H16 News
Logo
IND vs AUS: ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ 1 ಬದಲಾವಣೆ
Sports
IND vs AUS: ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ 1 ಬದಲಾವಣೆ

Australia vs India: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟಿ20 ಸರಣಿಯ ಕೊನೆಯ ಮ್ಯಾಚ್ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿ ಜಯಿಸಬಹುದು. ಅತ್ತ ಸರಣಿ ಸೋಲನ್ನು ತಪ್ಪಿಸಿಕೊಳ್ಳಲು ಆಸ್ಟ್ರೇಲಿಯಾ ತಂಡ ಇಂದಿನ ಮ್ಯಾಚ್ನಲ್ಲಿ ಗೆಲ್ಲಲೇಬೇಕು. ಹೀಗಾಗಿ ಗಬ್ಬಾ ಮೈದಾನದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

2025-11-08

ಉಡುಪಿ ಶ್ರೀ ಕೃಷ್ಣಮಠದಲ್ಲಿ ಬೃಹತ್ ಗೀತೋತ್ಸವ ಆರಂಭ
Trending
ಉಡುಪಿ ಶ್ರೀ ಕೃಷ್ಣಮಠದಲ್ಲಿ ಬೃಹತ್ ಗೀತೋತ್ಸವ ಆರಂಭ

ಉಡುಪಿಯ ಕೃಷ್ಣಮಠದಲ್ಲಿ ಇಂದಿನಿಂದ ನಡೆಯಲಿರುವ ಬೃಹತ್ ಗೀತೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ ಎಂದು ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀ ಹೇಳಿದ್ದಾರೆ.

2025-11-08

ದಿಯೋಘರ್ನಲ್ಲಿ ತೇಜಸ್ವಿ ಯಾದವ್ ಭರ್ಜರಿ ಪ್ರಚಾರ
Breaking News
ದಿಯೋಘರ್ನಲ್ಲಿ ತೇಜಸ್ವಿ ಯಾದವ್ ಭರ್ಜರಿ ಪ್ರಚಾರ

ಎರಡನೇ ಹಂತದ ಚುನಾವಣಾ ಅಭ್ಯರ್ಥಿಗಳನ್ನು ಭೇಟಿಯಾಗಿರುವ ತೇಜಸ್ವಿ ಯಾದವ್, ಪಕ್ಷದ ಕಾರ್ಯಕರ್ತರಿಗೆ ಪ್ರಚಾರದಲ್ಲಿ ಭಾಗಿಯಾಗಲು ಉತ್ತೇಜನ ನೀಡಿದರು.

2025-11-08

ಕಲಬುರಗಿ: ಹಗಲಲ್ಲಿ ಕುರಾನ್ ಬೋಧಕ  ರಾತ್ರಿ ಮನೆಗಳಿಗೆ ಕನ್ನ, ಶಿಕ್ಷಕ ಅರೆಸ್ಟ್
Breaking News
ಕಲಬುರಗಿ: ಹಗಲಲ್ಲಿ ಕುರಾನ್ ಬೋಧಕ ರಾತ್ರಿ ಮನೆಗಳಿಗೆ ಕನ್ನ, ಶಿಕ್ಷಕ ಅರೆಸ್ಟ್

ಕಲಬುರಗಿಯಲ್ಲಿ ಶಿಕ್ಷಕನೊಬ್ಬ ಸಾಲಬಾಧೆ ತಾಳಲಾರದೆ ಮನೆಗಳ್ಳತನಕ್ಕೆ ಇಳಿದು ಇದೀಗ ಸಿಕ್ಕಿಬಿದ್ದಿರುವಂತಹ ಘಟನೆ ನಡೆದಿದೆ. ಹಗಲಿನಲ್ಲಿ ಮಸೀದಿಯಲ್ಲಿ ಕುರಾನ್ ಬೋಧಿಸುತ್ತಿದ್ದು, ರಾತ್ರಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಶಿಕ್ಷಕನನ್ನು ವಿಶ್ವವಿದ್ಯಾಲಯ ಠಾಣಾ ಪೊಲೀಸರು ಬಂಧಿಸಿದ್ದಾರೆ. 13 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ, ಬೈಕ್ ಸೇರಿ ವಿವಿಧ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

2025-11-08

ಬದಕು ಬದಲಾಯಿಸಿದ ಅಣಬೆ ಕೃಷಿ
Breaking News
ಬದಕು ಬದಲಾಯಿಸಿದ ಅಣಬೆ ಕೃಷಿ

ಅಣಬೆ ಫಾರ್ಮ್ನಲ್ಲಿ ಕೇವಲ ತಿಂಗಳಿಗೆ 3,200 ಸಂಬಳ ಪಡೆಯುತ್ತಿದ್ದ ಹರಿಯಾಣದ ರೈತ ಈಗ ಸ್ವಂತ ಅಣಬೆ ಕೃಷಿ ಆರಂಭಿಸಿ ಊಹಿಸಲು ಅಸಾಧ್ಯ ಎಂಬಂತೆ ವರ್ಷಕ್ಕೆ ಕೋಟಿ ಕೋಟಿ ವ್ಯವಹಾರ ನಡೆಸುತ್ತಿದ್ದಾರೆ.

2025-11-08

ಡಿಸೆಂಬರ್ 1ರಿಂದ 19ರವರೆಗೆ ಸಂಸತ್ ಚಳಿಗಾಲದ ಅಧಿವೇಶನ
Breaking News
ಡಿಸೆಂಬರ್ 1ರಿಂದ 19ರವರೆಗೆ ಸಂಸತ್ ಚಳಿಗಾಲದ ಅಧಿವೇಶನ

ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಈ ಅಧಿವೇಶನದ ಮೂಲಕ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ರಾಜ್ಯಸಭೆಯ ಸಭಾಪತಿಯಾಗಿ ಪದಾರ್ಪಣೆ ಮಾಡಲಿದ್ದಾರೆ.

2025-11-08

ಮೋದಿ ಉದ್ಘಾಟಿಸಿದ ವಂದೇ ಭಾರತ್ನಿಂದ 2 ಗಂಟೆ ಕಡಿಮೆಯಾಗಲಿದೆ ಎರ್ನಾಕುಲಂ ಬೆಂಗಳೂರು
Breaking News
ಮೋದಿ ಉದ್ಘಾಟಿಸಿದ ವಂದೇ ಭಾರತ್ನಿಂದ 2 ಗಂಟೆ ಕಡಿಮೆಯಾಗಲಿದೆ ಎರ್ನಾಕುಲಂ ಬೆಂಗಳೂರು

ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೆಂಗಳೂರು- ಎರ್ನಾಕುಲಂ ನಡುವಿನ ರೈಲು ಪ್ರಯಾಣದ ಸಮಯವನ್ನು 2 ಗಂಟೆಗಳಿಗೂ ಹೆಚ್ಚು ಕಡಿತಗೊಳಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ 4 ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಲ್ಲಿ ಬೆಂಗಳೂರು-ಎರ್ನಾಕುಲಂ ಮಾರ್ಗದ ರೈಲು ಕೂಡ ಸೇರಿದೆ. ಇದು ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

2025-11-08

1 ಲಕ್ಷ ರೂ. ಖರ್ಚು ಮಾಡಿ ಕುಗ್ರಾಮಕ್ಕೆ ಸೇತುವೆ ನಿರ್ಮಾಣ ಮಾಡಿದ ಯೂಟ್ಯೂಬರ್
Breaking News
1 ಲಕ್ಷ ರೂ. ಖರ್ಚು ಮಾಡಿ ಕುಗ್ರಾಮಕ್ಕೆ ಸೇತುವೆ ನಿರ್ಮಾಣ ಮಾಡಿದ ಯೂಟ್ಯೂಬರ್

ಮೊಂಥಾ ಚಂಡಮಾರುತದಲ್ಲಿ ಈ ಮುಂಚೆ ಇದ್ದ ಸೇತುವೆ ಕೊಚ್ಚಿ ಹೋಗಿದ್ದು, ಗ್ರಾಮ ಸಂಪರ್ಕ ಕಡಿತಗೊಂಡಿತ್ತು.

2025-11-08

ಧರ್ಮಸ್ಥಳದಲ್ಲಿ 74 ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕು
Trending
ಧರ್ಮಸ್ಥಳದಲ್ಲಿ 74 ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕು

ಧರ್ಮಸ್ಥಳದಲ್ಲಿ 74 ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕು, ಸಾಕ್ಷ್ಯನಾಶ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಬೆಳ್ತಂಗಡಿಯ ಮೃತ ವಿದ್ಯಾರ್ಥಿನಿ ತಾಯಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

2025-11-08

ಬಾಡಿ ಶೇಮಿಂಗ್: ನಟಿಯ ಬೆಂಬಲಕ್ಕೆ ಬಂದ ತಮಿಳು ಚಿತ್ರರಂಗ
Entertainment
ಬಾಡಿ ಶೇಮಿಂಗ್: ನಟಿಯ ಬೆಂಬಲಕ್ಕೆ ಬಂದ ತಮಿಳು ಚಿತ್ರರಂಗ

Gouri Kishan: ಸಿನಿಮಾ ಒಂದರ ಸುದ್ದಿಗೋಷ್ಠಿಯಲ್ಲಿ ತಮಿಳು ಸಿನಿಮಾ ನಟಿ ಗೌರಿ ಕಿಶನ್ ಅವರಿಗೆ ಮುಜುಗರ ಉಂಟಾಗುವಂಥ ಪ್ರಶ್ನೆ ಕೇಳಲಾಯ್ತು. ಪ್ರಶ್ನೆ ಕೇಳಿದ ವ್ಯಕ್ತಿಯನ್ನು ಅಲ್ಲಿಯೇ ತರಾಟೆಗೆ ತೆಗೆದುಕೊಂಡರು ಯುವನಟಿ ಗೌರಿ ಕಿಶನ್. ಇದೀಗ ಬಾಡಿ ಶೇಮಿಂಗ್ಗೆ ಒಳಗಾಗಿರುವ ಗೌರಿ ಕಿಶನ್ ಬೆಂಬಲಕ್ಕೆ ತಮಿಳು ಚಿತ್ರರಂಗದ ಕೆಲ ಸೆಲೆಬ್ರಿಟಿಗಳು ಬಂದಿದ್ದಾರೆ. ನಟಿ ಸಹ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

2025-11-08

ನೀವು ಸ್ಮಾರ್ಟ್ ವಾಚ್ ಬಳಸುವವರಾದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ
Health
ನೀವು ಸ್ಮಾರ್ಟ್ ವಾಚ್ ಬಳಸುವವರಾದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ

ನೀವು ಕೂಡ ಸ್ಮಾರ್ಟ್ ವಾಚ್ ಬಳಸುತ್ತೀರಾ? ಹಾಗಿದ್ರೆ ನೀವು ಈ ಸ್ಟೋರಿಯನ್ನು ತಪ್ಪದೆ ಓದಲೇಬೇಕು. ಏಕೆಂದರೆ ಸ್ಮಾರ್ಟ್ ವಾಚ್ ಕಟ್ಟಿಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯೂ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಅವಶ್ಯಕವಾಗಿದೆ. ಆರೋಗ್ಯ ತಜ್ಞರು ಕೂಡ ಈ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ವಾಚ್ ಗಳಲ್ಲಿ ಹಲವಾರು ವೈಶಿಷ್ಟ್ಯಗಳಿದ್ದರೂ ಕೂಡ ಸರಿಯಾಗಿ ಬಳಸದಿದ್ದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಈ ಹಿಂದೆ ಇಂತಹ ಸಮಸ್ಯೆಗಳು ವರದಿಯಾಗಿರುವುದರಿಂದ ಸ್ವಲ್ಪ ಎಚ್ಚರಿಕೆ ವಹಿಸುವುದು ಒಳ್ಳೆಯದು. ಹಾಗಾದರೆ, ಸ್ಮಾರ್ಟ್ವಾಚ್ನ ಬಗ್ಗೆ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

2025-11-08

3,300 ರೂ. ದರ ನಿಗದಿ ಅವೈಜ್ಞಾನಿಕ; 3,500 ರೂ. ದರಕ್ಕಾಗಿ ಬೈಲಹೊಂಗಲ ಬಂದ್!
Breaking News
3,300 ರೂ. ದರ ನಿಗದಿ ಅವೈಜ್ಞಾನಿಕ; 3,500 ರೂ. ದರಕ್ಕಾಗಿ ಬೈಲಹೊಂಗಲ ಬಂದ್!

ನಿನ್ನೆ ಮುಖ್ಯಮಂತ್ರಿಗಳು ರಿಕವರಿ ಆಧಾರದ ಮೇಲೆ 3,300 ರೂ. ನೀಡುವುದಾಗಿ ಹೇಳಿರುವುದು ಅವೈಜ್ಞಾನಿಕ. ಇದನ್ನು ಕಬ್ಬು ಬೆಳೆಗಾರರು ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2025-11-08

ಕಾರು ವಿವಾದದ ಬೆನ್ನಲ್ಲೆ ಮತ್ತೊಂದು ಹೊಸ ಕಾರು ಖರೀದಿಸಿದ ದುಲ್ಕರ್ ಸಲ್ಮಾನ್
Entertainment
ಕಾರು ವಿವಾದದ ಬೆನ್ನಲ್ಲೆ ಮತ್ತೊಂದು ಹೊಸ ಕಾರು ಖರೀದಿಸಿದ ದುಲ್ಕರ್ ಸಲ್ಮಾನ್

Dulquar Salman car collection: ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಸಂಗ್ರಹದಲ್ಲಿ ಜಗತ್ತಿನ ಅತ್ಯುತ್ತಮ ಕಾರುಗಳಿವೆ. ಒಂದರ ಹಿಂದೊಂದು ಹೊಸ ಕಾರುಗಳನ್ನು ಅವರು ಖರೀದಿ ಮಾಡುತ್ತಲೇ ಇರುತ್ತಾರೆ. ಇದೀಗ ದುಲ್ಕರ್ ಸಲ್ಮಾನ್ ಅವರು ಮತ್ತೊಂದು ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ. ಈ ಕಾರಿನ ಬೆಲೆ ಎಷ್ಟು ಕೋಟಿ, ವಿಶೇಷತೆಗಳೇನು? ಇಲ್ಲಿದೆ ಮಾಹಿತಿ...

2025-11-08

ಕಬ್ಬಿಗೆ ದರ ನಿಗದಿ ಬಳಿಕವೂ ಮುಂದುವರಿದ ಜಟಾಪಟಿ  ರೈತರು, ಮಾಲೀಕರಲ್ಲೇ
Breaking News
ಕಬ್ಬಿಗೆ ದರ ನಿಗದಿ ಬಳಿಕವೂ ಮುಂದುವರಿದ ಜಟಾಪಟಿ ರೈತರು, ಮಾಲೀಕರಲ್ಲೇ

ಸರ್ಕಾರ ಪ್ರತಿಟನ್ ಕಬ್ಬಿಗೆ 3,300 ರೂ ನಿಗದಿಪಡಿಸುವುದರೊಂದಿಗೆ ಕಬ್ಬು ಬೆಳೆಗಾರರ ಹೋರಾಟ ಇದೀಗ ಅಂತ್ಯಗೊಂಡಿದೆ. ಕೆಲವು ರೈತರು ಈ ನಿರ್ಧಾರವನ್ನು ಸ್ವಾಗತಿಸಿದರೆ, ಇನ್ನು ಕೆಲವರು ರಿಕವರಿ ದರದ ಸಮಸ್ಯೆಯಿಂದ ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ. ಹೀಗಾಗಿ ಕಬ್ಬಿಗೆ ದರ ನಿಗದಿ ಬಳಿಕವೂ ಜಟಾಪಟಿ ಮುಂದುವರೆದಿದೆ.

2025-11-08

2025 - 26 ಹಂಗಾಮಿನಲ್ಲಿ ರೈತರಿಗೆ ಪ್ರತಿ ಟನ್ ಕಬ್ಬಿಗೆ 100 ರೂ. ಹೆಚ್ಚಿಸಿ ಸರ್ಕಾರದಿಂದ ಅಧಿಕೃತ ಆದೇಶ
Breaking News
2025 - 26 ಹಂಗಾಮಿನಲ್ಲಿ ರೈತರಿಗೆ ಪ್ರತಿ ಟನ್ ಕಬ್ಬಿಗೆ 100 ರೂ. ಹೆಚ್ಚಿಸಿ ಸರ್ಕಾರದಿಂದ ಅಧಿಕೃತ ಆದೇಶ

ನಿನ್ನೆ ಮುಖ್ಯಮಂತ್ರಿಗಳು ರಿಕವರಿ ಆಧಾರದ ಮೇಲೆ 3,300 ರೂ. ನೀಡುವುದಾಗಿ ಹೇಳಿರುವುದು ಅವೈಜ್ಞಾನಿಕ. ಇದನ್ನು ಕಬ್ಬು ಬೆಳೆಗಾರರು ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2025-11-08

'ಗುಂಡಿಗಳಿಗೆ ಅವರ ಸರ್ಕಾರವೇ ಪಿತಾಮಹ' - ಡಿಸಿಎಂ
Breaking News
'ಗುಂಡಿಗಳಿಗೆ ಅವರ ಸರ್ಕಾರವೇ ಪಿತಾಮಹ' - ಡಿಸಿಎಂ

ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆ ಹಾಗೂ ರಸ್ತೆಗುಂಡಿ ಸಮಸ್ಯೆ ವಿರುದ್ಧ ಒಂದು ವಾರ ಬಿಜೆಪಿ ಜನಪ್ರತಿನಿಧಿಗಳ ವತಿಯಿಂದ ಸರ್ಕಾರದ ವಿರುದ್ಧ ಅಭಿಯಾನ ನಡೆಸುತ್ತಿದೆ. ಬಿಜೆಪಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

2025-11-08

ಒಂದೇ ದಿನ 2 ತಂಡಗಳ ವಿರುದ್ಧ ಸೋತ ಟೀಮ್ ಇಂಡಿಯಾ
Sports
ಒಂದೇ ದಿನ 2 ತಂಡಗಳ ವಿರುದ್ಧ ಸೋತ ಟೀಮ್ ಇಂಡಿಯಾ

Hong Kong Sixes: ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯು 1993 ರಲ್ಲೇ ಪ್ರಾರಂಭವಾಗಿತ್ತು. 1997 ರವರೆಗೆ ಪ್ರತಿ ವರ್ಷ ಆಯೋಜನೆಗೊಂಡಿದ್ದ ಈ ಟೂರ್ನಿಯನ್ನು ಆ ಬಳಿಕ ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಇದಾದ ಬಳಿಕ 2001 ರಲ್ಲಿ ಮತ್ತೆ ಶುರುವಾದ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಸತತ 13 ಸೀಸನ್ಗಳನ್ನು ಆಡಲಾಗಿದೆ.

2025-11-08

ಕಬ್ಬು ಬೆಳೆಗಾರರ ಹೋರಾಟದ ಕಿಚ್ಚು ತಾತ್ಕಾಲಿಕ ಶಮನ : ಜಗದೀಶ್ ಶೆಟ್ಟರ್
Breaking News
ಕಬ್ಬು ಬೆಳೆಗಾರರ ಹೋರಾಟದ ಕಿಚ್ಚು ತಾತ್ಕಾಲಿಕ ಶಮನ : ಜಗದೀಶ್ ಶೆಟ್ಟರ್

ಕಬ್ಬು ಬೆಳೆಗಾರರ ಹೋರಾಟ ಯಾವಾಗ ಬೇಕಾದರೂ ಹೆಚ್ಚಾಗಬಹುದು. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಇಂತಹ ಸಮಸ್ಯೆ ನಿರ್ಮಾಣವಾಗಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

2025-11-08

ವ್ಯಾಘ್ರನ ಅಟ್ಟಹಾಸಕ್ಕೆ ಮೈಸೂರಲ್ಲಿ ಮತ್ತೊಬ್ಬ ರೈತ ಬಲಿ
Breaking News
ವ್ಯಾಘ್ರನ ಅಟ್ಟಹಾಸಕ್ಕೆ ಮೈಸೂರಲ್ಲಿ ಮತ್ತೊಬ್ಬ ರೈತ ಬಲಿ

ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಮುಂದುವರಿದಿದ್ದು, ಸರಗೂರು ತಾಲ್ಲೂಕಿನಲ್ಲಿ ಮತ್ತೊಬ್ಬ ರೈತ ಬಲಿಯಾಗಿದ್ದಾರೆ. ದನ ಕಾಯುತ್ತಿದ್ದಾತನ ಮೇಲೆ ವ್ಯಾಘ್ರ ಅಟ್ಯಾಕ್ ಮಾಡಿದ್ದು, ಇದೇ ಗ್ರಾಮದಲ್ಲಿ ಮೇಲಿಂದ ಮೇಲೆ ಇಂತಹ ಘಟನೆ ವರದಿಯಾಗುತ್ತಲೇ ಇವೆ. ಹುಲಿ ದಾಳಿಯಿಂದ ಕಾಡಂಚಿನ ಗ್ರಾಮಗಳ ಜನ ಭಯಭೀತರಾಗಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2025-11-07

ಬೆಂಗಳೂರಿಗರೇ ಈ ರಸ್ತೆಗಳಲ್ಲಿ ಇಂದು ಸಂಚಾರ ಬದಲಾವಣೆ
Trending
ಬೆಂಗಳೂರಿಗರೇ ಈ ರಸ್ತೆಗಳಲ್ಲಿ ಇಂದು ಸಂಚಾರ ಬದಲಾವಣೆ

ಇಂದು (ನ.7) ಮಧ್ಯಾಹ್ನ 3 ಗಂಟೆಗೆ ಬೊಮ್ಮನಹಳ್ಳಿ ಜಂಕ್ಷನ್ನಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯಲಿರುವ ಕಾರಣ ಕೆಲವು ರಸ್ತೆಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಹೀಗಾಗಿ ಬೆಂಗಳೂರು ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದು, ವಾಹನ ಸವಾರರು ಸಹಕರಿಸಲು ಮನವಿ ಮಾಡಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ.

2025-11-07

ಬೆಂಗಳೂರು, ಮೈಸೂರು ಸೇರಿ ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ
Breaking News
ಬೆಂಗಳೂರು, ಮೈಸೂರು ಸೇರಿ ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ

ಕರ್ನಾಟಕದಾದ್ಯಂತ ಮುಂದಿನ ಎರಡು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ.ಕರ್ನಾಟಕದಲ್ಲಿ ಮುಂಗಾರು ಕಡಿಮೆಯಾಗಿದ್ದರೂ ಕೂಡ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲೂ ಮಳೆಯಾಗುತ್ತಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ.ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣಹವೆ ಮುಂದುವರೆಯಲಿದೆ. ಬಂಡೀಪುರ, ಹೊಸಕೋಟೆ, ಜೇವರಗಿ, ಶಾಹಪುರ, ಶೋರಾಪುರದಲ್ಲಿ ಮಳೆಯಾಗಿದೆ.ಮೈಸೂರಿನಲ್ಲಿ 18.2 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

2025-11-07

ಭಾರತ ಆಸೀಸ್ ನಡುವಿನ ಸರಣಿ ನಿರ್ಧಾರಕ ಪಂದ್ಯ ಯಾವಾಗ, ಎಲ್ಲಿ ನಡೆಯಲಿದೆ
Sports
ಭಾರತ ಆಸೀಸ್ ನಡುವಿನ ಸರಣಿ ನಿರ್ಧಾರಕ ಪಂದ್ಯ ಯಾವಾಗ, ಎಲ್ಲಿ ನಡೆಯಲಿದೆ

India vs Australia 5th T20: ಆಸ್ಟ್ರೇಲಿಯಾ ವಿರುದ್ಧದ 4ನೇ ಟಿ20 ಗೆದ್ದು ಭಾರತ 2-1 ಮುನ್ನಡೆ ಸಾಧಿಸಿದೆ. ಇದೀಗ 5ನೇ ಹಾಗೂ ಅಂತಿಮ ಪಂದ್ಯ ನವೆಂಬರ್ 8ರಂದು ಗಬ್ಬಾ ಮೈದಾನದಲ್ಲಿ ನಡೆಯಲಿದೆ. ಮಧ್ಯಾಹ್ನ 1:45ಕ್ಕೆ ಆರಂಭವಾಗುವ ಈ ಪಂದ್ಯ ಸರಣಿ ನಿರ್ಧಾರಕವಾಗಿದ್ದು, ಭಾರತ ಸರಣಿ ಗೆಲ್ಲಲು ಎದುರು ನೋಡುತ್ತಿದೆ. ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಸಿನಿಮಾದಲ್ಲಿ ಲಭ್ಯ.

2025-11-07

ಮೋದಿಯನ್ನು ಒಳ್ಳೆಯ ಸ್ನೇಹಿತನೆಂದು ಮತ್ತೆ ಹೊಗಳಿ ಭಾರತಕ್ಕೆ ಟ್ರಂಪ್
Breaking News
ಮೋದಿಯನ್ನು ಒಳ್ಳೆಯ ಸ್ನೇಹಿತನೆಂದು ಮತ್ತೆ ಹೊಗಳಿ ಭಾರತಕ್ಕೆ ಟ್ರಂಪ್

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಮಾತುಕತೆ ಚೆನ್ನಾಗಿ ನಡೆಯುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವ್ಯಾಪಾರ ಮಾತುಕತೆಗಳು ನಡೆಯುತ್ತಿವೆ ಮತ್ತು ಅವರು ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಅವರನ್ನು ಒಬ್ಬ ಮಹಾನ್ ವ್ಯಕ್ತಿ ಮತ್ತು ಸ್ನೇಹಿತ ಎಂದು ಅವರು ಬಣ್ಣಿಸಿದ್ದಾರೆ. ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದೆ ಎಂಬ ತಮ್ಮ ಹೇಳಿಕೆಯನ್ನು ಅವರು ಪುನರುಚ್ಚರಿಸಿದ್ದಾರೆ.

2025-11-07

ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿಯ ಮೃತದೇಹ ರಷ್ಯಾದ ಅಣೆಕಟ್ಟಿನಲ್ಲಿ ಪತ್ತೆ
Breaking News
ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿಯ ಮೃತದೇಹ ರಷ್ಯಾದ ಅಣೆಕಟ್ಟಿನಲ್ಲಿ ಪತ್ತೆ

ರಷ್ಯಾ(Russia)ದ ಉಫಾ ನಗರದಲ್ಲಿ ನಾಪತ್ತೆಯಾಗಿದ್ದ 22 ವರ್ಷದ ಭಾರತೀಯ ವಿದ್ಯಾರ್ಥಿಯ ಮೃತದೇಹ ಗುರುವಾರ ಅಣೆಕಟ್ಟಿನಲ್ಲಿ ಪತ್ತೆಯಾಗಿದೆ. ರಾಜಸ್ಥಾನದ ಅಲ್ವಾರ್ನ ಲಕ್ಷ್ಮಣಗಢದ ಕಫನ್ವಾಡ ಗ್ರಾಮದ ನಿವಾಸಿ ಅಜಿತ್ ಸಿಂಗ್ ಚೌಧರಿ ಅವರು 2023 ರಲ್ಲಿ ಎಂಬಿಬಿಎಸ್ ಕೋರ್ಸ್ಗಾಗಿ ಬಶ್ಕಿರ್ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಸೇರಿದ್ದರು. ಇದೇ ಅಕ್ಟೋಬರ್ 19 ರಂದು ಅವರು ಉಫಾದಲ್ಲಿ ಕಾಣೆಯಾಗಿದ್ದರು.

2025-11-07

ಕಮಲ್ ಹಾಸನ್ ಹಳೆ ಸಿನಿಮಾ ಮರು ಬಿಡುಗಡೆಗೂ ವಿರೋಧ
Entertainment
ಕಮಲ್ ಹಾಸನ್ ಹಳೆ ಸಿನಿಮಾ ಮರು ಬಿಡುಗಡೆಗೂ ವಿರೋಧ

Kamal Haasan movie: ಕನ್ನಡದ ಬಗ್ಗೆ ಲಘು ಹೇಳಿಕೆ ನೀಡಿದ್ದ ಕಮಲ್ ಹಾಸನ್ ಅವರಿಗೆ ಈ ಹಿಂದೆಯೇ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯ ರುಚಿ ತೋರಿಸಿದ್ದಾಗಿದೆ. ಆದರೆ ಇಂದು ಮತ್ತೆ ಕನ್ನಡಪರ ಸಂಘಟನೆ ಸದಸ್ಯರು ಕಮಲ್ ಹಾಸನ್ ವಿರುದ್ಧ ಪ್ರತಿಭಟಿಸಿ ಘೋಷಣೆ ಕೂಗಿದರು. ಇಂದು ಅವರ ನಟನೆಯ ಹಳೆಯ ಸಿನಿಮಾ ‘ನಾಯಗನ್’ ಮರು ಬಿಡುಗಡೆ.

2025-11-07

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy