Diljit Dosanjh: ಪಂಜಾಬಿನಲ್ಲಿ ಹಲವಾರು ಮಂದಿ ಕಲಾವಿದರಿದ್ದಾರೆ. ಆದರೆ ದಶಕಗಳಿಂದಲೂ ಅವರು ಖಲಿಸ್ಥಾನಿ ಉಗ್ರರು, ಕೆನಡಾನಲ್ಲಿ ನೆಲೆಸಿರುವ ಪಂಜಾಬಿ ಮಾಫಿಯಾದಿಂದ ಹಿಂಸೆ ಅನುಭವಿಸುತ್ತಲೇ ಬರುತ್ತಿದ್ದಾರೆ. ಪಂಜಾಬಿನ ಖ್ಯಾತ ಕಲಾವಿದ ದಿಲ್ಜೀತ್ ದೊಸ್ಸಾಂಜ್ಗೆ ಈಗ ಖಲಿಸ್ಥಾನಿ ಉಗ್ರರು ಬೆದರಿಕೆ ಹಾಕಿದ್ದಾರೆ. ಅದೂ ಅಮಿತಾಬ್ ಬಚ್ಚನ್ ಅವರ ಕಾರಣಕ್ಕೆ.
2025-10-29
Rakshita Shetty: ಬಿಗ್ ಬಾಸ್ ಕನ್ನಡ 12ರ ಪ್ರಬಲ ಸ್ಪರ್ಧಿ ರಕ್ಷಿತಾ ಶೆಟ್ಟಿ ತಮ್ಮ ಮನೆಯಿಂದ ಹೊರಗಿದ್ದಾಗ ಮಾಡಿದ ತಪ್ಪೊಂದನ್ನು ಅರಿತುಕೊಂಡಿದ್ದಾರೆ. ಅಮ್ಮನ ಪ್ರೀತಿ, ಅವರು ತಯಾರಿಸುವ ಆಹಾರದ ಮಹತ್ವ ತಿಳಿಯದೆ ದೂರುತ್ತಿದ್ದರು. ಈಗ ತಮ್ಮ ನಡೆಯ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
2025-10-29
ಕಳ್ಳತನವಾದ ಹಾಗೂ ಕಳೆದುಕೊಂಡ 894 ಮೊಬೈಲ್ ಫೋನ್ಗಳನ್ನು ಸಿಇಐಆರ್ ಪೋರ್ಟಲ್ ಸಹಾಯದಿಂದ ಹಿಂಪಡೆದ ಬೆಂಗಳೂರು ಪೊಲೀಸರು, ಆಯಾ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
2025-10-29
Darshan Thoogudeepa case: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್, ತಮಗೆ ಮಲಗಲು ಹೆಚ್ಚುವರಿ ಹಾಸಿಗೆ, ದಿಂಬು ಮತ್ತು ಬೆಡ್ಶೀಟ್ ಬೇಕೆಂದು ಕೋರ್ಟ್ಗೆ ಮನವಿ ಮಾಡಿದ್ದರು. ದರ್ಶನ್ ಮನವಿ ಬಗ್ಗೆ ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ನಡೆದಿದ್ದವು. ಇಂದು (ಅಕ್ಟೋಬರ್ 29) ಆದೇಶ ಹೊರಬಿದ್ದಿದೆ.
2025-10-29
ಕಾಂತಾರ: ಚಾಪ್ಟರ್ 1' ಸಿನಿಮಾ ಒಟಿಟಿ ರಿಲೀಸ್ ದಿನಾಂಕ ಘೋಷಣೆಯಾದ ನಂತರವೂ ಅಸಾಧಾರಣ ಬಾಕ್ಸ್ ಆಫೀಸ್ ಗಳಿಕೆ ಕಂಡಿದೆ. ಅಕ್ಟೋಬರ್ 31ಕ್ಕೆ ಅಮೇಜಾನ್ ಪ್ರೈಮ್ಗೆ ಬರುತ್ತಿದ್ದರೂ, ಚಿತ್ರವು ಕೋಟಿಗಟ್ಟಲೆ ಹಣವನ್ನು ಗಳಿಸುತ್ತಲೇ ಇದೆ. ಸಾಮಾನ್ಯವಾಗಿ ಒಟಿಟಿ ಸುದ್ದಿ ಕಲೆಕ್ಷನ್ ಕಡಿಮೆ ಮಾಡುತ್ತದೆ, ಆದರೆ ಈ ಸಿನಿಮಾ ಇದಕ್ಕೆ ಹೊರತಾಗಿದೆ.
2025-10-29
ಕಸ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಯುವ ಪರಿಸರ ಪ್ರೇಮಿ ನಾಗರಾಜ್ ಬಜಲ್ ಅವರು 'ಹಸಿರು ನಡಿಗೆ' ಜಾಥಾ ಆರಂಭಿಸಿದ್ದಾರೆ.
2025-10-29
ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಕುರಿತ ರೀಶೂಟ್, ವಿಳಂಬದಂತಹ ಸುಳ್ಳು ಸುದ್ದಿಗಳಿಗೆ ತೆರೆ ಬಿದ್ದಿದೆ. ವಿಎಫ್ಎಕ್ಸ್ ಸಂಸ್ಥೆಯ ಉದ್ಯೋಗಿ ಸ್ಪಷ್ಟನೆ ನೀಡಿದ್ದು, ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ ಎಂದಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಪ್ರಗತಿಯಲ್ಲಿವೆ. ಮಾರ್ಚ್ 19, 2026ಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
2025-10-29
ರಾಜ್ಯದಿಂದ ಒಂದೇ ಒಂದು ಕೈಗಾರಿಕೆಯೂ ಹೊರ ಹೋಗಿಲ್ಲ. ಈ ವಿಚಾರವಾಗಿ ಹಬ್ಬಿಸುತ್ತಿರುವ ತಪ್ಪು ಕಲ್ಪನೆಯಿಂದ ಎಲ್ಲರೂ ಹೊರಬರಬೇಕು ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
2025-10-29
ONION RATE DOWN IN HAVERI, ONION PRICE CRASH, UNSEASONAL RAIN DAMAGE, HAVERI, ONION RATE DOWN, ONION PRICE CRASH: ONION CROP ROTTING IN THE FIELD DUE TO HEAVY RAIN
2025-10-29
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ಮೋದಿ ನೋಡಲು ಬಹಳ ಸುಂದರವಾಗಿರುವ ವ್ಯಕ್ತಿಯೆಂದು ಹೊಗಳಿದ್ದಾರೆ. ಮೋದಿ ಕಿಲ್ಲರ್ ಲುಕ್ ಹೊಂದಿದ್ದಾರೆ ಎಂದಿರುವ ಟ್ರಂಪ್ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನದ ನಡುವಿನ ಯುದ್ಧವನ್ನು ನಾನೇ ನಿಲ್ಲಿಸಿದ್ದು ಎಂದು ಹಳೇ ರಾಗ ಹಾಡಿದ್ದಾರೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತಕ್ಕೆ ವ್ಯಾಪಾರ ನಿರ್ಬಂಧದ ಬೆದರಿಕೆಯೊಡ್ಡಿ ಕದನವಿರಾಮಕ್ಕೆ ಒಪ್ಪಿಸಿದ್ದೆ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.
2025-10-29
ಪುನೀತ್ ರಾಜ್ಕುಮಾರ್ ನಾಲ್ಕನೇ ಪುಣ್ಯಸ್ಮರಣೆ ಹಿನ್ನೆಲೆ, ಸಿಎಂ, ಡಿಸಿಎಂ ಸೇರಿದಂತೆ ರಾಜಕೀಯ ಮುಖಂಡರು ನಮನ ಸಲ್ಲಿಸಿದ್ದಾರೆ.
2025-10-29
ಭಾರತೀಯ ಪ್ರಯಾಣಿಕರೊಬ್ಬರು ಲುಫ್ತಾನ್ಸಾ ವಿಮಾನದಲ್ಲಿ ಪ್ರಯಾಣಿಕರ ಮೇಲೆ ಫೋರ್ಕ್ನಿಂದ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಪ್ರಣೀತ್ ಎಂಬಾತ ಪ್ರಣೀತ್ 17 ವರ್ಷದ ಪ್ರಯಾಣಿಕನ ಭುಜಕ್ಕೆ ಪೋರ್ಕ್ನಿಂದ ಇರಿದಿದ್ದಾನೆ ನಂತರ ಮತ್ತೊಬ್ಬ ಬಾಲಕನ ಮೇಲೆ ಅದೇ ಪೋರ್ಕ್ನಿಂದ ಹಲ್ಲೆ ನಡೆಸಿದ್ದಾನೆ. ಆತನ ತಲೆಯ ಹಿಂಭಾಗಕ್ಕೂ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.
2025-10-29
ಶಿವಮೊಗ್ಗದ ನವಲೆಯ ನಿವಾಸಿ ಆಯುಷ್ ಕಾಂತಾರ ಚಾಪ್ಟರ್ 1ರಲ್ಲಿ ನಟಿಸಿದ್ದಾನೆ. 16 ದಿನ ಶೂಟಿಂಗ್ನಲ್ಲಿ ಭಾಗಿಯಾಗಿದ್ದರ ಬಗ್ಗೆ ಆಯುಷ್ ಮತ್ತು ತಂದೆ ರಾಘವೇಂದ್ರ ರಂಗದೋಳ್ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
2025-10-29
ಕಾರಿನ ಮಿರರ್ ಟಚ್ ಮಾಡಿದ್ದಕ್ಕೆ ಸ್ಕೂಟರನ್ನು ಹಿಂಬಾಲಿಸಿಕೊಂಡು ಬಂದು ಅಪಘಾತವೆಸಗಿ ಯುವಕನೊಬ್ಬನ ಸಾವಿಗೆ ಕಾರಣರಾದ ಆರೋಪದಡಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
2025-10-29
ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಯೂನಸ್ ಈಶಾನ್ಯ ಭಾರತವನ್ನು ಒಳಗೊಂಡ ಬಾಂಗ್ಲಾದೇಶದ ನಕ್ಷೆಯನ್ನು ಪಾಕಿಸ್ತಾನದ ಜನರಲ್ಗೆ ಉಡುಗೊರೆಯಾಗಿ ನೀಡಿದ್ದಾರೆ. ಕಾಫಿ ಟೇಬಲ್ ಪುಸ್ತಕವಾದ ಉಡುಗೊರೆಯು ಭಾರತದ ಕೆಲವು ಭಾಗಗಳನ್ನು ಬಾಂಗ್ಲಾದೇಶದ ಭಾಗಗಳಾಗಿ ತೋರಿಸುವ ನಕ್ಷೆಯನ್ನು ಹೊಂದಿತ್ತು. ಈ ನಕ್ಷೆ ಇದೀಗ ವಿವಾದಕ್ಕೆ ಕಾರಣವಾಗಿದೆ.
2025-10-29
ಮೈದಾನದಲ್ಲಿ ಶೇಖರಣೆಯಾಗಿರುವ ಕೊಳಚೆ ನೀರು, ಅದರಿಂದ ಹೆಚ್ಚಿರುವ ಸೊಳ್ಳೆ ಕಾಟಕ್ಕೆ ಹೆದರಿ ವಿದ್ಯಾರ್ಥಿಗಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
2025-10-29
ಐದು ವರ್ಷಗಳ ಕಾಲ ಕೆಲಸ ಮಾಡಿ ಎಂದು ಜನ ಆಶೀರ್ವದಿಸಿದ್ದಾರೆ. ಹಾಗಾಗಿ ಎರಡೂವರೆ ವರ್ಷದ ನಂತರ ಅಧಿಕಾರ ಹಸ್ತಾಂತರ ಎನ್ನುವ ವಿಚಾರದ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.
2025-10-29
China unveils CR450, world's fastest train: ಚೀನಾ ಅತಿವೇಗದ ರೈಲನ್ನು ನಿರ್ಮಿಸಿದೆ. ಸಿಆರ್450 ಎಂದು ಕೋಡ್ನೇಮ್ ಹಾಕಿರುವ ಈ ರೈಲು 896 ಕಿಮೀ ವೇಗ ದಾಖಲಿಸಿದೆ. ನೈಜ ರೈಲು ಹಳಿಯಲ್ಲಿ 450 ಕಿಮೀ ವೇಗವನ್ನು ದಾಖಲಿಸಿದೆ. ಈ ಮೂಲಕ ತನ್ನ ದಾಖಲೆಯನ್ನು ಇದು ಮುರಿದಿದೆ. ಈ ಪ್ರೋಟೋಟೈಪ್ ಟ್ರೈನ್ನ ಆಪರೇಟಿಂಗ್ ಟೆಸ್ಟಿಂಗ್ 6 ಲಕ್ಷ ಕಿಮೀವರೆಗೂ ಮುಂದುವರಿಯಲಿದೆ. ಮುಂದಿನ ವರ್ಷ ಇದರ ಕಮರ್ಷಿಯಲ್ ಸೇವೆ ಶುರುವಾಗಬಹುದು.
2025-10-29
ಬೆಂಗಳೂರಿನ ಟನಲ್ ರಸ್ತೆ ಯೋಜನೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಂಸದ ತೇಜಸ್ವಿ ಸೂರ್ಯ ನಡುವೆ ಜಿದ್ದಾಜಿದ್ದಿ ಮುಂದುವರಿದಿದೆ. ಸದ್ಯ ಈ ವಿಚಾರವಾಗಿ ಸುದ್ದಿಗೋಷ್ಠಿ ಮಾಡಿದ ತೇಜಸ್ವಿ ಸೂರ್ಯ, ಟನಲ್ ರಸ್ತೆ ಏಕೆ ಬೇಡ ಮತ್ತು ಟ್ರಾಫಿಕ್ ನಿವಾರಣೆಗೆ ಏನು ಮಾಡಬೇಕು ಎಂದು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
2025-10-29
ಕನೇರಿ ಕಾಡಸಿದ್ದೇಶ್ವರ ಮಠದ ಅದೃಶಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಪ್ರವೇಶ ನಿರ್ಬಂಧ ವಿಧಿಸಿರುವ ಸರ್ಕಾರದ ಕ್ರಮಕ್ಕೆ ಹಿಂದೂ ಮುಖಂಡರು ಖಂಡಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ.
2025-10-29
ಭೂಮಿ ನಂಬಿ ಬದುಕಿದರೆ ಬದುಕು ಹಸನೆಂಬ ಮಾತಿಗೆ ಅಮೃತಮ್ಮ ಸೂಕ್ತ ಉದಾಹರಣೆಯಾಗಬಲ್ಲರು.
2025-10-29
ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಮಾತನಾಡುವಾಗ ಸಲ್ಮಾನ್ ಖಾನ್ ಒಂದು ಎಡವಟ್ಟು ಮಾಡಿದ್ದರು. ಬಲೂಚಿಸ್ತಾನ ಹಾಗೂ ಪಾಕಿಸ್ತಾನ ಬೇರೆ ಬೇರೆ ದೇಶಗಳು ಎಂಬ ಅರ್ಥ ಬರುವ ರೀತಿಯಲ್ಲಿ ಅವರು ಹೇಳಿಕೆ ನೀಡಿದ್ದರು. ಆ ಘಟನೆಯ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಒಂದು ಸುದ್ದಿ ಬಲವಾಗಿ ಹಬ್ಬಿತ್ತು. ಆ ಬಗ್ಗೆ ಈಗ ಸ್ಪಷ್ಟನೆ ಸಿಕ್ಕಿದೆ.
2025-10-29
ಭಾರತ ಮತ್ತು ಚೀನಾದ ನಡುವೆ ಲಡಾಖ್ ಗಡಿಯಲ್ಲಿ ಶಾಂತಿ ಸ್ಥಾಪನೆ ಕುರಿತು 23ನೇ ಸುತ್ತಿನ ಮಾತುಕತೆ ನಡೆದಿದೆ.
2025-10-29
ಭಿನ್ನ ಶೀರ್ಷಿಕೆಯ ‘ಆಪರೇಷನ್ ಲಂಡನ್ ಕೆಫೆ’ ಸಿನಿಮಾದ ಬಿಡುಗಡೆ ದಿನಾಂಕವನ್ನು ತಿಳಿಸಲಾಗಿದೆ. ನಟಿ ಮೇಘಾ ಶೆಟ್ಟಿ ಹಾಗೂ ನಟ ಕವೀಶ್ ಶೆಟ್ಟಿ ಅಭಿನಯಿಸಿರುವ ಮೂರು ಭಾಷೆಯ ಸಿನಿಮಾ ಇದು. ಕನ್ನಡ ಚಿತ್ರರಂಗ ಮತ್ತು ಮರಾಠಿ ಚಿತ್ರತಂಗದ ಹೆಸರಾಂತ ಕಲಾವಿದರ ಸಂಗಮ ಈ ಸಿನಿಮಾದಲ್ಲಿ ಆಗಿದೆ.
2025-10-29
ಭಾರತ- ಪಾಕ್ ಯುದ್ಧ ಕುರಿತು ಟ್ರಂಪ್ ಪದೇ ಪದೆ ಹೇಳಿಕೆ ನೀಡುತ್ತಿದ್ದು, ಇದೀಗ ಜಪಾನ್ನಲ್ಲೂ ಅವರು ಈ ಬಗ್ಗೆ ಮಾತನಾಡಿದ್ದಾರೆ.
2025-10-29
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy