವ ಕಾರಣ, ಶೋಭಾ ಸಿಟಿ, ಆರ್.ಕೆ. ಹೆಗ್ಡೆ ನಗರ, ಥಣಿಸಂದ್ರ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

2025-11-17

ದೇಶದ ಅತ್ಯುತ್ತಮ ಪೊಲೀಸ್ ಠಾಣೆ  ಆಯ್ಕೆಯಾದ ರಾಯಚೂರಿನ ಕವಿತಾಳ ಠಾಣೆ
Breaking News
ದೇಶದ ಅತ್ಯುತ್ತಮ ಪೊಲೀಸ್ ಠಾಣೆ ಆಯ್ಕೆಯಾದ ರಾಯಚೂರಿನ ಕವಿತಾಳ ಠಾಣೆ

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕವಿತಾಳ ಪೊಲೀಸ್ ಠಾಣೆ, ಕೇಂದ್ರ ಗೃಹ ಸಚಿವಾಲಯದ 2025ರ ಅತ್ಯುತ್ತಮ ಠಾಣೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕರ್ನಾಟಕದಿಂದ ಆಯ್ಕೆಯಾದ ಏಕೈಕ ಠಾಣೆ ಇದಾಗಿದ್ದು, ಹಲವು ಮಾನದಂಡಗಳ ಆಧಾರದ ಮೇಲೆ ಇದು ದೇಶದ ಟಾಪ್ ಮೂರು ಠಾಣೆಗಳಲ್ಲಿ ಒಂದಾಗಿದೆ. ಈ ಮೂರು ಠಾಣೆಗಳಿಗೆ ನವೆಂಬರ್ 28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

2025-11-17

ಕೊಪ್ಪಳ: ಹಣ ಕೊಂಡೊಯ್ಯಲು ಬಂದಾಕೆಗೆ ಮತ್ತು ಬರಿಸುವ ಜ್ಯೂಸ್ ಕುಡಿಸಿ ನಾಲ್ವರಿಂದ ಅತ್ಯಾಚಾರ
Breaking News
ಕೊಪ್ಪಳ: ಹಣ ಕೊಂಡೊಯ್ಯಲು ಬಂದಾಕೆಗೆ ಮತ್ತು ಬರಿಸುವ ಜ್ಯೂಸ್ ಕುಡಿಸಿ ನಾಲ್ವರಿಂದ ಅತ್ಯಾಚಾರ

ಕಳೆದ ವರ್ಷ ಕೊಪ್ಪಳ ಜಿಲ್ಲೆಯಲ್ಲಿ ನಡೆದ ಗ್ಯಾಂಗ್ ರೇಪ್ ಇಡೀ ದೇಶದ್ಯಾಂತ ಸದ್ದು ಮಾಡಿತ್ತು. ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪ್ರಕರಣವನ್ನು ಕೊಪ್ಪಳ ಜಿಲ್ಲೆಯ ಜನ ಇನ್ನೂ ಮರೆತಿಲ್ಲ. ಅಂಥದ್ದರಲ್ಲಿ ಇದೀಗ ಅಂಥದ್ದೇ ಒಂದು ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ಮೇಲೆ ನಾಲ್ವರು ಕೀಚಕರು ಮತ್ತು ಬರಿಸುವ ಜ್ಯೂಸ್ ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

2025-11-17

ರೂಲ್ಸ್ ಗೊತ್ತಿಲ್ದೆ ಅಂಪೈರ್ ಜೊತೆ ವಾಗ್ವಾದಕ್ಕಿಳಿದ ಟೀಮ್ ಇಂಡಿಯಾ
Sports
ರೂಲ್ಸ್ ಗೊತ್ತಿಲ್ದೆ ಅಂಪೈರ್ ಜೊತೆ ವಾಗ್ವಾದಕ್ಕಿಳಿದ ಟೀಮ್ ಇಂಡಿಯಾ

India A vs Pakistan A: ರೈಸಿಂಗ್ ಸ್ಟಾರ್ ಏಷ್ಯಾಕಪ್ ಟೂರ್ನಿಯ 6ನೇ ಪಂದ್ಯದಲ್ಲಿ ಪಾಕಿಸ್ತಾನ್ ಎ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡವು 19 ಓವರ್ಗಳಲ್ಲಿ 136 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು 13.2 ಓವರ್ಗಳಲ್ಲಿ ಚೇಸ್ ಮಾಡಿ ಪಾಕಿಸ್ತಾನ್ ಎ ತಂಡ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

2025-11-17

ಟೀಮ್ ಇಂಡಿಯಾ ಸೋಲಿನ ಬೆನ್ನಲ್ಲೇ ಕೆಪಿ ವಾಗ್ದಾಳಿ
Sports
ಟೀಮ್ ಇಂಡಿಯಾ ಸೋಲಿನ ಬೆನ್ನಲ್ಲೇ ಕೆಪಿ ವಾಗ್ದಾಳಿ

India vs South Africa Test: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ ಮುಗಿದಿದೆ. ಕೊಲ್ಕತ್ತಾದಲ್ಲಿ ನಡೆದ ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ 30 ರನ್ಗಳ ಜಯ ಸಾಧಿಸಿದೆ. ಇನ್ನು ದ್ವಿತೀಯ ಪಂದ್ಯವು ನವೆಂಬರ್ 22 ರಿಂದ ಶುರುವಾಗಲಿದ್ದು, ಈ ಪಂದ್ಯಕ್ಕೆ ಗುವಾಹಟಿಯ ಬರ್ಸಪಾರ ಸ್ಟೇಡಿಯಂ ಆತಿಥ್ಯವಹಿಸಲಿದೆ.

2025-11-17

ವಾರಣಾಸಿ’ ಚಿತ್ರಕ್ಕಾಗಿ ಹಾಲಿವುಡ್ ದೃಶ್ಯಗಳ ಕಾಪಿ ಮಾಡಿದ್ರಾ ರಾಜಮೌಳಿ
Entertainment
ವಾರಣಾಸಿ’ ಚಿತ್ರಕ್ಕಾಗಿ ಹಾಲಿವುಡ್ ದೃಶ್ಯಗಳ ಕಾಪಿ ಮಾಡಿದ್ರಾ ರಾಜಮೌಳಿ

ರಾಜಮೌಳಿ ಅವರ ಬಹುನಿರೀಕ್ಷಿತ 'ವಾರಣಾಸಿ' ಸಿನಿಮಾದ ಟೀಸರ್ ಕೃತಿ ಚೌರ್ಯದ ಆರೋಪ ಎದುರಿಸುತ್ತಿದೆ. ನೆಟ್ಟಿಗರು ಟೀಸರ್ನ ದೃಶ್ಯಗಳನ್ನು ಹಾಲಿವುಡ್ ಚಿತ್ರಗಳೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಇದು ಹಿಂದೆ ಕೂಡ ರಾಜಮೌಳಿ ಎದುರಿಸಿದ ಟೀಕೆಯಾಗಿತ್ತು. ಮಹೇಶ್ ಬಾಬು ಅಭಿನಯದ ಈ ಚಿತ್ರ 2027ಕ್ಕೆ ಬಿಡುಗಡೆಯಾಗಲಿದೆ.

2025-11-17

ಟನಲ್ ರೋಡ್ ಬಳಿಕ ಬೆಂಗಳೂರು-ತುಮಕೂರು ಮೆಟ್ರೋಗೂ ಸಂಸದ ತೇಜಸ್ವಿ ಸೂರ್ಯ ಆಕ್ಷೇಪ
Breaking News
ಟನಲ್ ರೋಡ್ ಬಳಿಕ ಬೆಂಗಳೂರು-ತುಮಕೂರು ಮೆಟ್ರೋಗೂ ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ಬೆಂಗಳೂರು-ತುಮಕೂರು ಮೆಟ್ರೋ ವಿಸ್ತರಣೆಗೆ ಸಂಸದ ತೇಜಸ್ವಿ ಸೂರ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೆಟ್ರೋ ಯೋಜನೆ ದುಬಾರಿಯಾಗಿದ್ದು ನಗರ ದಟ್ಟಣೆಗೆ ಮಾತ್ರ ಸೂಕ್ತ ಎಂದು ಅವರು ವಾದಿಸಿದ್ದಾರೆ. ಬದಲಾಗಿ, ಮುಂಬೈ-ಠಾಣಾ ಮಾದರಿಯಲ್ಲಿ ರಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್ (RRTS) ಅಥವಾ ಉಪನಗರ ರೈಲು ಯೋಜನೆ ಉತ್ತಮ ಮತ್ತು ಅಗ್ಗದ ಆಯ್ಕೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

2025-11-17

ಸಂಪುಟ ಸರ್ಜರಿ ಸಸ್ಪೆನ್ಸ್ಸಿ ಎಂ ಸಿದ್ದರಾಮಯ್ಯ ಭೇಟಿಯಾದ ಸಾಲು ಸಾಲು ನಾಯಕರು
Breaking News
ಸಂಪುಟ ಸರ್ಜರಿ ಸಸ್ಪೆನ್ಸ್ಸಿ ಎಂ ಸಿದ್ದರಾಮಯ್ಯ ಭೇಟಿಯಾದ ಸಾಲು ಸಾಲು ನಾಯಕರು

ಸಚಿವ ಸಂಪುಟ ಸರ್ಜರಿ ಮಾತುಕತೆಗಳ ಹಿನ್ನೆಲೆಯಲ್ಲಿ ಮುಖ್ಯಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಸಿಎಂ ಪ್ರವಾಸಕ್ಕೂ ಮುನ್ನ ಮಂತ್ರಿ ಸ್ಥಾನದ ಆಕಾಂಕ್ಷಿಗಳು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು, ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರೊಂದಿಗಿನ ಪ್ರತ್ಯೇಕ ಮಾತುಕತೆ ಕುತೂಹಲ ಮೂಡಿಸಿದೆ. ಶಾಸಕ ವಿಜಯಾನಂದ ಕಾಶಪ್ಪನವರ್ ಕೂಡ ತಮಗೆ ಸಚಿವ ಸ್ಥಾನದ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2025-11-17

ಶೇಖ್ ಹಸೀನಾಗೆ ಗಲ್ಲುಶಿಕ್ಷೆ; ಭಾರತದಿಂದ ಬಾಂಗ್ಲಾದೇಶಕ್ಕೆ ಹಸ್ತಾಂತರವಾಗುತ್ತಾರಾ  ಪ್ರಧಾನಿ
Breaking News
ಶೇಖ್ ಹಸೀನಾಗೆ ಗಲ್ಲುಶಿಕ್ಷೆ; ಭಾರತದಿಂದ ಬಾಂಗ್ಲಾದೇಶಕ್ಕೆ ಹಸ್ತಾಂತರವಾಗುತ್ತಾರಾ ಪ್ರಧಾನಿ

ಬಾಂಗ್ಲಾದೇಶದ ಉಚ್ಛಾಟಿತ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರ ಮತ್ತು ಸಾಮೂಹಿಕ ಸಾವಿನ ಪ್ರಕರಣದಲ್ಲಿ ಕೋರ್ಟ್ ಇಂದು ಮರಣದಂಡನೆ ವಿಧಿಸಿದೆ. ಬಾಂಗ್ಲಾದೇಶದಿಂದ ಪಲಾಯನ ಮಾಡಿದ್ದ ಶೇಖ್ ಹಸೀನಾ ಆಗಿನಿಂದ ಭಾರತದ ದೆಹಲಿಯಲ್ಲಿ ಆಶ್ರಯ ಪಡೆದಿದ್ದಾರೆ. ದೆಹಲಿಯಲ್ಲಿ ಸುರಕ್ಷಿತವಾಗಿರುವ ಶೇಖ್ ಹಸೀನಾ ಅವರಿಗೆ ಗಲ್ಲು ಶಿಕ್ಷೆಯಾಗಿರುವುದರಿಂದ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುತ್ತದೆಯೇ? ಎಂಬ ಚರ್ಚೆ ಮೂಡಿದೆ. ಭಾರತದ ಮುಂದಿರುವ ಆಯ್ಕೆಗಳೇನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

2025-11-17

ಗುಂಡಿನ ಸದ್ದಿಗೆ ಓಡಿದ ಜನ, ಕಾಂಗೋದ ಗಣಿ ಸೇತುವೆ ಕುಸಿದು 32 ಮಂದಿ ಸಾವು
Breaking News
ಗುಂಡಿನ ಸದ್ದಿಗೆ ಓಡಿದ ಜನ, ಕಾಂಗೋದ ಗಣಿ ಸೇತುವೆ ಕುಸಿದು 32 ಮಂದಿ ಸಾವು

ಕಾಂಗೋ(Congo)ದಲ್ಲಿ ತಾಮ್ರದ ಗಣಿ ಬಳಿಯ ಸೇತುವೆ ಕುಸಿದು 32 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಗಣಿ ಬಳಿ ಗುಂಡಿನ ಸದ್ದು ಕೇಳಿಬಂದಿತ್ತು, ಜನರು ಭಯದಿಂದ ಸೇತುವೆ ಮೇಲೆ ಓಡಿ ಹೋದ ಪರಿಣಾಮ ಸೇತುವೆ ಕುಸಿದು 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ವರ್ಷ ದೇಶದಲ್ಲಿ ಸಂಭವಿಸಿದ ಅತ್ಯಂತ ಭೀಕರ ಗಣಿಗಾರಿಕೆ ವಿಪತ್ತುಗಳಲ್ಲಿ ಇದು ಒಂದು ಎಂದು ಅಧಿಕಾರಿಗಳು ಹೇಳಿದ್ದಾರೆ.

2025-11-17

ಸೌದಿ ಅರೇಬಿಯಾದಲ್ಲಿ ಡೀಸೆಲ್ ಟ್ಯಾಂಕರ್ಗೆ ಬಸ್ ಡಿಕ್ಕಿ, 42 ಭಾರತೀಯರ ಸಜೀವ ದಹನ
Breaking News
ಸೌದಿ ಅರೇಬಿಯಾದಲ್ಲಿ ಡೀಸೆಲ್ ಟ್ಯಾಂಕರ್ಗೆ ಬಸ್ ಡಿಕ್ಕಿ, 42 ಭಾರತೀಯರ ಸಜೀವ ದಹನ

ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ, ಡೀಸೆಲ್ ಟ್ಯಾಂಕರ್ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 42 ಮಂದಿ ಭಾರತೀಯರು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಈ 42 ಮಂದಿ ಮೆಕ್ಕಾದಿಂದ ಮದೀನಕ್ಕೆ ಹೋಗುತ್ತಿದ್ದರು, ಸೌದಿ ಅರೇಬಿಯಾದ ಮುಫರಿಹತ್ ಬಳಿ ಈ ದುರಂತ ಸಂಭವಿಸಿದೆ. ಮೃತರೆಲ್ಲರೂ ಹೈದರಾಬಾದ್ ಹಾಗೂ ತೆಲಂಗಾಣ ಮೂಲದವರು ಎನ್ನುವ ಮಾಹಿತಿ ಲಭ್ಯವಾಗಿದೆ.

2025-11-17

IND vs SA: ದ್ವಿತೀಯ ಟೆಸ್ಟ್ಗೆ ಟೀಮ್ ಇಂಡಿಯಾದ ಪ್ರಮುಖ ಆಟಗಾರ ಡೌಟ್
Sports
IND vs SA: ದ್ವಿತೀಯ ಟೆಸ್ಟ್ಗೆ ಟೀಮ್ ಇಂಡಿಯಾದ ಪ್ರಮುಖ ಆಟಗಾರ ಡೌಟ್

India vs South Africa Test: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ ಮುಗಿದಿದೆ. ಕೊಲ್ಕತ್ತಾದಲ್ಲಿ ನಡೆದ ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ 30 ರನ್ಗಳ ಜಯ ಸಾಧಿಸಿದೆ. ಇನ್ನು ದ್ವಿತೀಯ ಪಂದ್ಯವು ನವೆಂಬರ್ 22 ರಿಂದ ಶುರುವಾಗಲಿದ್ದು, ಈ ಪಂದ್ಯಕ್ಕೆ ಗುವಾಹಟಿಯ ಬರ್ಸಪಾರ ಸ್ಟೇಡಿಯಂ ಆತಿಥ್ಯವಹಿಸಲಿದೆ.

2025-11-17

IPL 2026: ಕೇವಲ 31 OP ಸ್ಲಾಟ್ಹ ರಾಜಿನಲ್ಲಿ ಎಷ್ಟು ಆಟಗಾರರಿಗೆ ಸಿಗಲಿದೆ ಚಾನ್ಸ್
Sports
IPL 2026: ಕೇವಲ 31 OP ಸ್ಲಾಟ್ಹ ರಾಜಿನಲ್ಲಿ ಎಷ್ಟು ಆಟಗಾರರಿಗೆ ಸಿಗಲಿದೆ ಚಾನ್ಸ್

IPL 2026 Mini Auction: ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿಗಾಗಿ ಡಿಸೆಂಬರ್ 16 ರಂದು ಮಿನಿ ಹರಾಜು ನಡೆಯಲಿದೆ. ಅಬುಧಾಬಿಯಲ್ಲಿ ನಡೆಯಲಿರುವ ಈ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಆರು ಭಾರತೀಯ ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಖರೀದಿಸಬಹುದು.

2025-11-17

ಪಿಸ್ತಾ ಸೇವನೆ ಮಾಡುವ ಅಭ್ಯಾಸ ನಿಮಗಿದ್ಯಾ ಪ್ರತಿದಿನ ಎಷ್ಟು ತಿನ್ನುವುದು ಒಳ್ಳೆಯದು
Food
ಪಿಸ್ತಾ ಸೇವನೆ ಮಾಡುವ ಅಭ್ಯಾಸ ನಿಮಗಿದ್ಯಾ ಪ್ರತಿದಿನ ಎಷ್ಟು ತಿನ್ನುವುದು ಒಳ್ಳೆಯದು

ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಜಾಗರೂಕರಾಗಿರುವುದು ಬಹಳ ಮುಖ್ಯ. ಅದರಲ್ಲಿಯೂ ಸಾಧ್ಯವಾದಷ್ಟು ಆರೋಗ್ಯಕರ ಆಹಾರವನ್ನು ಸೇವಿಸಿ, ಇದು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಋತುವಿನಲ್ಲಿ, ಕಡಲೆಕಾಯಿ ಮತ್ತು ಬಾದಾಮಿಯಂತೆಯೇ ಪಿಸ್ತಾಗಳ ಸೇವನೆ ಕೂಡ ಬಹಳ ಪ್ರಯೋಜನಕಾರಿ. ಆದರೆ ಅನೇಕರಿಗೆ ಪಿಸ್ತಾ ಇಷ್ಟವಾಗುವುದಿಲ್ಲ. ಅದರಲ್ಲಿಯೂ ಪಿಸ್ತಾ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಅದಕ್ಕಾಗಿಯೇ ಪಿಸ್ತಾ ಸೇವನೆಯನ್ನು ಕಡಿಮೆ ಮಾಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ದಿನಕ್ಕೆ ಎಷ್ಟು ಪಿಸ್ತಾ ತಿನ್ನಬೇಕು, ಯಾವ ಸಮಯದಲ್ಲಿ ತಿನ್ನಬೇಕು, ಇದು ಯಾರಿಗೆ ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

2025-11-17

ಬಾಯಿ ಹುಣ್ಣಿನ ಸಮಸ್ಯೆಯಾ ಬಾಬಾ ರಾಮದೇವ್ ತಿಳಿಸಿದ ಆಯುರ್ವೇದ ಪರಿಹಾರಗಳಿವು
Health
ಬಾಯಿ ಹುಣ್ಣಿನ ಸಮಸ್ಯೆಯಾ ಬಾಬಾ ರಾಮದೇವ್ ತಿಳಿಸಿದ ಆಯುರ್ವೇದ ಪರಿಹಾರಗಳಿವು

Ayurvedic remedies for mouth ulcers: ಅನೇಕ ಜನರು ಪದೇ ಪದೇ ಬಾಯಿ ಹುಣ್ಣುಗಳಿಂದ ಬಳಲುತ್ತಿದ್ದಾರೆ. ಗಂಭೀರ ಸಮಸ್ಯೆಗಳಿಗೆ ಎಡೆ ಮಾಡಿಕೊಡುವ ಇದನ್ನು ಹಗುರವಾಗಿ ಪರಿಗಣಿಸಬಾರದು. ಬಾಬಾ ರಾಮದೇವ್ ಬಾಯಿ ಹುಣ್ಣುಗಳನ್ನು ತಡೆಗಟ್ಟಲು ಕೆಲವು ಉಪಯುಕ್ತ ಆಯುರ್ವೇದ ಪರಿಹಾರಗಳನ್ನು ಸೂಚಿಸಿದ್ದಾರೆ. ಬಾಬಾ ರಾಮದೇವ್ ಸೂಚಿಸಿದ ಆಯುರ್ವೇದ ವಿಧಾನಗಳು ಬಾಯಿ ಹುಣ್ಣುಗಳನ್ನು ನಿವಾರಿಸಲು ಮತ್ತು ತಡೆಗಟ್ಟುವಲ್ಲಿ ಪ್ರಯೋಜನಕಾರಿಯಾಗಬಹುದು.

2025-11-17

ಭಾರತ-ಅಮೆರಿಕ ನಡುವೆ ಮೊತ್ತಮೊದಲ ಎಲ್ಪಿಜಿ ಒಪ್ಪಂದ  ಭಾರತಕ್ಕೆ
Business
ಭಾರತ-ಅಮೆರಿಕ ನಡುವೆ ಮೊತ್ತಮೊದಲ ಎಲ್ಪಿಜಿ ಒಪ್ಪಂದ ಭಾರತಕ್ಕೆ

India signs LPG structured deal with US: ರಷ್ಯಾದಿಂದ ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳುವುದು, ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಕ್ಕೆ ಮುಳ್ಳಿನಂತಿದೆ. ಇಂಧನ ಸುರಕ್ಷತೆಯೇ ತನಗೆ ಮುಖ್ಯ ಎಂಬುದು ಭಾರತದ ಸ್ಪಷ್ಟ ನಿಲುವು. ಈ ಮಧ್ಯೆ ಅಮೆರಿಕದೊಂದಿಗೆ ಆಮದು ಹೆಚ್ಚಿಸಲು ಹೊರಟಿರುವ ಭಾರತವು ಈಗ 2.2 ಮಿಲಿಯನ್ ಟನ್ ಎಲ್ಪಿಜಿ ಒಪ್ಪಂದ ಮಾಡಿಕೊಂಡಿದೆ. ಇದು ಈ ಎರಡು ದೇಶಗಳ ನಡುವಿನ ಮೊದಲ ಸ್ಟ್ರಾಟಿಜಿಕ್ ಎಲ್ಪಿಜಿ ಡೀಲ್ ಎನಿಸಿದೆ.

2025-11-17

PM Kisan 21st Installment: ಪಿಎಂ ಕಿಸಾನ್ ಹೊಸ ಕಂತಿನ ಹಣ ಬಿಡುಗಡೆ ದಿನ
Business
PM Kisan 21st Installment: ಪಿಎಂ ಕಿಸಾನ್ ಹೊಸ ಕಂತಿನ ಹಣ ಬಿಡುಗಡೆ ದಿನ

PM Kisan Samman Nidhi Yojana 21st Installment Date and Time: ಪಿಎಂ ಕಿಸಾನ್ ಯೋಜನೆಯಡಿ 21ನೇ ಕಂತಿನ ಹಣ ಬಿಡುಗಡೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ. ಮಾಹಿತಿ ಪ್ರಕಾರ ನವೆಂಬರ್ 19, ಬುಧವಾರದಂದು 21ನೇ ಕಂತಿನ ಹಣ ಬಿಡುಗಡೆ ಆಗಲಿದೆ. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಅಪ್ಡೇಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ.

2025-11-17

Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಮತ್ತೆ ಇಳಿಕೆ
Trending
Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಮತ್ತೆ ಇಳಿಕೆ

Bullion Market 2025 November 17th: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸೋಮವಾರ ಕಡಿಮೆಗೊಂಡಿವೆ. ಚಿನ್ನದ ಬೆಲೆ ಗ್ರಾಮ್ಗೆ 10 ರೂ ತಗ್ಗಿದರೆ, ಬೆಳ್ಳಿ ಬೆಲೆ 2 ರೂ ಇಳಿದಿದೆ. ಆಭರಣ ಚಿನ್ನದ ಬೆಲೆ 11,465 ರೂನಿಂದ 11,455 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 12,497 ರೂಗೆ ತಗ್ಗಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 167 ರೂಗೆ ಇಳಿದಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 173 ರೂಗೆ ಇಳಿದಿದೆ.

2025-11-17

ಹೈಕೋರ್ಟ್ನ ಧಾರವಾಡ ವಿಭಾಗೀಯ ಪೀಠದಲ್ಲಿ ರಾಜ್ಯ ಸರ್ಕಾರಕ್ಕೆ ಮತ್ತೆ ಹಿನ್ನಡೆ
Breaking News
ಹೈಕೋರ್ಟ್ನ ಧಾರವಾಡ ವಿಭಾಗೀಯ ಪೀಠದಲ್ಲಿ ರಾಜ್ಯ ಸರ್ಕಾರಕ್ಕೆ ಮತ್ತೆ ಹಿನ್ನಡೆ

ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿರ್ಬಂಧಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ಮತ್ತೆ ಹಿನ್ನಡೆ ಆಗಿದೆ. ಮಧ್ಯಂತರ ತಡೆಯಾಜ್ಞೆಯನ್ನು ಅರ್ಜಿದಾರರಿಗೆ ಸೀಮಿತಗೊಳಿಸುವ ಸರ್ಕಾರದ ಮನವಿಯನ್ನು ಹೈಕೋರ್ಟ್ನ ಧಾರವಾಡ ವಿಭಾಗೀಯ ಪೀಠ ನಿರಾಕರಿಸಿದೆ. ಸರ್ಕಾರದ ಆದೇಶವು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

2025-11-17

ಟ್ಟಡದ ಮೇಲಿಂದ ತಳ್ಳಿ ಪತಿಯನ್ನೇ ಕೊಂದ ಪತ್ನಿ
Breaking News
ಟ್ಟಡದ ಮೇಲಿಂದ ತಳ್ಳಿ ಪತಿಯನ್ನೇ ಕೊಂದ ಪತ್ನಿ

ಬೆಂಗಳೂರಿನ ಅಂದ್ರಹಳ್ಳಿಯ ಮಂಜುನಾಥ ಬಡಾವಣೆಯ ಮನೆಯ ಕಟ್ಟಡದ ಮೇಲಿಂದ ಪತಿಯನ್ನೇ ಪತ್ನಿ ತಳ್ಳಿ ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ಪತ್ನಿಗೆ ಆಕೆಯ ಸೋದರ ಮಾವ ಕೂಡ ಸಹಾಯ ಮಾಡಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

2025-11-17

28 ಕೃಷ್ಣಮೃಗಗಳ ಸಾವಿನ ಕೇಸ್: ಗೊಂದಲ ಮೂಡಿಸಿರುವ ಅರಣ್ಯ ಅಧಿಕಾರಿಗಳ ಹೇಳಿಕೆ
Breaking News
28 ಕೃಷ್ಣಮೃಗಗಳ ಸಾವಿನ ಕೇಸ್: ಗೊಂದಲ ಮೂಡಿಸಿರುವ ಅರಣ್ಯ ಅಧಿಕಾರಿಗಳ ಹೇಳಿಕೆ

ಬೆಳಗಾವಿಯ ಕಿತ್ತೂರು ಚನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣಮೃಗಗಳ ಸಾವಿನ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ. ಅರಣ್ಯ ಅಧಿಕಾರಿಗಳು ಸಚಿವರಿಗೆ ಆಹಾರದಿಂದ ಉಂಟಾದ ಸಮಸ್ಯೆ ಎಂದು ಮಾಹಿತಿ ನೀಡಿದ್ದರೆ, ಮಾಧ್ಯಮಗಳಿಗೆ ಬ್ಯಾಕ್ಟೀರಿಯಾ ಸೋಂಕು ಎಂದಿದ್ದಾರೆ. ಎಫ್ಎಸ್ಎಲ್ ವರದಿಗೂ ಮುನ್ನ ನೀಡಿದ ಈ ಗೊಂದಲದ ಹೇಳಿಕೆಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ.

2025-11-16

ಸಚಿವ ಸಂಪುಟ ಸರ್ಕಸ್ ನಡುವೆ ಡಿಕೆ ಬ್ರದರ್ಸ್ ನಡೆ ಸಸ್ಪೆನ್ಸ್
Politics
ಸಚಿವ ಸಂಪುಟ ಸರ್ಕಸ್ ನಡುವೆ ಡಿಕೆ ಬ್ರದರ್ಸ್ ನಡೆ ಸಸ್ಪೆನ್ಸ್

ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಚರ್ಚೆಗಳು ತೀವ್ರಗೊಂಡಿವೆ. ಸಂಪುಟ ಪುನಾರಚನೆಗೆ ಸಿಎಂ ಒಲವು ತೋರಿದರೆ, ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಖಾಲಿ ಸ್ಥಾನಗಳ ಭರ್ತಿ, ಪರಿಷತ್ ಸ್ಥಾನಗಳ ಬಗ್ಗೆಯೂ ಚರ್ಚೆಯಾಗಿದ್ದು, ಅಂತಿಮ ನಿರ್ಧಾರ ಹೈಕಮಾಂಡ್ ಕೈಯಲ್ಲಿದೆ ಎನ್ನಲಾಗಿದೆ. ಈ ನಡುವೆ ಮಾಜಿ ಸಂಸದ ಡಿ.ಕೆ. ಸುರೇಶ್ ಕೂಡ ದೆಹಲಿಗೆ ಪ್ರಯಾಣ ಬೆಳೆಸಿರೋದು ಭಾರಿ ಕುತೂಹಲ ಮೂಡಿಸಿದೆ.

2025-11-16

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy