ಖ್ಯಾತ ಯಕ್ಷಗಾನ ಕಲಾವಿದ, ಅರ್ಥಧಾರಿ ವಿಟ್ಲ ಶಂಭು ಶರ್ಮ ಅವರು ಶನಿವಾರ ಬೆಳಗ್ಗೆ ಇಹಲೋಕ ತ್ಯಜಿಸಿದರು.
2025-11-01
Australia vs India Second T20i: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಅಕ್ಟೋಬರ್ 31 ರಂದು ಅಂದರೆ ಇಂದು ಮೆಲ್ಬೋರ್ನ್ ಮೈದಾನದಲ್ಲಿ ನಡೆಯಲಿದೆ. ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾದ ಕಾರಣ ಇಂದಿನ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
2025-10-31
Kannada Rajyotsava: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬಳ್ಳಾರಿಯಲ್ಲಿ ನವೆಂಬರ್ 1ರಿಂದ 7ರವರೆಗೆ ಎಲ್ಲಾ ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ಕನ್ನಡ ಸಿನಿಮಾಗಳನ್ನು ಪ್ರದರ್ಶಿಸುವಂತೆ ಜಿಲ್ಲಾಡಳಿತ ಆದೇಶಿಸಿದೆ. ನಿರ್ದೇಶನ ಪಾಲಿಸದ ಹಾಲ್ಗಳಿಗೆ ಪರವಾನಿಗೆ ನವೀಕರಣ ನೀಡುವುದಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಮುಹಮ್ಮದ್ ಎನ್. ಝುಬೇರ್ ಎಚ್ಚರಿಸಿದ್ದಾರೆ.
2025-10-31
Vegetable Price Hike: ನೆರೆ ರಾಜ್ಯಗಳಿಗೆ ಮೊಂತಾ ಚಂಡಮಾರುತ ಅಪ್ಪಳಿಸಿ ಅವಾಂತರ ಸೃಷ್ಟಿಸಿದ್ದಲ್ಲದೇ ಕರ್ನಾಟಕದ ಮೇಲು ಪರಿಣಾಮ ಬೀರಿತ್ತು. ಈ ಹಿನ್ನೆಲೆ ರಾಜ್ಯದ ಹಲವೆಡೆ ವರುಣಾರ್ಭಟ ಜೋರಾಗಿತ್ತು. ಇದೀಗ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತರಕಾರಿ ಬೆಳೆ ಹಾಳಾಗಿದ್ದು, ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಗ್ರಾಹಕರು ಕೊಳ್ಳಲು ಹಿಂದೇಟು ಹಾಕುತ್ತಿದ್ದು, ವ್ಯಾಪಾರಿಗಳು ನಷ್ಟದಲ್ಲಿದ್ದಾರೆ.
2025-10-31
ಅದು ದೇವನಹಳ್ಳಿ ತಾಲೂಕಿನ ಹೆಗ್ಗನಹಳ್ಳಿಯ ಪುರೋಹಿತರ ಕುಟುಂಬ. ಅಪ್ಪ-ಅಮ್ಮ, ಇಬ್ಬರು ಗಂಡು ಮಕ್ಕಳು ಇರುವ ಮಾರ್ಯದಸ್ಥರ ಸಂಸಾರ. ಚೆನ್ನಾಗಿದ್ದ ಆ ಕುಟುಂಬಕ್ಕೆ ಅದೇನಾಯ್ತೋ ಏನೋ, ಮುಸ್ಸಂಜೆ ವೇಳೆಗೆ ಇಡೀ ಕುಟುಂಬವೇ ಸಾವಿನ ಮನೆ ಸೇರುವ ನಿರ್ಧಾರ ಮಾಡಿದೆ. ಇಬ್ಬರು ಮೃತಪಟ್ಟಿದ್ದರೆ, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.
2025-10-31
ಬಿಜೆಪಿ ಮುಖಂಡ ವಿಜು ಗೌಡ ಪಾಟೀಲ್ ಪುತ್ರ ಸಮರ್ಥ ಗೌಡ ಮತ್ತು ಗೆಳೆಯರಿಂದ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿತ್ತು. ಈ ಹಿನ್ನೆಲೆ ಥಳಿತಕ್ಕೊಳಗಾಗಿದ್ದ ಟೋಲ್ ಸಿಬ್ಬಂದಿ ಯಾವುದೇ ದೂರು ದಾಖಲಿಸದೇ ಇದ್ದರೂ, ತನ್ನ ಮಗನ ತಪ್ಪಿಗೆ ನಾನು ಕ್ಷಮೆ ಕೇಳುತ್ತೇನೆ ಎಂದು ವಿಜು ಗೌಡ ಪಾಟೀಲ್ ಹೇಳಿದ್ದಾರೆ.
2025-10-31
Karnataka Rajyotsava 2025 and Bank Holiday: ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬ್ಯಾಂಕ್ಗಳಿಗೆ ರಜೆ ಇರಲಿದೆ. ಆರ್ಬಿಐ ರಜೆ ವೇಳಾಪಟ್ಟಿ ಪ್ರಕಾರ ರಾಜ್ಯದಲ್ಲಿ ಯಾವೆಲ್ಲ ಬ್ಯಾಂಕ್ಗಳು ರಜೆ ಇರಲಿವೆ ಎಂಬ ವಿವರ ಇಲ್ಲಿದೆ.
2025-10-31
ಬೆಂಗಳೂರಿನ ರಸ್ತೆ ಸುರಕ್ಷತೆ ಕುರಿತು ಕಳವಳ ಮೂಡಿಸಿರುವ ವೈರಲ್ ವಿಡಿಯೋವೊಂದು ಚರ್ಚೆಗೆ ಗ್ರಾಸವಾಗಿದೆ. ಹೆಲ್ಮೆಟ್ ಧರಿಸದೆ, ಫೋನ್ ಮಾತನಾಡುತ್ತಾ ಅಡ್ಡಾದಿಡ್ಡಿ ಬೈಕ್ ಓಡಿಸಿದ ಸವಾರ ಕಾರಿಗೆ ಡಿಕ್ಕಿ ಹೊಡೆದ ಘಟನೆ ಡ್ಯಾಶ್ಕ್ಯಾಮ್ನಲ್ಲಿ ಸೆರೆಯಾಗಿದೆ. ಈ ಅಜಾಗರೂಕ ಚಾಲನೆಯು ನಗರದ ರಸ್ತೆ ಸುರಕ್ಷತೆಯ ದುಸ್ಥಿತಿಯನ್ನು ಎತ್ತಿ ತೋರಿಸುತ್ತದೆ, ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.
2025-10-31
ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ಥಿಯೇಟರ್ನಲ್ಲಿ ಬಿಡುಗಡೆ ಕಂಡಿದೆ. ಈಗ ಚಿತ್ರ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ಕೇವಲ 30 ದಿನಕ್ಕೆ ಸಿನಿಮಾ ಒಟಿಟಿಗೆ ಬಂದಿದೆ ಅನ್ನೋದು ವಿಶೇಷ. ಇಂದಿನಿಂದ (ಅಕ್ಟೋಬರ್ 31) ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಸಿನಿಮಾ ವೀಕ್ಷಣೆಗೆ ಲಭ್ಯ ಇದೆ. ಈ ಸಿನಿಮಾದ ಒಟ್ಟಾರೆ ಕಲೆಕ್ಷನ್ ವಿವರ ಇಲ್ಲಿದೆ.
2025-10-31
Renuka Swamy case: ರೇಣುಕಾ ಸ್ವಾಮಿ ಕೊಲೆಯಾದ ಒಂದೂವರೆ ವರ್ಷದ ಬಳಿಕ ಆರೋಪಿಗಳ ಮೇಲೆ ದೋಷಾರೋಪ ನಿಗದಿ ಆಗಲಿದೆ. ಇಂದು ದೋಷಾರೋಪ ನಿಗದಿ ಆಗಲಿತ್ತು ಆದರೆ ಅದು ನವೆಂಬರ್ 3ಕ್ಕೆ ಮುಂದೂಡಲಾಗಿದೆ. ನವೆಂಬರ್ 3 ರಂದು ಪ್ರಕರಣದ ಎಲ್ಲ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ.
2025-10-31
Rohit Arya: ಮುಂಬೈನ ಪವಾಯ್ನಲ್ಲಿರುವ ಆರ್ಎ ಸ್ಟುಡಿಯೋನಲ್ಲಿ ರೋಹಿತ್ ಆರ್ಯ 17 ಮಕ್ಕಳನ್ನು ಒತ್ತೆ ಆಳಾಗಿ ಇರಿಸಿಕೊಂಡಿದ್ದ. ಆದರೆ ಪೊಲೀಸರ ಗುಂಡೇಟಿನಿಂದ ರೋಹಿತ್ ಆರ್ಯ ನಿಧನ ಹೊಂದಿದ್ದಾನೆ. ಆದರೆ ಈ ರೋಹಿತ್ ಯಾರು? ಆತ ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದು ಹೇಗೆ? ಆತನ ಬೇಡಿಕೆಗಳು ಏನಾಗಿದ್ದವು? ಇಲ್ಲಿದೆ ಪೂರ್ಣ ಮಾಹಿತಿ...
2025-10-31
ಹೇಗಾದರೂ ಸರಿ ಹಣ ಮಾಡಬೇಕು’- ಈ ಥೀಮ್ ಇಟ್ಟುಕೊಂಡು ಕನ್ನಡದಲ್ಲಿ ‘ಗುಲ್ಟು’, ‘ಮಾಯಾ ಬಜಾರ್ 2016’ ಸೇರಿದಂತೆ ಕೆಲವು ಸಿನಿಮಾಗಳು ಬಂದಿವೆ. ಈಗ ನಿರ್ದೇಶಕ ಶಶಾಂಕ್ ಅವರು ಇದೇ ರೀತಿಯ ಕಥಾ ಹಂದರ ಇಟ್ಟುಕೊಂಡು ‘ಬ್ರ್ಯಾಟ್’ ಸಿನಿಮಾ ಮಾಡಿದ್ದಾರೆ. ‘ಕೌಸಲ್ಯ ಸುಪ್ರಜಾ ರಾಮ’ ಬಳಿಕ ಡಾರ್ಲಿಂಗ್ ಕೃಷ್ಣ ಜೊತೆ ಮಾಡಿರೋ ಎರಡನೇ ಸಿನಿಮಾ. ಈ ಚಿತ್ರದ ವಿಮರ್ಶೆ ಇಲ್ಲಿದೆ.
2025-10-31
ಬಿಗ್ ಬಾಸ್ ಮನೆಯಲ್ಲಿ ಸೂರಜ್ ಸಿಂಗ್ ರಾಶಿಕಾ ಶೆಟ್ಟಿಗೆ ಪ್ರಪೋಸ್ ಮಾಡಿದ್ದಾರೆ. ಆದರೆ, ಇದಕ್ಕೆ ಅವರು ಅಚ್ಚರಿಯ ಉತ್ತರ ಹೊರಹಾಕಿದ್ದಾರೆ. ಬಿಗ್ ಬಾಸ್ನಲ್ಲಿ ಪ್ರೀತಿ, ಪ್ರಣಯಗಳು ಪ್ರೇಕ್ಷಕರ ಗಮನ ಸೆಳೆಯಲು ಸಾಮಾನ್ಯ. ಸೂರಜ್ ತಮ್ಮ ಆಟದ ಮೇಲೆ ಹೆಚ್ಚು ಗಮನ ಹರಿಸಬೇಕಿದೆ. ರಾಶಿಕಾ ಅವರ ಈ ಪ್ರತಿಕ್ರಿಯೆ ಆಟಕ್ಕೆ ಸಹಕಾರಿ ಆಗಲಿದೆ.
2025-10-31
ಬಿಗ್ ಬಾಸ್ ಮನೆಯಲ್ಲಿ ಕಳಪೆ ಆಯ್ಕೆ ವಿಚಾರದಲ್ಲಿ ಅಶ್ವಿನಿ ಹಾಗೂ ರಿಷಾ ಗೌಡ ಗಿಲ್ಲಿಗೆ ಕಳಪೆ ನೀಡಲು ಇತರರ ಮೇಲೆ ಪ್ರಭಾವ ಬೀರಿದ್ದಾರೆ. ಇದು ಬಿಗ್ ಬಾಸ್ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿಂದೆ ಇದೇ ಕಾರಣಕ್ಕೆ ಸುದೀಪ್ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಈ ವಾರ ಗಿಲ್ಲಿಗೆ ಕಳಪೆ ಸಿಗುವ ಸಾಧ್ಯತೆ ಇದ್ದು, ವೀಕೆಂಡ್ನಲ್ಲಿ ಸುದೀಪ್ ಈ ಬಗ್ಗೆ ಪ್ರಶ್ನಿಸುವ ನಿರೀಕ್ಷೆಯಿದೆ.
2025-10-31
ಪುನೀತ್ ರಾಜ್ಕುಮಾರ್ 'ಮಿಲನ' ಸಿನಿಮಾ ಮಾದರಿಯಲ್ಲೇ 'ಕರ್ಣ' ಧಾರಾವಾಹಿ ಸಾಗುತ್ತಿದೆ. ಕರ್ಣ ಮತ್ತು ನಿತ್ಯಾ ಮದುವೆಯಾಗಿದ್ದರೂ, ಕರ್ಣ ನಿತ್ಯಾಳನ್ನು ಆಕೆಯ ಪ್ರೇಮಿ ಸೂರಜ್ನೊಂದಿಗೆ ಸೇರಿಸಲು ಪ್ರಯತ್ನಿಸುತ್ತಾನೆ. ಸೂರಜ್ ಚಿಕ್ಕಮಗಳೂರಿನಲ್ಲಿರುವ ವಿಷಯ ತಿಳಿದಿದೆ. ಮುಂದಿನ ಕಥೆಯಲ್ಲಿ ನಿತ್ಯಾ ಸೂರಜ್ನೊಂದಿಗೆ ಒಂದಾಗುತ್ತಾಳೇ ಅಥವಾ ಕರ್ಣನ ಜೊತೆ ಅವಳ ಸಂಸಾರ ಮುಂದುವರಿಯುತ್ತದೆಯೇ ಎಂಬುದೇ ಕುತೂಹಲ.
2025-10-31
ಶೃಂಗೇರಿಯಲ್ಲಿ ಆನೆ ದಾಳಿಗೆ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
2025-10-31
ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ನಿರಂತರವಾದ ಅಪರಾಧ ಪ್ರಕರಣಗಳನ್ನು ನಿಗ್ರಹಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ದೂರಿದರು.
2025-10-31
'ಎ' ಸಿನಿಮಾದಲ್ಲಿ ಉಪೇಂದ್ರ ಹೇಳಿದ ಮಾತು ಕೇಳಿ ಓಡಿ ಹೋದ ಬಾಲಕ 27 ವರ್ಷಗಳ ಬಳಿಕ ಮತ್ತೆ ನಟ ಉಪೇಂದ್ರಗೆ ಸಿಕ್ಕಿದ್ದರು. ‘ಯುಐ’ ಚಿತ್ರದ ಸುದ್ದಿಗೋಷ್ಠಿ ವೇಳೆ ಈ ಅನಿರೀಕ್ಷಿತ ಭೇಟಿ ನಡೆದಿತ್ತು, ಉಪೇಂದ್ರ ಅವರಿಗೆ ಈ ವಿಚಾರ ಅಚ್ಚರಿ ತಂದಿದೆ. ಬಾಲಕ ಈಗ ದೊಡ್ಡವನಾಗಿ ತಮ್ಮನ್ನು ಭೇಟಿಯಾದ ಕ್ಷಣವನ್ನು ಉಪೇಂದ್ರ ಅಚ್ಚರಿಗೊಂಡರು.
2025-10-31
ಹಾವೇರಿ ಜಿಲ್ಲೆಯಲ್ಲಿ ರೈತನಿಗೆ ಆದಾಯವೇ ಇಲ್ಲದಂತಾಗಿದೆ. ಹೀಗಾಗಿ, ತಮ್ಮ ಎತ್ತುಗಳನ್ನು ಮಾರಾಟ ಮಾಡಿ ಬದುಕು ಸಾಗಿಸಲು ಮುಂದಾಗಿದ್ದಾರೆ.
2025-10-31
ಅಂಗನವಾಡಿ ಸಹಾಯಕಿ ಈ ಘಟನೆ ನಂತರ ಪರಾರಿಯಾಗಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಸಹಾಯಕಿಯ ಹುಡುಕಾಟ ನಡೆಸಿದ್ದಾರೆ.
2025-10-31
ಪ್ರತ್ಯೇಕ ಘಟನೆಯಲ್ಲಿ ಮೂವರು ಬಾಲಕರು ಮೃತಪಟ್ಟಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ತೆರೆದ ಸಂಪ್ನಲ್ಲಿ ಬಿದ್ದು ಅಸುನೀಗಿದರೆ, ಮತ್ತೊಂದೆಡೆ ಸಹೋದರರು ಕೆರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
2025-10-31
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸ್ಮರಿಸುವ ಕಾರ್ಯಕ್ರಮವನ್ನು ತುಮಕೂರು ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡುವುದರೊಂದಿಗೆ ದೇಶಕ್ಕೆ ಅಗೌರವ ತೋರಿರುವ ನಡವಳಿಕೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತದ್ದಾಗಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಕಿಡಿಕಾರಿದ್ದಾರೆ.
2025-10-31
Abhishek Sharma half-century: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 37 ಎಸೆತಗಳಲ್ಲಿ 68 ರನ್ಗಳ ಸ್ಫೋಟಕ ಅರ್ಧಶತಕ ಬಾರಿಸಿ ಭಾರತಕ್ಕೆ ಆಸರೆಯಾದರು. 49 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ, ಮೆಲ್ಬೋರ್ನ್ನಲ್ಲಿ ಏಕಾಂಗಿ ಹೋರಾಟ ನಡೆಸಿ ತಂಡವನ್ನು 100 ರನ್ ಗಡಿ ದಾಟಿಸಿದರು. ಇದು ಆಸ್ಟ್ರೇಲಿಯಾ ವಿರುದ್ಧ ಅವರ ಮೊದಲ ಅರ್ಧಶತಕವಾಗಿದೆ.
2025-10-31
ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿಯ ಸೆಪ್ಟೆಂಬರ್ನಲ್ಲಿ ಧಾರವಾಡ ಹಾಲು ಒಕ್ಕೂಟವು ಸರಾಸರಿ ಹಾಲು ಶೇಖರಣೆಯಲ್ಲಿ ಶೇ. 39ರಷ್ಟು ಹೆಚ್ಚಳ ಸಾಧಿಸಿದೆ.
2025-10-31
Indian Women's Cricket Team Makes History: ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾವನ್ನು ಸೆಮಿಫೈನಲ್ನಲ್ಲಿ ಸೋಲಿಸಿ, ಐತಿಹಾಸಿಕ ರನ್ ಚೇಸ್ ಮೂಲಕ ಏಕದಿನ ವಿಶ್ವಕಪ್ ಫೈನಲ್ಗೆ ಲಗ್ಗೆ ಇಟ್ಟಿದೆ. 339 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ, ಹಲವು ದಾಖಲೆಗಳನ್ನು ನಿರ್ಮಿಸಿದೆ. ಇದು ಮೂರನೇ ಬಾರಿಗೆ ಭಾರತ ಫೈನಲ್ ಪ್ರವೇಶಿಸಿದ್ದು, ನವೆಂಬರ್ 2 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.
2025-10-31
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy