H16 News
Logo
ಏರ್ಗನ್ ಸಮೇತ ಮನೆಗೆ ನುಗ್ಗಿದ ದುಷ್ಕರ್ಮಿಗಳು
Breaking News
ಏರ್ಗನ್ ಸಮೇತ ಮನೆಗೆ ನುಗ್ಗಿದ ದುಷ್ಕರ್ಮಿಗಳು

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕಿತ್ತಗಾನಹಳ್ಳಿಯಲ್ಲಿ ಹಾಡಹಗಲೇ ಪ್ರಾವಿಜನ್ ಸ್ಟೋರ್ ಮಾಲೀಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ನಡೆದಿದೆ. ಏರ್ಗನ್, ಚಾಕು ಸಮೇತ ಮನೆಗೆ ನುಗ್ಗಿದ ಹಂತಕರು ಕತ್ತು ಕೊಯ್ದು ಕೊಲೆ ಮಾಡಿ ಪರಾರಿ ಆಗಿದ್ದಾರೆ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

2025-11-04

ಕರ್ನಾಟಕದಲ್ಲಿ ಕೆಲಸ ಮಾಡುವ ಬಿಹಾರಿಗಳಿಗೆ 3 ದಿನ ರಜೆ ನೀಡುವಂತೆ ಡಿಕೆಶಿ
Breaking News
ಕರ್ನಾಟಕದಲ್ಲಿ ಕೆಲಸ ಮಾಡುವ ಬಿಹಾರಿಗಳಿಗೆ 3 ದಿನ ರಜೆ ನೀಡುವಂತೆ ಡಿಕೆಶಿ

ಬಿಹಾರ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಮತಬೇಟೆ ನಡೆಸಿದ್ದಾರೆ. ಇನ್ನು ಇತ್ತ ಬೆಂಗಳೂರಿನಲ್ಲೂ ಸಹ ಬಿಹಾರ ಚುನಾವಣೆ ಪ್ರಚಾರದ ಬಿರುಸಿನಿಂದ ನಡೆದಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿರುವ ಬಿಹಾರಿಗಳನ್ನ ಭೇಟಿ ಮಾಡಿ ಮತಬೇಟೆ ನಡೆಸಿದ್ದಾರೆ. ಈ ವೇಳೆ ಬಿಹಾರಿಗಳಿಗೆ ಮಹತ್ವದ ಭರವಸೆ ನೀಡಿದ್ದಾರೆ. ಜೊತೆಗೆ ಅವರು ತಮ್ಮ ಊರಿಗೆ ತೆರಳಿ ಮತದಾನ ಮಾಡಿಬರಲು ರಜೆ ನೀಡಬೇಕೆಂದು ಡಿಕೆಶಿ ಮನವಿ ಮಾಡಿದ್ದಾರೆ.

2025-11-04

ಪ್ಯಾಸೆಂಜರ್ ರೈಲು - ಗೂಡ್ಸ್ ರೈಲಿನ ಮಧ್ಯೆ ಡಿಕ್ಕಿ
Breaking News
ಪ್ಯಾಸೆಂಜರ್ ರೈಲು - ಗೂಡ್ಸ್ ರೈಲಿನ ಮಧ್ಯೆ ಡಿಕ್ಕಿ

PASSENGER TRAIN COLLIDES TRAIN, CHHATTISGARH BILASPUR, ರೈಲುಗಳ ಮಧ್ಯೆ ಡಿಕ್ಕಿ, ರೈಲು ಅಪಘಾತ, TRAIN ACCIDENT, PASSENGER TRAIN COLLIDES WITH FREIGHT TRAIN IN CHHATTISGARH'S BILASPUR

2025-11-04

ಚಾಮರಾಜನಗರ: ಅಂಬೇಡ್ಕರ್ ಭಾವಚಿತ್ರ ಹರಿದುಹಾಕಿ ಬುದ್ಧನ
Breaking News
ಚಾಮರಾಜನಗರ: ಅಂಬೇಡ್ಕರ್ ಭಾವಚಿತ್ರ ಹರಿದುಹಾಕಿ ಬುದ್ಧನ

ಚಾಮರಾಜನಗರ ತಾಲ್ಲೂಕಿನ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಇತ್ತೀಚೆಗೆ ಅಂಬೇಡ್ಕರ್ ಭಾವಚಿತ್ರ ಹರಿದುಹಾಕಿ ಮತ್ತು ಬುದ್ಧನ ಪ್ರತಿಮೆ ಧ್ವಂಸ ಮಾಡಿದ್ದ ಪ್ರಕರಣ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಸದ್ಯ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಅಕ್ಟೋಬರ್ 23ರಂದು ಘಟನೆ ನಡೆದಿತ್ತು. ಸದ್ಯ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ.

2025-11-04

ಲೆಕ್ಕಪತ್ರಕ್ಕಾಗಿ ಹೈಕೋರ್ಟ್ ಮೊರೆ ಹೋದ ವಿಜಯ್ ಮಲ್ಯ
Breaking News
ಲೆಕ್ಕಪತ್ರಕ್ಕಾಗಿ ಹೈಕೋರ್ಟ್ ಮೊರೆ ಹೋದ ವಿಜಯ್ ಮಲ್ಯ

ಸಂಪೂರ್ಣ ಸಾಲ ತೀರಿದ್ದರೂ ಬ್ಯಾಂಕ್ಗಳು ಪ್ರಕ್ರಿಯೆ ಮುಂದುವರಿಸಿವೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರವನ್ನು ನೀಡಬೇಕು ಎಂದು ಆಗ್ರಹಿಸಿ ವಿಜಯ್ ಮಲ್ಯ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ, ಬ್ಯಾಂಕ್ಗಳ ಪರ ವಕೀಲರಿಗೆ ಮಹತ್ವದ ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿದೆ.

2025-11-04

ಬೆಂಗಳೂರಿಗರ ಮನಗೆದ್ದ ಹೃದಯಾಕಾರದ ಸಿಗ್ನಲ್
Corporate
ಬೆಂಗಳೂರಿಗರ ಮನಗೆದ್ದ ಹೃದಯಾಕಾರದ ಸಿಗ್ನಲ್

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳ ಪರದಾಡುತ್ತಿರುವುದರ ನಡುವೆ, ಹೃದಯಾಕಾರದ ಟ್ರಾಫಿಕ್ ಸಿಗ್ನಲ್ನ ಫೋಟೋ ಎಕ್ಸ್ನಲ್ಲಿ ವೈರಲ್ ಆಗಿದೆ. ಈ ವಿಶಿಷ್ಟ ಸಿಗ್ನಲ್ ಪ್ರತಿದಿನ ಗಂಟೆಗಟ್ಟಲೆ ಕಾಲ ಟ್ರಾಫಿಕ್ನಲ್ಲಿಯೇ ಕಳೆಯುವ ಸಾಕಷ್ಟು ಪ್ರಯಾಣಿಕರನ್ನು ಆಕರ್ಷಿಸಿದೆ. ಸಿಗ್ನಲ್ನಲ್ಲಿ ಕಳೆಯುವ ಸಮಯದ ಬಗ್ಗೆ ಹಾಸ್ಯಭರಿತ ಪ್ರತಿಕ್ರಿಯೆಗಳನ್ನು ಗಳಿಸಿದೆ.

2025-11-04

ಇದು ವಿದ್ಯಾರ್ಥಿಗಳಿಗಲ್ಲ, ಹಸುಗಳಿಗಾಗಿ ಇರುವ ಹಾಸ್ಟೆಲ್
Trending
ಇದು ವಿದ್ಯಾರ್ಥಿಗಳಿಗಲ್ಲ, ಹಸುಗಳಿಗಾಗಿ ಇರುವ ಹಾಸ್ಟೆಲ್

ಮನೆಯಲ್ಲಿ ಹಸುಗಳನ್ನು ಬಿಟ್ಟು ಎಲ್ಲಿಗೂ ಹೋಗಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ನೀಗಿಸಿ, ಮಾಲೀಕರ ಗೈರಿನಲ್ಲಿ ಅವರ ಹಸುಗಳ ಆರೈಕೆಯನ್ನು ನಡೆಸುವ ಮೂಲಕ ಈ ಗೋಶಾಲೆ ಎಲ್ಲರ ಮನ ಗೆದ್ದಿದೆ.

2025-11-04

ಮಹಿಳಾ ಸ್ವಸಹಾಯ ಗುಂಪುಗಳ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ
Trending
ಮಹಿಳಾ ಸ್ವಸಹಾಯ ಗುಂಪುಗಳ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ

ವಾಲ್ಮಾರ್ಟ್ ಜೊತೆಗಿನ ಒಪ್ಪಂದದಿಂದ ಸ್ವಸಹಾಯ ಗುಂಪುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೊಸ ಮಾರುಕಟ್ಟೆಗಳಿಗೆ ಅವಕಾಶ ದೊರೆಯಲಿದೆ. ಸಾವಿರಾರು ಮಹಿಳೆಯರಿಗೆ ಉತ್ತಮ ಆದಾಯ ದೊರೆಯಲಿದೆ.

2025-11-04

ಭಾರತ ತಂಡಕ್ಕೆ ಆಯ್ಕೆಯಾದ ರಾಹುಲ್ ದ್ರಾವಿಡ್ ಪುತ್ರ
Sports
ಭಾರತ ತಂಡಕ್ಕೆ ಆಯ್ಕೆಯಾದ ರಾಹುಲ್ ದ್ರಾವಿಡ್ ಪುತ್ರ

Anvay Dravid India U19 Selection: ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಭಾರತ ಅಂಡರ್-19 ಚಾಲೆಂಜರ್ ಟ್ರೋಫಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹೈದರಾಬಾದ್ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಅವರು ಸಿ ತಂಡದ ಪರ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಹಾಗೂ ವಿಕೆಟ್ಕೀಪರ್ ಆಗಿ ಆಡಲಿದ್ದಾರೆ. ಇತ್ತೀಚೆಗೆ ಕರ್ನಾಟಕ ತಂಡದ ನಾಯಕರಾಗಿದ್ದ ಅನ್ವಯ್, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ನಿಂದ ಹೆಸರುವಾಸಿಯಾಗಿದ್ದಾರೆ. ಯುವ ಆಟಗಾರರ ಪ್ರತಿಭೆಗೆ ವೇದಿಕೆಯಾಗಿರುವ ಈ ಟೂರ್ನಿಯಲ್ಲಿ ಅನ್ವಯ್ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ.

2025-11-04

ಹುಲಿ ಸೆರೆಗೆ ಅಖಾಡಕ್ಕಿಳಿದ ಇಂದ್ರ, ಶ್ರೀರಾಮ
Breaking News
ಹುಲಿ ಸೆರೆಗೆ ಅಖಾಡಕ್ಕಿಳಿದ ಇಂದ್ರ, ಶ್ರೀರಾಮ

ಹುಲಿ ಸೆರೆ ಕಾರ್ಯಾಚರಣೆಯ ಭಾಗವಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಹರವೆ ಹೋಬಳಿಯ ಕೆಲವು ಗ್ರಾಮಗಳಲ್ಲಿ ತಹಶೀಲ್ದಾರ್ 144 ಸೆಕ್ಷನ್ ಜಾರಿ ಮಾಡಿದ್ದಾರೆ.

2025-11-04

ಮೂವರು ಪುಟಾಣಿಗಳು ಸೇರಿ ಶುರುಮಾಡಿದ ಸ್ಟಾರ್ಟ್ಅಪ್  ಚಂದಾದಾರಿಕೆಯಲ್ಲಿ
Breaking News
ಮೂವರು ಪುಟಾಣಿಗಳು ಸೇರಿ ಶುರುಮಾಡಿದ ಸ್ಟಾರ್ಟ್ಅಪ್ ಚಂದಾದಾರಿಕೆಯಲ್ಲಿ

ಈಗಿನ ಕಾಲದ ಮಕ್ಕಳು ಎಲ್ಲದರಲ್ಲೂ ಮುಂದು. ಇದಕ್ಕೆ ಅತ್ಯುತ್ತಮ ಉದಾಹರಣೆ ಈ ಮೂರು ಮಕ್ಕಳು. ಹೌದು, ಈ ಬೆಂಗಳೂರಿನ ಈ ಮಕ್ಕಳು ತಮ್ಮದೇ ಸ್ಟಾರ್ಟ್ಅಪ್ ಆರಂಭಿಸಿದ್ದಾರೆ. ಇದೊಂದು ಪರಿಸರ ಸ್ನೇಹಿ ಸ್ಟಾರ್ಟ್ಅಪ್ 'ಇಕೋ ವಾಲಾ' ವಾಗಿದ್ದು ಇದರಲ್ಲಿ ಚಂದಾದಾರಿಕೆಯೂ ಇದೆಯಂತೆ. ಈ ಪುಟಾಣಿಗಳು ತಮ್ಮ ಈ ಹೊಸ ಉದ್ಯಮವನ್ನು ವಿವರಿಸುವ ವಿಡಿಯೋ ಸದ್ಯ ವೈರಲ್ ಆಗಿದ್ದು, ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

2025-11-04

ಮಂಡ್ಯ: ಡಿಸಿ ಕಚೇರಿ ಎದುರೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೈತ
Breaking News
ಮಂಡ್ಯ: ಡಿಸಿ ಕಚೇರಿ ಎದುರೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೈತ

ಜಮೀನು ಸಮಸ್ಯೆ ಬಗೆಹರಿಯದಿದ್ದಕ್ಕೆ ರೈತರೊಬ್ಬರು ಡಿಸಿ ಕಚೇರಿ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

2025-11-04

ಬೀದರ್ ಬ್ರಿಮ್ಸ್ ಆಸ್ಪತ್ರೆಗೇ ತಗುಲಿದೆ ದೊಡ್ಡ ರೋಗ
Breaking News
ಬೀದರ್ ಬ್ರಿಮ್ಸ್ ಆಸ್ಪತ್ರೆಗೇ ತಗುಲಿದೆ ದೊಡ್ಡ ರೋಗ

ಬೀದರ್ನಲ್ಲಿ ಸರ್ಕಾರ ಹೈಟೆಕ್ ಆಸ್ಪತ್ರೆ ಕಟ್ಟಿಸಿದೆ. 2ಡಿ ಎಕೋ, ಸಿಟಿ ಸ್ಯ್ಕಾನ್, ಅಲ್ಟ್ರಾ ಸೌಂಡ್ ಯಂತ್ರಗಳಿವೆ. ಆದರೆ, ಬಡವರಿಗೆ ಮಾತ್ರ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಭ್ರಷ್ಟಾಚಾರ ಮಿತಿಮೀರಿರುವ ಆರೋಪ ಕೇಳಿಬಂದಿದೆ. ಇದೀಗ, ಜಡ್ಡುಗಟ್ಟಿರುವ ಆಸ್ಪತ್ರೆಗೇ ಚಿಕಿತ್ಸೆ ಕೊಡಲು ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮುಂದಾಗಿದ್ದು, ತಕ್ಷಣದ ಕ್ರಮಕ್ಕೆ ಮನವಿ ಮಾಡಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ಗೆ ಪತ್ರ ಬರೆದಿದ್ದಾರೆ.

2025-11-03

ಬೆಂಗಳೂರು: ಆಂಬುಲೆನ್ಸ್ ಚಾಲಕನ ನಿರ್ಲಕ್ಷ್ಯದಿಂದ ವಾಹನಾಪಘಾತ
Breaking News
ಬೆಂಗಳೂರು: ಆಂಬುಲೆನ್ಸ್ ಚಾಲಕನ ನಿರ್ಲಕ್ಷ್ಯದಿಂದ ವಾಹನಾಪಘಾತ

ಬೆಂಗಳೂರಿನ ರಿಚ್ಮಂಡ್ ವೃತ್ತದಲ್ಲಿ ನವೆಂಬರ್ 1 ರಂದು ತಡರಾತ್ರಿ ಅತಿವೇಗದ ಆಂಬ್ಯುಲೆನ್ಸ್ ಮೂರು ಮೋಟಾರ್ಸೈಕಲ್ಗಳಿಗೆ ಗುದ್ದಿದ್ದು, ಸ್ಕೂಟರ್ನಲ್ಲಿದ್ದ ಗಂಡ ಹೆಂಡತಿಯಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಿಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಚಾಲಕ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿರುವುದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ.

2025-11-03

ಟೀಮ್ ಇಂಡಿಯಾಗೆ  ಬಹುಮಾನ ಘೋಷಿಸಿದ ಬಿಸಿಸಿಐ
Sports
ಟೀಮ್ ಇಂಡಿಯಾಗೆ ಬಹುಮಾನ ಘೋಷಿಸಿದ ಬಿಸಿಸಿಐ

India Women vs South Africa Women, Final: ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ನ ಫೈನಲ್ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 45.3 ಓವರ್ಗಳಲ್ಲಿ 246 ರನ್ಗಳಿಸಿ ಆಲೌಟ್ ಆಗಿ 52 ರನ್ಗಳಿಂದ ಸೋಲೊಪ್ಪಿಕೊಂಡಿದೆ.

2025-11-03

ಸೋತ ದಕ್ಷಿಣ ಆಫ್ರಿಕಾ ಆಟಗಾರ್ತಿಯರನ್ನು ಬಿಟ್ಟುಕೊಡದ ಹರ್ಮನ್ ಪಡೆ
Sports
ಸೋತ ದಕ್ಷಿಣ ಆಫ್ರಿಕಾ ಆಟಗಾರ್ತಿಯರನ್ನು ಬಿಟ್ಟುಕೊಡದ ಹರ್ಮನ್ ಪಡೆ

South Africa Women Players Crying: ಭಾರತ ಕ್ರಿಕೆಟ್ ತಂಡ ಫೈನಲ್ನಲ್ಲಿ ಸೋತ ನಂತರ, ದಕ್ಷಿಣ ಆಫ್ರಿಕಾದ ಆಟಗಾರರು ಅಳುತ್ತಿದ್ದರು. ನಂತರ, ಭಾರತೀಯ ಆಟಗಾರರು ಎಲ್ಲರ ಹೃದಯಗಳನ್ನು ಗೆದ್ದ ಒಂದು ಕೆಲಸವನ್ನು ಮಾಡಿದರು. ಭಾರತೀಯ ಆಟಗಾರ್ತಿಯರು ಆಫ್ರಿಕನ್ ಆಟಗಾರ್ತಿಯರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದರು.

2025-11-03

ಕೈ ಕೊಟ್ಟ ವಿಶ್ವಕಪ್ನಲ್ಲೂ ಕೈ ಹಿಡಿದ ವಿಶ್ವ ದಾಖಲ
Sports
ಕೈ ಕೊಟ್ಟ ವಿಶ್ವಕಪ್ನಲ್ಲೂ ಕೈ ಹಿಡಿದ ವಿಶ್ವ ದಾಖಲ

India Women vs South Africa Women, Final: ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 45.3 ಓವರ್ಗಳಲ್ಲಿ 246 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 52 ರನ್ಗಳ ಜಯಭೇರಿ ಬಾರಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

2025-11-03

ಕಿಂಗ್  ಚಿತ್ರಕ್ಕಾಗಿ ಹಾಲಿವುಡ್ ಪೋಸ್ ಕದ್ದ ಶಾರುಖ್ ಖಾನ್
Entertainment
ಕಿಂಗ್ ಚಿತ್ರಕ್ಕಾಗಿ ಹಾಲಿವುಡ್ ಪೋಸ್ ಕದ್ದ ಶಾರುಖ್ ಖಾನ್

ಶಾರುಖ್ ಖಾನ್ 'ಕಿಂಗ್' ಚಿತ್ರದ ಹೊಸ ಲುಕ್, ಬ್ರಾಡ್ ಪಿಟ್ 'ಎಫ್1' ಸಿನಿಮಾದ ಲುಕ್ ಹೋಲುತ್ತಿದೆ. ನೆಟ್ಟಿಗರು ಈ ವಿಚಾರದಲ್ಲಿ ಚರ್ಚೆ ನಡೆಯತ್ತದೆ. ಶಾರುಖ್ ಹಳೆಯ 'ಜಬ್ ಹ್ಯಾರಿ ಮೆಟ್ ಸೇಜಲ್' ಲುಕ್ನಂತೆ ಇದೆಯೆಂದೂ ಕೆಲವರು ಗುರುತಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಯುಗದಲ್ಲಿ ಇಂತಹ ಹೋಲಿಕೆಗಳು ತಕ್ಷಣ ವೈರಲ್ ಆಗುತ್ತಿವೆ.

2025-11-03

ಗೌತಮ್ ಕಥೆ ಮುಗಿಸಲು ಎಂಎಲ್ಎ ಜೊತೆ ಕೈ ಜೋಡಿಸಿದ
Entertainment
ಗೌತಮ್ ಕಥೆ ಮುಗಿಸಲು ಎಂಎಲ್ಎ ಜೊತೆ ಕೈ ಜೋಡಿಸಿದ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಆಸ್ತಿ ತ್ಯಜಿಸಿ ಕ್ಯಾಬ್ ಡ್ರೈವರ್ ಆಗಿದ್ದಾನೆ. ಜಯದೇವ್ ಎಂಎಲ್ಎ ಜೊತೆ ಸೇರಿ ಗೌತಮ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದಾನೆ. ಭೂಮಿಕಾ ಜೊತೆಗಿನ ಪ್ರೀತಿ ಬೆಳೆಯುತ್ತಿರುವಾಗ, ಗೌತಮ್ ಇನ್ನು ಮುಂದೆ ಜಯದೇವ್ನ ಸುಮ್ಮನೆ ಬಿಡುವುದಿಲ್ಲ. ಗೌತಮ್ಗೆ ಲಕ್ಷ್ಮೀಕಾಂತ ವಿಷಯ ತಿಳಿಸುವ ಸಾಧ್ಯತೆ ಇದೆ.

2025-11-03

ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾ ಗೌಡ ಅರ್ಧದಲ್ಲೇ ಮನೆಯಿಂದ ಎಲಿಮಿನೇಟ್
Entertainment
ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾ ಗೌಡ ಅರ್ಧದಲ್ಲೇ ಮನೆಯಿಂದ ಎಲಿಮಿನೇಟ್

ಬಿಗ್ ಬಾಸ್ ಕನ್ನಡ ಮನೆಯಲ್ಲಿ ರಿಷಾ ಅವರು ಗಿಲ್ಲಿ ಮೇಲೆ ಹಲ್ಲೆ ಮಾಡಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ದೈಹಿಕ ಹಲ್ಲೆ ಮಾಡಿದವರನ್ನು ತಕ್ಷಣವೇ ಹೊರಹಾಕುವ ನಿಯಮವಿರುವುದರಿಂದ, ರಿಷಾ ಅವರು ಎಲಿಮಿನೇಟ್ ಆಗುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ. ಹಿಂದಿನ ಸೀಸನ್ಗಳಲ್ಲಿ ಇದೇ ರೀತಿ ಘಟನೆಗಳು ನಡೆದಿವೆ.

2025-11-03

ವೀಲ್ ಚೇರ್ನಲ್ಲಿ ಆಗಮಿಸಿ ಸಂಭ್ರಮಿಸಿದ ಟೀಮ್ ಇಂಡಿಯಾ ಆಟಗಾರ್ತಿ
Sports
ವೀಲ್ ಚೇರ್ನಲ್ಲಿ ಆಗಮಿಸಿ ಸಂಭ್ರಮಿಸಿದ ಟೀಮ್ ಇಂಡಿಯಾ ಆಟಗಾರ್ತಿ

India Women vs South Africa Women, Final: ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ನ ಫೈನಲ್ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 45.3 ಓವರ್ಗಳಲ್ಲಿ 246 ರನ್ಗಳಿಸಿ ಆಲೌಟ್ ಆಗಿ 52 ರನ್ಗಳಿಂದ ಸೋಲೊಪ್ಪಿಕೊಂಡಿದೆ.

2025-11-03

ಶೃಂಗೇರಿ ಕಿಲ್ಲರ್ ಕಾಡಾನೆ ಸೆರೆ ಏಕಲವ್ಯ ತಂಡದಿಂದ
Breaking News
ಶೃಂಗೇರಿ ಕಿಲ್ಲರ್ ಕಾಡಾನೆ ಸೆರೆ ಏಕಲವ್ಯ ತಂಡದಿಂದ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ ಇಬ್ಬರನ್ನು ಬಲಿ ಪಡೆದು ಆತಂಕ ಸೃಷ್ಟಿಸಿದ್ದ ಕಿಲ್ಲರ್ ಕಾಡಾನೆ ಕೊನೆಗೂ ಸೆರೆಯಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಭಗವತಿ ಬಳಿ ಓಡಾಡುತ್ತಿದ್ದ ಹಂತಕ ಸಲಗವನ್ನು ಏಕಲವ್ಯ ಟೀಮ್ ಯಶಸ್ವಿಯಾಗಿ ಲಾಕ್ ಮಾಡಿದೆ. ಅರಣ್ಯ ಇಲಾಖೆಯ ದಿಢೀರ್ ಕಾರ್ಯಾಚರಣೆ ಜನರಲ್ಲಿ ನೆಮ್ಮದಿ ತಂದಿದ್ದು, ಇದು ಶೃಂಗೇರಿ ಜನತೆಯ ಬಹುದಿನದ ಆತಂಕವನ್ನು ದೂರ ಮಾಡಿದೆ.

2025-11-03

ರಾಜ್ಯದಲ್ಲಿಂದು ಸಾಧಾರಣ ಮಳೆಯ ಸಾಧ್ಯತೆ
Breaking News
ರಾಜ್ಯದಲ್ಲಿಂದು ಸಾಧಾರಣ ಮಳೆಯ ಸಾಧ್ಯತೆ

Karnataka Weather: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮಳೆರಾಯನ ಆರ್ಭಟ ಕಡಿಮೆಯಾಗಿದ್ದು, ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಪ್ರದೇಶಗಳ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಧಾನಿ ಬೆಂಗಳೂರಲ್ಲಿ ಮೋಡಕವಿದ ವಾತಾವರಣದ ಸಾಧ್ಯತೆ ಇದ್ದರೆ, ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

2025-11-03

Gold Rate Today Bangalore: ಚಿನ್ನ ಬೆಳ್ಳಿ ಬೆಲೆಗಳು ಏರಿಕೆ
Business
Gold Rate Today Bangalore: ಚಿನ್ನ ಬೆಳ್ಳಿ ಬೆಲೆಗಳು ಏರಿಕೆ

Bullion Market 2025 November 3rd: ಚಿನ್ನ, ಬೆಳ್ಳಿ ಬೆಲೆಗಳು ಸೋಮವಾರ ಹೆಚ್ಚಳಗೊಂಡಿವೆ. ಚಿನ್ನದ ಬೆಲೆ 15 ರೂ ಏರಿದರೆ, ಬೆಳ್ಳಿ ಬೆಲೆ 2 ರೂ ಹೆಚ್ಚಿದೆ. ಆಭರಣ ಚಿನ್ನದ ಬೆಲೆ 11,275 ರೂನಿಂದ 11,290 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 12,317 ರೂಗೆ ಏರಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 154 ರೂ ಇದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 168 ರೂಗೆ ಏರಿದೆ.

2025-11-03

ಸೆಲೆಬ್ರಿಟಿಯೊಬ್ಬ ಪ್ರೆಯಸಿಗಾಗಿ ಕೊಲೆ ಮಾಡೋ ಕಥೆ
Entertainment
ಸೆಲೆಬ್ರಿಟಿಯೊಬ್ಬ ಪ್ರೆಯಸಿಗಾಗಿ ಕೊಲೆ ಮಾಡೋ ಕಥೆ

ತನುಷ್ ಶಿವಣ್ಣ ನಟನೆಯ 'ಬಾಸ್' ಕನ್ನಡ ಕ್ರೈಮ್ ಥ್ರಿಲ್ಲರ್ ಸಿನಿಮಾ ಡಿಸೆಂಬರ್ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಸೆಲೆಬ್ರಿಟಿಯೊಬ್ಬ ಪ್ರೇಯಸಿಗಾಗಿ ನಡೆಸುವ ಕೊಲೆ ಮತ್ತು ಅದನ್ನು ಮುಚ್ಚಿಹಾಕುವ ಪ್ರಯತ್ನದ ಸುತ್ತ ಕಥೆ ಹೆಣೆಯಲಾಗಿದೆ. ವಿ. ಲವ ನಿರ್ದೇಶನದ ಈ ಚಿತ್ರ 'ಸತ್ಯಮೇವ ಜಯತೇ' ಅಡಿಬರಹ ಹೊಂದಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು, ಟೀಸರ್ ಬಿಡುಗಡೆಗೆ ಸಜ್ಜಾಗಿದೆ.

2025-11-03

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy