Namma Metro Purple Line: ಚಲ್ಲಘಟ್ಟ ಟು ವೈಟ್ ಫೀಲ್ಡ್ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಗುರುವಾರ ಬೆಳಗ್ಗೆ ಸಂಚಾರ ವ್ಯತ್ಯಯವಾಗಿದ್ದು, ಪ್ರಯಾಣಿಕರು ಸುಮಾರು ಹೊತ್ತು ಕಾಯುವಂತಾಯಿತು. ಸುಮಾರು 1 ಗಂಟೆಗೂ ಹೆಚ್ಚು ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಇದರಿಂದಾಗಿ ವಿವಿಧ ಕೆಲಸ ಕಾರ್ಯಗಳಿಗೆ ಹೊರಟಿದ್ದವರು, ಕಚೇರಿಗಳಿಗೆ ಹೊರಟಿದ್ದವರು ತಡವಾಗಿ ಹೋಗುವಂತಾಗಿದೆ.
2025-10-30
ಉದ್ಯೋಗಕ್ಕೆ ಸೇರಿದ ಆರಂಭದಲ್ಲಿ ಕೆಲಸ, ಅಲ್ಲಿನ ವಾತಾವರಣ ಹಾಗೂ ಸಹೋದ್ಯೋಗಿಗಳೊಂದಿಗೆ ಹೊಂದಿಕೊಳ್ಳುವುದು ಕಷ್ಟ. ಈ ಸಂದರ್ಭ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವವಾಗುತ್ತದೆ. ಇಲ್ಲೊಬ್ಬ ವ್ಯಕ್ತಿಯೂ ಬೆಂಗಳೂರಿನ ಎಐ ಸ್ಟಾರ್ಟ್ಅಪ್ನಲ್ಲಿ ಇಂಟರ್ನ್ ಆಗಿ ಸೇರಿಕೊಂಡಿದ್ದು ಅತಿಯಾದ ಕೆಲಸದಿಂದ ನನ್ನ ಆರೋಗ್ಯವೇ ಕೈಕೊಟ್ಟಿತು ಎಂದು ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ. ಈ ಕುರಿತಾದ ಪೋಸ್ಟ್ ಇಲ್ಲಿದೆ ನೋಡಿ.
2025-10-30
ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರಿಶ್ ಅವರ ನಿಶ್ಚಿತಾರ್ಥದ ಯೋಜನೆಗಳಿಗೆ ಮೊಂತಾ ಚಂಡಮಾರುತ ಅಡ್ಡಿಯಾಗಿದೆ. ಹೊರಾಂಗಣದಲ್ಲಿ ಅದ್ದೂರಿಯಾಗಿ ನಡೆಯಬೇಕಿದ್ದ ಕಾರ್ಯಕ್ರಮ ಮಳೆಯ ಕಾರಣ ರದ್ದಾಗಿದೆ. ಹಾಗಂತ ನಿಶ್ಚಿತಾರ್ಥ ನಿಲ್ಲುತ್ತಿಲ್ಲ. ಈ ಕಾರ್ಯಕ್ರಮ ಒಳಾಂಗಣಕ್ಕೆ ಸ್ಥಳಾಂತರಗೊಂಡಿದೆ. ಹೈದರಾಬಾದ್ ಮೂಲದ ಉದ್ಯಮಿ ಪುತ್ರಿ ನಯನಿಕಾ ಜೊತೆ ಸಿರಿಶ್ ವಿವಾಹ ನಿಶ್ಚಯವಾಗಿದೆ.
2025-10-30
ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ 'ರಕ್ತ ಕಾಶ್ಮೀರ' ಸಿನಿಮಾ 18 ವರ್ಷಗಳ ನಂತರ ಬಿಡುಗಡೆಗೆ ಸಿದ್ಧವಾಗಿದೆ. ಉಪೇಂದ್ರ ಮತ್ತು ರಮ್ಯಾ ನಟಿಸಿರುವ ಈ ಚಿತ್ರ ಭಯೋತ್ಪಾದನೆ, ದೇಶಭಕ್ತಿಯನ್ನು ಕುರಿತಾಗಿದೆ. ಕಾಶ್ಮೀರದಲ್ಲಿ ಚಿತ್ರೀಕರಣಗೊಂಡ ಈ ಸಿನಿಮಾದಲ್ಲಿ 15 ನಾಯಕರು ಒಂದು ಹಾಡಿನಲ್ಲಿ ಬರುತ್ತಾರೆ ಅನ್ನೋದು ವಿಶೇಷ.
2025-10-30
ಬೆಂಗಳೂರಿನಲ್ಲಿ 63 ವರ್ಷದ ವೃದ್ಧರೊಬ್ಬರು ಆನ್ಲೈನ್ ಡೇಟಿಂಗ್ ವಂಚನೆಗೆ ಸಿಲುಕಿ 32.2 ಲಕ್ಷ ರೂ. ಕಳೆದುಕೊಂಡಿದ್ದಾರೆ. ಹೈ-ಪ್ರೊಫೈಲ್ ಮಹಿಳೆಯರನ್ನು ಪರಿಚಯಿಸುವುದಾಗಿ ಆಮಿಷವೊಡ್ಡಿದ್ದ ವಂಚಕರು ನೋಂದಣಿ ಶುಲ್ಕ, ಸೇವಾ ಶುಲ್ಕಗಳ ನೆಪದಲ್ಲಿ ಹಂತ ಹಂತವಾಗಿ ಹಣ ಪಡೆದಿದ್ದಾರೆ. ಕೊನೆಗೆ ವಂಚನೆಗೊಳಗಾಗಿದ್ದನ್ನು ಅರಿತ ವೃದ್ಧರು ದೂರು ದಾಖಲಿಸಿದ್ದಾರೆ.
2025-10-30
ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಲಿಂಗಸುಗೂರು ತಾಲೂಕಿನ ರೋಡಲಬಂಡಾ ಪಿಡಿಓ ಪ್ರವೀಣ್ ಕುಮಾರ್ ಅವರನ್ನು ಅಮಾನತುಗೊಳಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಕೆಎಸ್ಎಟಿ ತಡೆ ನೀಡಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಾನೂನು ಹೋರಾಟದಲ್ಲಿ ನೆರವಾಗಿದ್ದು, ಈ ಆದೇಶದಿಂದ ಸರ್ಕಾರದ ನಿರ್ಧಾರಕ್ಕೆ ತೀವ್ರ ಹಿನ್ನಡೆಯಾಗಿದೆ.
2025-10-30
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿ ಎರಡೂವರೆ ತಿಂಗಳು ಕಳೆದಿದೆ. ಈ ಅವಧಿಯಲ್ಲಿ ದರ್ಶನ್ ಬರೋಬ್ಬರಿ 13 ಕೆಜಿ ತೂಕ ಕಳೆದುಕೊಂಡಿದ್ದಾರೆ. ಅವರ ದಿನಚರಿ, ಜೈಲು ಪರಿಸ್ಥಿತಿ, ಸೆಲ್ನಲ್ಲಿ ಇರುವ ವ್ಯವಸ್ಥೆ, ಸಿಬ್ಬಂದಿಯ ಭದ್ರತಾ ನಿಯಮಗಳು ಹಾಗೂ ಓದುವ ಆಸಕ್ತಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
2025-10-30
ಪ್ರಧಾನಿ ನರೇಂದ್ರ ನರೇಂದ್ರ ಮೋದಿ ನವೆಂಬರ್ 28 ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ.
2025-10-30
ದಾವಣಗೆರೆಯ ಹನುಮಂತಾಪುರ ಗ್ರಾಮ ಪಂಚಾಯಿತಿಯಲ್ಲಿ ಸಾವಿರಾರು ಸರ್ಕಾರಿ ದಾಖಲೆಗಳು ಹಾಳಾಗುತ್ತಿವೆ ಎಂದು ಅಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.
2025-10-30
ಶಿವಮೊಗ್ಗದ ಹೊನ್ನಾಳಿ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
2025-10-30
ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಗ್ಗೆ ಹರಿದಾಡಿದ ಸುಳ್ಳು ಸುದ್ದಿಗೆ ಕೊನೆಗೂ ತೆರೆ ಬಿದ್ದಿದೆ. ಚಿತ್ರತಂಡದ ಅತೃಪ್ತಿ, ಬಿಡುಗಡೆ ವಿಳಂಬದ ವದಂತಿಗಳನ್ನು ನಿರ್ಮಾಪಕ ಕೆವಿಎನ್ ಪ್ರೊಡಕ್ಷನ್ಸ್ ಸ್ಪಷ್ಟಪಡಿಸಿದೆ. ತರುಣ್ ಆದರ್ಶ್ ಟ್ವೀಟ್ ಮೂಲಕ ಮಾರ್ಚ್ 19ರಂದು ಚಿತ್ರ ನಿಗದಿತ ದಿನಾಂಕದಂದೇ ಬರಲಿದೆ ಎಂದು ಖಚಿತಪಡಿಸಲಾಗಿದೆ.
2025-10-30
ಕೆಲಸ ಮಾಡುತ್ತಿದ್ದ ಮನೆ ಮಾಲೀಕರಿಗೆ ವಂಚಿಸಿದ ಕೇರ್ ಟೇಕರ್ ಯುವತಿಯನ್ನು ಬೆಂಗಳೂರಿನ ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.
2025-10-30
Dhruva Sarja movie: ಕನ್ನಡದ ಜನಪ್ರಿಯ ನಟ ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಧ್ರುವ ಸರ್ಜಾ ಮಾತ್ರವೇ ಅಲ್ಲದೆ ಅವರ ಮ್ಯಾನೇಜರ್, ಚಾಲಕ ಮತ್ತು ಅಭಿಮಾನಿಗಳ ವಿರುದ್ಧವೂ ದೂರು ದಾಖಲಿಸಲಾಗಿದೆ. ದೂರುರಾದ ವ್ಯಕ್ತಿ, ಧ್ರುವ ಸರ್ಜಾ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ಒತ್ತಾಯ ಮಾಡಿದ್ದಾರೆ. ಏನಿದು ಪ್ರಕರಣ.
2025-10-30
ಸರ್ಕಾರ ನಿಗದಿಪಡಿಸಿದ ಮಾನದಂಡಗಳ ಮೇಲೆ ಕಟ್ಟಡ ಕಟ್ಟುತ್ತಿದ್ದೇವೆ ಎಂದಿರುವ ಎಜೆಜೆ ಕನ್ಸ್ಟ್ರಕ್ಷನ್ಸ್ ಕಂಪನಿ ಗುತ್ತಿಗೆದಾರರು, ಕಳಪೆ ಕಾಮಗಾರಿ ಆರೋಪವನ್ನು ತಳ್ಳಿಹಾಕಿದ್ದಾರೆ.
2025-10-30
Bahubali re release: ‘ಬಾಹುಬಲಿ’ ಮತ್ತು ‘ಬಾಹುಬಲಿ 2’ ಸಿನಿಮಾಗಳನ್ನು ಒಂದೇ ಸಿನಿಮಾ ಆನ್ನಾಗಿ ಮಾಡಿ ‘ಬಾಹುಬಲಿ: ದಿ ಎಪಿಕ್’ ಹೆಸರಿನೊಟ್ಟಿಗೆ ಮರು ಬಿಡುಗಡೆ ಮಾಡಲಾಗುತ್ತಿದೆ. ಮೊದಲ ಬಾರಿ ಬಿಡುಗಡೆ ಆದಾಗ ದಾಖಲೆಗಳನ್ನು ಬರೆದಿದ್ದ ಈ ಸಿನಿಮಾ ಇದೀಗ ಮರು ಬಿಡುಗಡೆಯಲ್ಲೂ ಒಳ್ಳೆಯ ಕಲೆಕ್ಷನ್ ಮಾಡುವ ಮುನ್ಸೂಚನೆಯನ್ನು ನೀಡಿದೆ.
2025-10-30
ಮೆಟ್ರೋ ರೈಲು ಸೇವೆಯಲ್ಲಿ ಇಂದು ವ್ಯತ್ಯಯ ಉಂಟಾಗಿದ್ದರಿಂದ ಪ್ರಯಾಣಿಕರು ತೊಂದರೆ ಎದುರಿಸುವಂತಾಯಿತು.
2025-10-30
India vs South Africa Test series: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಗುವಾಹಟಿ ಟೆಸ್ಟ್ ಪಂದ್ಯದ ಸೆಷನ್ಗಳಲ್ಲಿ ಬಿಸಿಸಿಐ ಮಹತ್ವದ ಬದಲಾವಣೆ ತಂದಿದೆ. ನವೆಂಬರ್ 22 ರಂದು ನಡೆಯುವ ಈ ಎರಡನೇ ಟೆಸ್ಟ್ನಲ್ಲಿ, ಮೊದಲ ಸೆಷನ್ ನಂತರ ಊಟದ ಬದಲು ಚಹಾ ವಿರಾಮ ನೀಡಲಾಗುವುದು. ಗುವಾಹಟಿಯಲ್ಲಿ ಬೇಗ ಸೂರ್ಯಾಸ್ತವಾಗುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬದಲಾವಣೆ ರಣಜಿ ಟ್ರೋಫಿಯಲ್ಲೂ ಪ್ರಯೋಗಗೊಂಡಿತ್ತು.
2025-10-30
ಪ್ರೀತಿ ಎಂಬುದು ಎಲ್ಲ ವೈಕಲ್ಯಗಳನ್ನು ಮೀರಿದ ಅನುಬಂಧ ಎಂಬುದನ್ನು ತೋರಿಸಿದ್ದಾರೆ ಈ ಜೋಡಿ. ಸಾಮಾಜಿಕ ಜಾಲತಾಣದಿಂದ ಪರಿಚಯವಾದ ಈ ಜೋಡಿ ಬಳಿಕ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ.
2025-10-30
Women's World Cup Semi-final 2025: 2025ರ ಮಹಿಳಾ ವಿಶ್ವಕಪ್ನ ಮಹತ್ವದ ಸೆಮಿಫೈನಲ್ನಲ್ಲಿ ಭಾರತ, ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸುತ್ತಿದೆ. ಸತತ 15 ಪಂದ್ಯಗಳಲ್ಲಿ ಸೋಲರಿಯದ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲು ಭಾರತ ಅಸಾಧಾರಣ ಪ್ರದರ್ಶನ ನೀಡಬೇಕಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿದ್ದು, ಭಾರತ ತಂಡದಲ್ಲಿ ಮೂರು ಪ್ರಮುಖ ಬದಲಾವಣೆ ಮಾಡಲಾಗಿದೆ. ಫೈನಲ್ ಪ್ರವೇಶಿಸಲು ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
2025-10-30
ಬಿಹಾರದ ಜನರು ಪ್ರತಿ ಚುನಾವಣೆಯಲ್ಲೂ ಎನ್ಡಿಎಗೆ ತಮ್ಮ ಸಂಪೂರ್ಣ ಬೆಂಬಲ ನೀಡಿದ್ದು, ಈ ಬಾರಿ ಕೂಡಾ ಜನರು ನಮ್ಮನ್ನು ಆಶೀರ್ವದಿಸಲಿದ್ದಾರೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2025-10-30
India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಟಿ20 ಸರಣಿ ಶುರುವಾಗಿದೆ. ಈ ಸರಣಿಯ ಮೊದಲ ಮ್ಯಾಚ್ ಮಳೆಗೆ ಆಹುತಿಯಾಗಿದೆ. ಇದೀಗ ಉಭಯ ತಂಡಗಳು ದ್ವಿತೀಯ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಅತ್ತ ಮೊದಲ ಪಂದ್ಯ ರದ್ದಾದ ಕಾರಣ ಈ ಸರಣಿಯನ್ನು ಗೆಲ್ಲಲು 3 ಮ್ಯಾಚ್ಗಳಲ್ಲಿ ಜಯ ಸಾಧಿಸಲೇಬೇಕು.
2025-10-30
ಬಿಸಿಲಿನಿಂದ ದೇಹಕ್ಕೆ ಡಿ ವಿಟಮಿನ್ ಸಿಗುತ್ತದೆ. ಇದು ಮೂಳೆಗಳು ಗಟ್ಟಿಯಾಗಲು, ಚರ್ಮದ ಆರೋಗ್ಯಕ್ಕೆ ಅತ್ಯಗತ್ಯ. ಆದರೆ, ದೀರ್ಘಕಾಲ ಬಿಸಿಲಲ್ಲಿದ್ದರೆ ಏನಾಗುತ್ತದೆ ಎಂಬುದನ್ನು ಅಧ್ಯಯನ ತಿಳಿಸಿದೆ.
2025-10-30
ಬ್ರಿಟನ್ ರಾಜ ಚಾರ್ಲ್ಸ್ III ಮತ್ತು ರಾಣಿ ಕ್ಯಾಮಿಲ್ಲಾ ಯುರೋಪಿನ ಮೊದಲ ಹಿಂದೂ ಕಲ್ಲಿನ ದೇವಾಲಯವಾದ ನೀಸ್ಡೆನ್ BAPS ಶ್ರೀ ಸ್ವಾಮಿನಾರಾಯಣ ಮಂದಿರದ 30ನೇ ವಾರ್ಷಿಕೋತ್ಸವದ ಪ್ರಯುಕ್ತ ಭೇಟಿ ನೀಡಿದ್ದಾರೆ. ಈ ಐತಿಹಾಸಿಕ ಭೇಟಿಯು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇದನ್ನು ಪ್ರಶಂಸಿಸಿದರೆ, ಇನ್ನು ಕೆಲವರು ಬ್ರಿಟಿಷ್ ರಾಜಮನೆತನದ ಸದಸ್ಯರು ಚರ್ಚ್ಗಳಿಗೆ ಮಾತ್ರ ಭೇಟಿ ನೀಡಬೇಕೆಂದು ಟೀಕಿಸಿದ್ದಾರೆ.
2025-10-30
ಬಿಸಿಲಿನಿಂದ ದೇಹಕ್ಕೆ ಡಿ ವಿಟಮಿನ್ ಸಿಗುತ್ತದೆ. ಇದು ಮೂಳೆಗಳು ಗಟ್ಟಿಯಾಗಲು, ಚರ್ಮದ ಆರೋಗ್ಯಕ್ಕೆ ಅತ್ಯಗತ್ಯ. ಆದರೆ, ದೀರ್ಘಕಾಲ ಬಿಸಿಲಲ್ಲಿದ್ದರೆ ಏನಾಗುತ್ತದೆ ಎಂಬುದನ್ನು ಅಧ್ಯಯನ ತಿಳಿಸಿದೆ.
2025-10-30
US tariffs on China to be reduced to 47pc from 57pc: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ಮೇಲಿನ ಆಮದು ಸುಂಕವನ್ನು ಶೇ. 10ರಷ್ಟು ಕಡಿಮೆಗೊಳಿಸಲಿದ್ದೇವೆ ಎಂದಿದ್ದಾರೆ. ಸೌತ್ ಕೊರಿಯಾದ ಬುಸಾನ್ನಲ್ಲಿ ನಡೆಯಲಿರುವ ಎಪಿಇಸಿ ಸಮಿಟ್ ಕಾರ್ಯಕ್ರಮಕ್ಕೆ ಮುನ್ನ ಮಾಧ್ಯಮಗಳೊಂದಿಗೆ ಟ್ರಂಪ್ ಮಾತನಾಡುತ್ತಿದ್ದರು. ಚೀನಾದ ಫೆಂಟಾನಿಲ್ ಸಂಬಂಧಿತ ಸರಕುಗಳ ಮೇಲಿನ ಸುಂಕವನ್ನು ಶೇ. 20ರಿಂದ ಶೇ. 10ಕ್ಕೆ ಇಳಿಸಲಾಗುವುದು ಎಂದಿದ್ದಾರೆ.
2025-10-30
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy