ಹುಲಿ ಕೂಂಬಿಂಗ್ ಬಂದಿದ್ದ ಸಾಕಾನೆ ಪಾರ್ಥ ಸಾರಥಿಗೆ ಜೇನು ಕಚ್ಚಿತ್ತು. ಪರಿಣಾಮವಾಗಿ ಆನೆ ಗುಂಡ್ಲುಪೇಟೆ ಪಟ್ಟಣದ ಒಳಗೆ ನುಗ್ಗಿತ್ತು.
2025-11-08
Olympics 2028: 1900 ರಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್ನಲ್ಲಿ ಒಮ್ಮೆ ಮಾತ್ರ ಕ್ರಿಕೆಟ್ ಪಂದ್ಯವೊಂದನ್ನು ಆಡಲಾಗಿತ್ತು. 128 ವರ್ಷಗಳ ಹಿಂದೆ ನಡೆದ ಈ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಸೆಣಸಿದ್ದವು. ಈ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 185 ರನ್ಗಳಿಂದ ಸೋಲಿಸಿ ಗ್ರೇಟ್ ಬ್ರಿಟನ್ ಚಿನ್ನದ ಪದಕ ಗೆದ್ದುಕೊಂಡಿತ್ತು. ಇದೀಗ ಮತ್ತೆ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.
2025-11-08
ಯುವತಿ ಆತ್ಮಹತ್ಯೆ ಪ್ರಕರಣ ಸಂಬಂಧ ಪೋಷಕರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುವುದಾಗಿ ಎಸ್ಪಿ ತಿಳಿಸಿದ್ದಾರೆ.
2025-11-08
ಬಿಜೆಪಿ ಸತತವಾಗಿ 3 ಬಾರಿ ಮತಗಳ್ಳತನ ಮಾಡುವ ಮೂಲಕ ದೇಶದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂದು ಸಚಿವರಾದ ಕೆ. ಹೆಚ್. ಮುನಿಯಪ್ಪ ಆರೋಪಿಸಿದ್ದಾರೆ.
2025-11-08
ಅನೇಕರು ಒಮ್ಮೆಗೆ ಅಡುಗೆ ಮಾಡಿ ಉಳಿದ ಹೆಚ್ಚುವರಿ ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡಿ ಸೇವನೆ ಮಾಡುತ್ತಾರೆ. ಇದು ಸಮಯ ಉಳಿತಾಯಕ್ಕೆ ಮಾಡುವುದಾದರೂ ಕೂಡ ಈ ರೀತಿ ನೀವು ಉಳಿದ ಆಹಾರವನ್ನು ಪದೇ ಪದೇ ತಿನ್ನುತ್ತಿದ್ದರೆ, ಅದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಹೌದು, ಸಮಯ ಉಳಿಸಲು ಅಥವಾ ಆಫೀಸ್ ಗೆ ಹೋಗುವ ಅನೇಕರು ರಾತ್ರಿ ತಯಾರಿಸಿಟ್ಟ ಊಟವನ್ನು ಮತ್ತೆ ಬಿಸಿ ಮಾಡುತ್ತಾರೆ. ಇದು ಆಹಾರದ ರುಚಿಯನ್ನು ಹಾಳುಮಾಡುವುದರ ಜೊತೆಗೆ, ಅದರ ಪೋಷಕಾಂಶಗಳನ್ನು ಸಹ ನಾಶ ಮಾಡುತ್ತದೆ. ಹಾಗಾದರೆ ಈ ರೀತಿ ಮಾಡುವುದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳಾಗುತ್ತದೆ, ಯಾಕೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.
2025-11-08
ದಾರ್ಶನಿಕ, ದಾಸಶ್ರೇಷ್ಠ ಕನಕದಾಸರ 538ನೇ ಜಯಂತಿ. ಕನಕದಾಸರ ಹಿನ್ನೆಲೆ, ಅವರ ಕೃತಿಗಳ ಮಾಹಿತಿ ಇಲ್ಲಿದೆ.
2025-11-08
ಪಾಕಿಸ್ತಾನ, ರಷ್ಯಾ, ಚೀನಾ ಮತ್ತು ಉತ್ತರ ಕೊರಿಯಾ ಮುಂತಾದ ದೇಶಗಳು ಸಕ್ರಿಯವಾಗಿ ಪರಮಾಣು ಪರೀಕ್ಷೆಗಳನ್ನು ನಡೆಸುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಅಮೆರಿಕ ಕೂಡ ತನ್ನದೇ ಆದ ಪರಮಾಣು ಪರೀಕ್ಷೆ ಆರಂಭಿಸಲಿದೆ ಎಂದು ಅವರು ಹೇಳಿದ್ದರು. ಪಾಕಿಸ್ತಾನ ಪರಮಾಣು ಪರೀಕ್ಷೆಯನ್ನು ಪುನರಾರಂಭಿಸಿದೆ ಎಂಬ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಭಾರತದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.
2025-11-08
ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಎಮ್ ಎಸ್ ಧೋನಿ ಆಡಲಿದ್ದಾರೆ ಎಂದು ಸಿಎಸ್ಕೆ ಖಚಿತ ಪಡಿಸಿದೆ.
2025-11-08
ಕಬ್ಬು ಬೆಳೆಗಾರರ ನಿರಂತರ 9 ದಿನಗಳ ಹೋರಾಟ ಕೊನೆಗೂ ಫಲ ನೀಡಿದೆ. ಪ್ರತಿ ಟನ್ ಕಬ್ಬಿಗೆ ಒಟ್ಟು 3,300 ರೂ. ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಇತ್ತ ಸರ್ಕಾರ ಕಬ್ಬಿಗೆ ದರ ನಿಗದಿ ಮಾಡುತ್ತಿದ್ದಂತೆ, ಅತ್ತ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಕುಣಿದು ಕುಪ್ಪಳಿಸಿದ್ದಾರೆ.
2025-11-08
ಮೊಹಮ್ಮದ್ ಶಮಿ ಅವರ ಮಾಜಿ ಪತ್ನಿ ಸದ್ಯ ತನಗೆ ಶಮಿ ನೀಡುತ್ತಿರುವ 4 ಲಕ್ಷ ಜೀವನಾಂಶ ಸಾಕಾಗುವುದಿಲ್ಲ, ಅದನ್ನು ಹೆಚ್ಚಳ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
2025-11-08
ವರಂಗಲ್ನ ಎನ್ಐಟಿಯ ಇಬ್ಬರು ವಿದ್ಯಾರ್ಥಿಗಳು ಕ್ಯಾಂಪಸ್ ನೇಮಕಾತಿಯಲ್ಲಿ 1 ಕೋಟಿ ರೂಪಾಯಿ ವಾರ್ಷಿಕ ಸಂಬಳ ಪಡೆದುಕೊಳ್ಳುವ ಮೂಲಕ ದಾಖಲೆ ಬರೆದಿದ್ದಾರೆ.
2025-11-08
ಪರಪ್ಪನ ಅಗ್ರಹಾರ ಜೈಲಿನಲ್ಲಿ ಲಷ್ಕರ್ ಉಗ್ರರ ಕೈಯಲ್ಲಿ ಆಂಡ್ರಾಯ್ಡ್ ಮೊಬೈಲ್ಗಳು ಇರುವುದು ಹಾಗೂ ನಟೋರಿಯಸ್ ಕ್ರಿಮಿನಲ್ ಉಮೇಶ್ ರೆಡ್ಡಿಯಂತಹ ಕೈದಿಗಳ ಬಳಿಯೂ ಮೊಬೈಲ್ ಇರುವ ವಿಡಿಯೋ ಇದೀಗ ಬಹಿರಂಗವಾಗಿದೆ. ಇದು ಜೈಲಿನಿಂದಲೇ ಭಯೋತ್ಪಾದಕ ಚಟುವಟಿಕೆಗಳು ನಡೆಯುವ, ವಿಡಿಯೋ ಕಾಲ್ ಮತ್ತು ಫೋನ್ ಕರೆಗಳು ಮಾಡುವ ಸಾಧ್ಯತೆಗಳು ಹೆಚ್ಚಾಗಿರುವುದನ್ನು ತೋರಿಸಿವೆ.
2025-11-08
ದೆಹಲಿ ಸರ್ಕಾರಿ ಮತ್ತು ಎಂಸಿಡಿ ಉದ್ಯೋಗಿಗಳಿಗೆ ಕಚೇರಿ ಸಮಯ ಬದಲಾವಣೆ ಮಾಡಲಾಗಿದೆ. ನವೆಂಬರ್ 15 ರಿಂದ ಫೆಬ್ರವರಿ 15ರ ವರೆಗೆ ಈ ಹೊಸ ಸಮಯ ಜಾರಿಯಲ್ಲಿರಲಿದೆ.
2025-11-08
ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಮುಖ್ಯಮಂತ್ರಿಗಳು ಕೇಂದ್ರದತ್ತ ಬೆರಳು ತೋರಿ ಕಬ್ಬು ಬೆಳೆಗಾರರ ಹಿತರಕ್ಷಣೆಯಿಂದ ನುಣುಚಿಕೊಳ್ಳುವುದು ತರವಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.
2025-11-08
ಮಾಟಮಂತ್ರ ಶಂಕೆಯಿಂದ ವ್ಯಕ್ತಿಯೊಬ್ಬ ತಾಯಿಯನ್ನೇ ಕೊಲೆ ಮಾಡಿ, ಹೊಲದಲ್ಲಿ ಹೂತು ಹಾಕಿರುವ ಘಟನೆ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ನಡೆದಿದೆ. ತಾಯಿ ಮಾಟ ಮಂತ್ರ ಮಾಡುತ್ತಿದ್ದಾಳೆಂದು ಸಾಕಷ್ಟು ದಿನದಿಂದ ಆನುಮಾನಪಟ್ಟಿದ್ದ ಮಗ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆ ಸ್ಥಳೀಯ ಸಮುದಾಯವನ್ನು ಬೆಚ್ಚಿಬೀಳಿಸಿದ್ದು, ಗ್ರಾಮೀಣ ಭಾರತದಲ್ಲಿ ಆಳವಾಗಿ ಬೇರೂರಿರುವ ಮೂಢನಂಬಿಕೆಯ ಸಮಸ್ಯೆಯ ಬಗ್ಗೆ ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿದೆ.
2025-11-08
ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ರೈತರ ಪ್ರತಿಭಟನೆಯಲ್ಲಿ ಶುಕ್ರವಾರ ನಡೆದ ಕಲ್ಲು ತೂರಾಟದಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಎಡಿಜಿಪಿ ಭೇಟಿಯಾಗಿ ವಿಚಾರಿಸಿದರು.
2025-11-08
ಕಾರಿನ ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿ ಜನರ ಮೇಲೆ ಹರಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಜಗ್ಗಂಪೇಟ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಅಣ್ಣಾವರಂನಿಂದ ಜಗ್ಗಂಪೇಟೆಗೆ ಹೋಗುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಅಪಘಾತ(Accident) ಸಂಭವಿಸಿದೆ. ವಾಹನವು ಬೈಕ್ ಮತ್ತು ಆಟೋರಿಕ್ಷಾಗೆ ಡಿಕ್ಕಿ ಹೊಡೆದು ಬಸ್ ನಿಲ್ದಾಣಕ್ಕೆ ನುಗ್ಗಿ ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
2025-11-08
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ರೈತ ಮುಖಂಡ ಚುನ್ನಪ್ಪ ಪೂಜಾರಿ ತಿಳಿಸಿದರು.
2025-11-08
ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 1ರಿಂದ 19ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಶನಿವಾರ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ರಚನಾತ್ಮಕ ಮತ್ತು ಅರ್ಥಪೂರ್ಣ ಅಧಿವೇಶನವನ್ನು ಎದುರು ನೋಡುತ್ತಿರುವುದಾಗಿ ರಿಜಿಜು ಎಕ್ಸ್ನಲ್ಲಿ ತಿಳಿಸಿದ್ದಾರೆ. ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 1ರಿಂದ ಡಿಸೆಂಬರ್ 19 ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಕರೆಯುವ ಸರ್ಕಾರದ ಪ್ರಸ್ತಾಪವನ್ನು ಅನುಮೋದಿಸಿದ್ದಾರೆ.
2025-11-08
ಸಾರಿಗೆ ಸಂಸ್ಥೆ ಬಸ್ ಹರಿದು ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಲಿಂಗಸೂಗೂರು ಪಟ್ಟಣದಲ್ಲಿ ನಡೆದಿದೆ.
2025-11-08
ದೃಶ್ಯಗಳು ಬಹಿರಂಗವಾಗುತ್ತಿದ್ದಂತೆ ಸಂಬಂಧಪಟ್ಟ ಕೈದಿಗಳ ಬ್ಯಾರಕ್ಗಳನ್ನು ಪರಿಶೀಲನೆ ನಡೆಸುವಂತೆ ಜೈಲಾಧಿಕಾರಿಗಳಿಗೆ ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯ ಎಡಿಜಿಪಿ ಬಿ.ದಯಾನಂದ್ ಸೂಚಿಸಿದ್ದಾರೆ.
2025-11-08
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ, ಭಯೋತ್ಪಾದಕರಿಗೆ ಮೊಬೈಲ್ ಬಳಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ರಸ್ತೆ ಗುಂಡಿ, ವೋಟ್ ಚೋರಿ ವಿಚಾರವಾಗಿಯೂ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
2025-11-08
ಆರ್ಜೆಡಿ ಬಿಹಾರದ ಮಕ್ಕಳು ಸುಲಿಗೆಕೋರರಾಗಬೇಕೆಂದು ಬಯಸುತ್ತದೆ. ಆದರೆ ಎನ್ಡಿಎ ಅವರ ಉತ್ತಮ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದೆ. ಎನ್ಡಿಎ ಮಕ್ಕಳಿಗೆ ಶಿಕ್ಷಣ, ತಂತ್ರಜ್ಞಾನ ಮತ್ತು ಅವಕಾಶಗಳನ್ನು ನೀಡುತ್ತಿದೆ. ಆರ್ಜೆಡಿ ಬಿಹಾರ ರಾಜ್ಯದ ಯುವಕರನ್ನು ಗೂಂಡಾಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಬಿಹಾರದ ಸೀತಾಮರ್ಹಿಯಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
2025-11-08
ಸ್ಥಳೀಯ ಭಾಷಿಕರನ್ನೇ ಬ್ಯಾಂಕ್ ನೌಕರಿಗೆ ನೇಮಿಸಲು ಸೂಚನೆ ನೀಡಿರುವ ಕೇಂದ್ರ ವಿತ್ತ ಸಚಿವರಿಗೆ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿನಂದನೆ ಸಲ್ಲಿಸಿದ್ದಾರೆ.
2025-11-08
ಡಿಸಿಎಂ ಡಿ.ಕೆ. ಶಿವಕುಮಾರ್ ಜೊತೆ ಸಿಎಂ ಸಿದ್ದರಾಮಯ್ಯ ಅವರು ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ್ದು ಮತಗಳ್ಳತನದ ಬಗ್ಗೆ ಮಾತನಾಡಿದರು.
2025-11-08
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy