ಮಾಜಿ ಮಂತ್ರಿ ಹೆಚ್ ವೈ ಮೇಟಿ ನಿಧನ: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಾಂಗ್ರೆಸ್ ಹಿರಿಯ ಶಾಸಕ ಹೆಚ್. ವೈ. ಮೇಟಿ(79) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದ ಹಿನ್ನಲೆ ಅವರು ಮೃತಪಟ್ಟಿದ್ದಾರೆ. ಶಾಸಕರ ನಿಧನಕ್ಕೆ ಕಾಂಗ್ರೆಸ್ ನಾಯಕರು ಕಂಬನಿ ಮಿಡಿದಿದ್ದಾರೆ.
2025-11-04
ಭೀಮಾನದಿ ನೀರು ತೀವ್ರವಾಗಿ ಕಲುಷಿತಗೊಂಡಿರುವುದು ಬಯಲಾಗಿದೆ. ಈ ಬಗ್ಗೆ ಟಿವಿ9 ನಡೆಸಿದ ರಿಯಾಲಿಟಿ ಚೆಕ್ ನಡೆಸಿದ್ದು, ಯಾದಗಿರಿ ನಗರದ ಚರಂಡಿ ನೀರು ನೇರವಾಗಿ ಭೀಮಾನದಿಗೆ ಸೇರುತ್ತಿರುವುದು ಕಾಣಿಸಿದೆ. ನದಿ ನೀರು ಡಿ ದರ್ಜೆಗೆ ಇಳಿದಿದೆ. ಇದು ಕುಡಿಯಲು, ಸ್ನಾನಕ್ಕೂ ಯೋಗ್ಯವಲ್ಲ. ಆದರೂ ನಗರದ ಜನರಿಗೆ ಇದೇ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
2025-11-04
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮತ್ತೆ ಫುಡ್ ಪಾಯಿಸನಿಂಗ್ ಪ್ರಕರಣ ವರದಿಯಾಗಿದೆ. ಶಾಲೆಯ ಆಹಾರ ಸೇವಿಸಿ 12 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದಾರೆ. ಇದು ಹಿಂದೆಯೂ ಸಂಭವಿಸಿದ್ದು, ಪೋಷಕರಲ್ಲಿ ಆತಂಕ ಮನೆಮಾಡಿದೆ.
2025-11-04
ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆ ತೆರವು ಅರ್ಜಿಯ ತೀರ್ಪಅನ್ನು ಹೈಕೋರ್ಟ್ ದ್ವಿಸದಸ್ಯ ಪೀಠ ಕಾಯ್ದಿರಿಸಿದೆ.
2025-11-04
ಸಕ್ಕರೆ ಕಾರ್ಖಾನೆ ಮಾಲೀಕರು 3200 ರೂ. ದರ ಕೊಡುವುದಾಗಿ ಒಪ್ಪಿಕೊಂಡಿದ್ದರೆ, ಕಬ್ಬು ಬೆಳೆಗಾರರು 3500 ರೂ. ನೀಡುವವರೆಗೆ ಹೋರಾಟ ಮುಂದುವರಿಸುವುದಾಗಿ ಪಟ್ಟುಹಿಡಿದಿದ್ದಾರೆ.
2025-11-04
ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾಂಗ್ರೆಸ್ನ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಹೆಚ್.ವೈ. ಮೇಟಿ ಬೆಂಗಳೂರಿನಲ್ಲಿಂದು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಸಿಎಂ ಸಂತಾಪ ಸೂಚಿಸಿದ್ದಾರೆ.
2025-11-04
Rising Stars Asia Cup 2025: ರೈಸಿಂಗ್ ಸ್ಟಾರ್ ಏಷ್ಯಾಕಪ್ ಟೂರ್ನಿಯು ನವೆಂಬರ್ 14 ರಿಂದ ಶುರುವಾಗಲಿದೆ. ಏಷ್ಯನ್ ರಾಷ್ಟ್ರಗಳ ಉದಯೋನ್ಮುಖ ತಾರೆಗಳನ್ನು ಒಳಗೊಂಡಿರುವ ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಇಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಗ್ರೂಪ್-ಬಿ ನಲ್ಲಿ ಕಾಣಿಸಿಕೊಂಡಿದ್ದು, ಮೊದಲ ಸುತ್ತಿನಲ್ಲೇ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿದ್ದಾರೆ.
2025-11-04
ಹುಲಿ ಮರಿಗಳ ಜೊತೆ ವಿಡಿಯೋ ಮಾಡಿರುವ ವಿಚಾರ ಸಂಬಂಧ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರು ನೀಡಿದ್ದಾರೆ.
2025-11-04
ಗಂಡನ ಸಾವಿನ ಸುದ್ದಿ ಕೇಳಿ ಪತ್ನಿಯೂ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
2025-11-04
ರಾಜ್ಯ ಸರ್ಕಾರ ಮನವಿಗೆ ಸ್ಪಂದಿಸದ ಕಾರಣಕ್ಕೆ ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ಬೀದಿಗಿಳಿದಿದ್ದಾರೆ. ಪ್ರತಿ ಟನ್ ಕಬ್ಬಿಗೆ ಮೂರುವರೆ ಸಾವಿರ ರೂ. ಬೆಲೆ ನಿಗದಿ ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ಆದರೆ ಎಫ್ಆರ್ಪಿ ಪ್ರಕಾರ ದರ ನಿಗದಿ ಮಾಡುವುದಾಗಿ ಸಕ್ಕರೆ ಕಾರ್ಖಾನೆಗಳು ಹೇಳುತ್ತಿವೆ. ಆ ಮೂಲಕ ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಿವೆ.
2025-11-04
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಲಕ್ಷ ದೀಪೋತ್ಸವ ಪ್ರಾರಂಭ Laksha Deepotsav begins at Sri Krishna Mutt in Udupi
2025-11-04
ಮಹಿಳಾ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾಗೆ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಅಭಿನಂದನೆ ಸಲ್ಲಿಸಿದ್ದಾರೆ.
2025-11-04
ಆರ್ಎಸ್ಎಸ್ ಚಟುವಟಿಕೆಗಳನ್ನು ಪರೋಕ್ಷವಾಗಿ ನಿಷೇಧಿಸುವುದಕ್ಕೆ ಸಂಬಂಧಿಸಿದ ಸರ್ಕಾರಿ ಅಧಿಸೂಚನೆಗೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿ, ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಹೈಕೋರ್ಟ್ನ ಧಾರವಾಡ ಪೀಠದಲ್ಲಿ ನಡೆಯಿತು. ಉಭಯ ವಕೀಲರ ವಾದ ಆಲಿಸಿದ ಪೀಠ, ನವೆಂಬರ್ 7 ಕ್ಕೆ ತೀರ್ಪನ್ನು ಕಾಯ್ದಿರಿಸಿದೆ. ಏನೇನು ವಾದ-ಪ್ರತಿವಾದ ನಡೆಯಿತೆಂಬ ವಿವರ ಇಲ್ಲಿದೆ.
2025-11-04
ಮಹಿಳಾ ಏಕದಿನ ವಿಶ್ವಕಪ್ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ 52 ರನ್ಗಳಿಂದ ಜಯಗಳಿಸಿತು. ಇದರೊಂದಿಗೆ ಭಾರತ ತಂಡ ಚೊಚ್ಚಲ ಬಾರಿಗೆ ವಿಶ್ವ ಚಾಂಪಿಯನ್ ಆಯಿತು.
2025-11-04
ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ, ನವೀಕರಣಗೊಂಡ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ದೇವಿಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.
2025-11-04
ಬೆಂಗಳೂರಿನಲ್ಲಿ ಬದುಕೋದು ಕಷ್ಟ, ಬಾಡಿಗೆ ಮನೆ ಮಾಡಿ ನೆಮ್ಮದಿಯಿಂದ ಇರೋಣ ಅಂದ್ರೆ ಮನೆ ಮಾಲೀಕರ ಡಿಮ್ಯಾಂಡ್ ಹೆಚ್ಚಾಗಿದೆ. ಇದೀಗ ಇದಕ್ಕೆ ಸಾಕ್ಷಿಯಂತಿದೆ ಈ ಪೋಸ್ಟ್. ಬೆಂಗಳೂರಿನಲ್ಲಿ 2ಬಿಹೆಚ್ಕೆ ಮನೆ ಖಾಲಿಯಿದ್ದು, ತಿಂಗಳ ಬಾಡಿಗೆ 20,000 ರೂ ಹಾಗೂ 30 ಲಕ್ಷ ರೂ. ಠೇವಣಿಯಾಗಿದೆ. ಈ ಜಾಹೀರಾತಿನ ಪೋಸ್ಟ್ ವೈರಲ್ ಆಗಿದ್ದು ನೆಟ್ಟಿಗರು ದುರಾಸೆಯುಳ್ಳ ಮನೆ ಮಾಲೀಕರ ವಿರುದ್ಧ ಗರಂ ಆಗಿದ್ದಾರೆ.
2025-11-04
ಮುಂದಿನ ವರ್ಷ ಚುನಾವಣೆಗೆ ಸಜ್ಜಾಗಿರುವ ರಾಜ್ಯಗಳು ಸೇರಿದಂತೆ ಒಟ್ಟು 9 ರಾಜ್ಯ ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂದಿನಿಂದ ಎರಡನೇ ಹಂತದ ಎಸ್ಐಆರ್ ಆರಂಭವಾಗಿದೆ.
2025-11-04
ಬಸ್ ಅಪಘಾತದ ಬಗ್ಗೆ ಹೇಳಿಕೆ ನೀಡಿರುವ ಅಧಿಕಾರಿಗಳು, ಅಪಘಾತದಲ್ಲಿ 19 ಜನರ ಸಾವಿಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
2025-11-04
2018ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸಿದ್ಧಾರ್ಥ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಹೆಚ್ 59ನೇ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಕೊಲೆಯಾದ ಸಿದ್ಧಾರ್ಥ್ ಹುಟ್ಟುಹಬ್ಬದ ದಿನವೇ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯದ ಈ ಆದೇಶದಿಂದ ಮಗನ ಸಾವಿಗೆ ನ್ಯಾಯ ಸಿಕ್ಕಿದೆ ಎಂದು ಸಿದ್ದಾರ್ಥ್ ತಂದೆ ಕೌಶಲೇಂದ್ರ ತಿಳಿಸಿದ್ದಾರೆ.
2025-11-04
ತೆಲಂಗಾಣದ ಸರ್ಕಾರವು ರಾಯದುರ್ಗದಲ್ಲಿ ಭೂಮಿ ಮಾರಾಟ ಮಾಡಿದ ಬಳಿಕ ಇದೀಗ, ಕೋಕಪೇಟದಲ್ಲಿನ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿದೆ.
2025-11-04
Smriti Mandhana ODI Ranking: ಭಾರತ 2025ರ ಮಹಿಳಾ ವಿಶ್ವಕಪ್ ಗೆದ್ದರೂ, ಟೀಂ ಇಂಡಿಯಾದ ಸ್ಮೃತಿ ಮಂಧಾನ ತಮ್ಮ ನಂ.1 ಏಕದಿನ ರ್ಯಾಂಕಿಂಗ್ ಕಳೆದುಕೊಂಡಿದ್ದಾರೆ. ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಡ್ಟ್ ಅಗ್ರಸ್ಥಾನಕ್ಕೇರಿದ್ದಾರೆ. ವೋಲ್ವಾರ್ಡ್ಟ್ ಎರಡು ಶತಕ ಸೇರಿ 571 ರನ್ ಗಳಿಸಿ, ಮಂಧಾನರನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ.
2025-11-04
Yashasvi Jaiswal Century: ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಆಡುತ್ತಿರುವ ಯಶಸ್ವಿ ಜೈಸ್ವಾಲ್ ರಾಜಸ್ಥಾನ ವಿರುದ್ಧ ಶತಕ ಸಿಡಿಸಿದ್ದಾರೆ. ಈ ಶತಕವು ಮುಂಬೈ ತಂಡಕ್ಕೆ ಚೇತರಿಕೆ ನೀಡಿದೆ. ಇದು ಜೈಸ್ವಾಲ್ ಅವರ ಉತ್ತಮ ಫಾರ್ಮ್ ಅನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ. 45 ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯುತ್ತಮ ಸರಾಸರಿ ಹೊಂದಿರುವ ಆರಂಭಿಕ ಆಟಗಾರ ಎಂಬ ಅವರ ದಾಖಲೆಯನ್ನು ಈ ಪ್ರದರ್ಶನ ಎತ್ತಿ ತೋರಿಸುತ್ತದೆ
2025-11-04
ಬೆಂಗಳೂರಲ್ಲಿ ಸಂಚಾರದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟನಲ್ ರಸ್ತೆ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಲಾಲ್ಬಾಗ್ನಲ್ಲಿರುವ ಬಂಡೆ ಕೊರೆದು ಸುರಂಗ ನಿರ್ಮಿಸುವ ನಿರ್ಧಾರವನ್ನು ವಿಪಕ್ಷಗಳು ಮತ್ತು ಪರಿಸರ ಪ್ರೇಮಿಗಳ ಬಳಿಕ ಸಾರ್ವಜನಿಕರೂ ವಿರೋಧಿಸಿದ್ದಾರೆ. ಈ ಬಗ್ಗೆ Tv9 ಡಿಜಿಟಲ್ ನಡೆಸಿದ್ದ ಪೋಲ್ನಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.
2025-11-04
ಈ ಪ್ರದೇಶ ಶಿಲಾಯುಗ, ಅಲೆಗ್ಸಾಂಡರ್ ಅವಧಿ, ಬೌದ್ಧಧರ್ಮ, ಹಿಂದೂ ಶಾಹಿ ರಾಜವಂಶ, ಗ್ರೀಕ್ ಯುಗ ಮತ್ತು ಆರಂಭಿಕ ಇಸ್ಲಾಮಿಕ್ ಅವಧಿಯವರೆಗೆ ಹಲವು ಕುರುಹುಗಳನ್ನು ಹೊಂದಿದೆ ಎಂದು ತಜ್ಞರು ತಿಳಿಸಿದ್ದಾರೆ.
2025-11-04
ಏರ್ ಇಂಡಿಯಾ ಭೀಕರ ದುರಂತದಲ್ಲಿ ಪವಾಡ ಸದೃಶ್ಯವೆಂಬಂತೆ ಬದುಕಿದ ವಿಶ್ವಾಸ್ ಕುಮಾರ್ ರಮೇಶ್, ಇದೀಗ ಸಾಕಷ್ಟು ಮಾನಸಿಕ ಮತ್ತು ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಆರ್ಥಿಕ ಸಹಾಯವನ್ನು ಎದುರು ನೋಡುತ್ತಿದ್ದಾರೆ.
2025-11-04
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy