ಗುರುಮಠಕಲ್ನಲ್ಲಿ ನಾಳೆ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ದ ಪಥಸಂಚಲನಕ್ಕೆ ಯಾದಗಿರಿ ಜಿಲ್ಲಾಡಳಿತ ಅನುಮತಿ ಕೊಟ್ಟಿದೆ.
2025-10-30
ಚಿಕ್ಕಮಗಳೂರು ಮಾಗಡಿ ಬಳಿಯ ಕೆರೆಯೊಂದರಲ್ಲಿ ಬಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣದ ಚೀಲವನ್ನು ಈಶ್ವರ್ ಮಲ್ಪೆ ಟೀಂ ಮೇಲಕ್ಕೆತ್ತಿ ತಂದಿದ್ದಾರೆ.
2025-10-30
Sovereign Gold Bond of 2017 grows from Rs 2,971 to Rs 11,922 in 8 years: 2017-18ರ ಐದನೇ ಸೀರೀಸ್ನ ಸಾವರೀನ್ ಗೋಲ್ಡ್ ಬಾಂಡ್ಗಳು ಇದೀಗ ಮೆಚ್ಯೂರಿಟಿಗೆ ಬಂದು, ಅಂತಿಮ ರಿಡೆಂಪ್ಷನ್ ದರವನ್ನು ಪ್ರಕಟಿಸಲಾಗಿದೆ. 2017ರ ಅಕ್ಟೋಬರ್ 30ರಂದು ಎಸ್ಜಿಬಿಗಳನ್ನು ವಿತರಿಸಿದಾಗ ಗ್ರಾಮ್ ಚಿನ್ನಕ್ಕೆ 2,971 ರೂ ಇಷ್ಯೂ ಪ್ರೈಸ್ ನಿಗದಿ ಮಾಡಲಾಗಿತ್ತು. ಈಗ ಮೆಚ್ಯೂರಿಟಿಗೆ ಬಂದಿದ್ದು, ಫೈನಲ್ ರಿಡೆಂಪ್ಷನ್ ಪ್ರೈಸ್ 11,922 ರೂ ಇದೆ. 8 ವರ್ಷದಲ್ಲಿ ಶೇ. 310ರಷ್ಟು ಹೆಚ್ಚಿದೆ.
2025-10-30
ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಜಿಲ್ಲಾಡಳಿತವು ಅನುಮತಿ ನಿರಾಕರಿಸಿರುವ ಪ್ರಕರಣ ಸಂಬಂಧ ಮತ್ತೊಂದು ಶಾಂತಿ ಸಭೆ ನಡೆಸುವಂತೆ ಹೈಕೋರ್ಟ್ ಸೂಚನೆ ಕೊಟ್ಟಿದೆ.
2025-10-30
CEA V Ananta Nageswaran positive on India's growth: ಭಾರತದ ಜಿಡಿಪಿ 2025-26ರಲ್ಲಿ ಶೇ. 7ರ ಆಸುಪಾಸಿನಲ್ಲಿ ಬೆಳೆಯಬಹುದು ಎಂದು ಮುಖ್ಯ ಆರ್ಥಿಕ ಸಲಹೆಗಾರರು ಅಭಿಪ್ರಾಯಪಟ್ಟಿದ್ದಾರೆ. ಟ್ಯಾರಿಫ್ ಸೇರಿದಂತೆ ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಆರ್ಥಿಕತೆ ಉತ್ತಮವಾಗಿ ಸ್ಪಂದಿಸುತ್ತಿದೆ ಎಂದಿದ್ದಾರೆ ವಿ ಅನಂತನಾಗೇಶ್ವರನ್. ಜಾಗತಿಕ ರೇಟಿಂಗ್ ಏಜೆನ್ಸಿಗಳಿಂದ ಭಾರತಕ್ಕೆ ಶೀಘ್ರದಲ್ಲೇ ಎ ರೇಟಿಂಗ್ ಸಿಗಬಹುದು ಎಂದೂ ಅವರು ನಿರೀಕ್ಷಿಸಿದ್ದಾರೆ.
2025-10-30
ಕರ್ನಾಟಕ ಕಂದಾಯ ಇಲಾಖೆಯು ಹಣಕಾಸು ಮತ್ತು ಲೆಕ್ಕಪರಿಶೋಧನಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರಿನಲ್ಲಿ ಮೂರು ಖಾಲಿ ಹುದ್ದೆಗಳಿದ್ದು, ಮಾಸಿಕ 45,000-55,000 ರೂ. ಸಂಬಳ ದೊರೆಯಲಿದೆ. ಆಸಕ್ತರು ನವೆಂಬರ್ 9ರ ಮೊದಲು ಅಧಿಕೃತ ಅಧಿಸೂಚನೆ ಓದಿ, ಅರ್ಜಿ ನಮೂನೆ ಭರ್ತಿ ಮಾಡಿ, ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸಬೇಕು
2025-10-30
ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ಬಂದಿದೆ. ಕೇಂದ್ರ ಬಸ್ ನಿಲ್ದಾಣದಿಂದ ಚಿಗರಿ ಬಸ್ ಸೇವೆ ವಿಸ್ತರಿಸಲು ವಾಯುವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಮುಂದಾಗಿದ್ದಾರೆ.
2025-10-30
Phoebe Litchfield century: 2025 ರ ಮಹಿಳಾ ವಿಶ್ವಕಪ್ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾದ ಫೋಬೆ ಲಿಚ್ಫೀಲ್ಡ್ ಭಾರತದ ವಿರುದ್ಧ ಸ್ಫೋಟಕ ಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕೇವಲ 77 ಎಸೆತಗಳಲ್ಲಿ ಶತಕ ಪೂರೈಸಿದ ಅವರು ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ವೇಗದ ಶತಕ ಬಾರಿಸಿದ ಅತಿ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಅದ್ಭುತ ಪ್ರದರ್ಶನ ಆಸ್ಟ್ರೇಲಿಯಾಕ್ಕೆ ಬಲ ತುಂಬಿದೆ
2025-10-30
ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನೂತನ ಕೋಚ್ ಆಗಿ ಅಭಿಷೇಕ್ ನಾಯರ್ ನೇಮಕಗೊಂಡಿದ್ದಾರೆ.
2025-10-30
ಮಂಡ್ಯ ಜಿಲ್ಲಾ ಪಂಚಾಯತ್ ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಬಿಸಿಎ, ಬಿಇ, ಎಂಸಿಎ ಪದವೀಧರರು, 21 ರಿಂದ 40 ವಯಸ್ಸಿನೊಳಗಿನವರು ನವೆಂಬರ್ 10ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ 30,000 ರೂ. ಸಂಬಳ ಸಿಗಲಿದೆ. ಆಸಕ್ತರು ಶೀಘ್ರವಾಗಿ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಬಳಸಿಕೊಳ್ಳಿ.
2025-10-30
ನವಜಾತ ಶಿಶುವಿನಿಂದ ಆರು ತಿಂಗಳ ಮಕ್ಕಳವರೆಗೆ ಶಿಫಾರಸು ಮಾಡಲಾಗುವ ಈ ಹಾಲಿನ ಪುಡಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ವೇಳೆ ಇದು ಅಸುರಕ್ಷಿತ ಎಂದು ಕಂಡು ಬಂದಿದೆ.
2025-10-30
Karnataka Weather Tomorrow: ವರುಣನ ಅಬ್ಬರ ರಾಜ್ಯದಲ್ಲಿ ಕಡಿಮೆಯಾಗಲಿದ್ದು, ಕರಾವಳಿ ಭಾಗದ ಕೆಲವೆಡೆ ಮಾತ್ರ ನಾಳೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ರಾಜಧಾನಿ ಬೆಂಗಳೂರಲ್ಲಿ ಮೋಡಕವಿದ ವಾತಾವರಣದ ಸಾಧ್ಯತೆ ಇದ್ದರೆ, ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ ತೀರಾ ಕಡಿಮೆ ಇದೆ. ಉತ್ತರ ಒಳನಾಡು ಭಾಗದಲ್ಲಿ ಸಂಪೂರ್ಣ ಒಣ ಹವೆ ಇರಲಿದೆ.
2025-10-30
ದುಬಾರಿ ಮೊಬೈಲ್ಗಳನ್ನು ಕದಿಯುತ್ತಿದ್ದ ಆರೋಪಿಗಳಿಬ್ಬರು ಬಳಿಕ ಅವುಗಳನ್ನು ಯುವತಿಯೊಬ್ಬಳ ಮೂಲಕ ಮಾರಾಟ ಮಾಡಿಸುತ್ತಿದ್ದರು.
2025-10-29
"Chandigarh vs Maharashtra: ಮೊದಲ ಇನಿಂಗ್ಸ್ನಲ್ಲಿನ 104 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 464 ರನ್ಗಳ ಗುರಿ ಪಡೆದ ಚಂಡೀಗಢ್ ತಂಡವನ್ನು 359 ರನ್ಗಳಿಗೆ ಆಲೌಟ್ ಮಾಡುವಲ್ಲಿ ಮಹಾರಾಷ್ಟ್ರ ತಂಡ ಯಶಸ್ವಿಯಾಗಿದೆ. ಈ ಮೂಲಕ 144 ರನ್ಗಳ ಭರ್ಜರಿ ಜಯ ಸಾಧಿಸಿದೆ."
2025-10-29
India vs Australia 1st T20I Live Streaming: ಭಾರತದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ 2-1 ಅಂತರದಿಂದ ಗೆದ್ದುಕೊಂಢಿದೆ. ಇದೀಗ ಉಭಯ ತಂಡಗಳು ಟಿ20 ಸರಣಿಗಾಗಿ ಸಜ್ಜಾಗಿದೆ. ಈ ಸರಣಿಯ ಮೊದಲ ಮ್ಯಾಚ್ ಇಂದು (ಅ.29) ನಡೆಯಲಿದ್ದು, ಈ ಪಂದ್ಯದ ಮೂಲಕ ಶುಭಾರಂಭ ಮಾಡುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.
2025-10-29
Shreyas Iyer Injury Update: ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಹರ್ಷಿತ್ ರಾಣಾ ಅವರ ಎಸೆತದಲ್ಲಿ ಅಲೆಕ್ಸ್ ಕ್ಯಾರಿ ಭರ್ಜರಿ ಹೊಡೆತ ಬಾರಿಸಿದ್ದರು. ಈ ವೇಳೆ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ನಿಂತಿದ್ದ ಅಯ್ಯರ್ ವೇಗವಾಗಿ ಓಡಿ ಹೋಗಿ ಡೈವಿಂಗ್ ಕ್ಯಾಚ್ ಹಿಡಿದಿದ್ದರು. ಈ ಡೈವಿಂಗ್ ವೇಳೆ ಅವರ ಎಡ ಪಕ್ಕೆಲುಬುಗಳಿಗೆ ಗಂಭೀರ ಗಾಯವಾಗಿತ್ತು.
2025-10-29
ICC Womens World Cup 2025 Semi Finals: ಭಾರತೀಯ ಕ್ರಿಕೆಟ್ ಮಂಡಳಿ ಆಯೋಜಿಸಿದ ಈ ಬಾರಿಯ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿದಿದ್ದವು. ಆ ತಂಡಗಳೆಂದರೆ... ಭಾರತ, ಪಾಕಿಸ್ತಾನ್, ಬಾಂಗ್ಲಾದೇಶ್, ಶ್ರೀಲಂಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ, ನ್ಯೂಝಿಲೆಂಡ್.
2025-10-29
Pakistan vs South Africa, 1st T20I: ಪಾಕಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ನಲ್ಲಿ ಭರ್ಜರಿ ಜಯ ಸಾಧಿಸಿ ಸೌತ್ ಆಫ್ರಿಕಾ ತಂಡ ಶುಭಾರಂಭ ಮಾಡಿದೆ. ಈ ಗೆಲುವಿನೊಂದಿಗೆ ರಾವಲ್ಪಿಂಡಿಯಲ್ಲಿ ಆಫ್ರಿಕಾ ಪಡೆ ಹೊಸ ಇತಿಹಾಸವನ್ನು ಸಹ ನಿರ್ಮಿಸಿರುವುದು ವಿಶೇಷ.
2025-10-29
India vs Australia T20 Series: ಇಂಡೊ-ಆಸೀಸ್ ನಡುವಣ ಟಿ20 ಸರಣಿಯು ಅಕ್ಟೋಬರ್ 29 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಒಟ್ಟು ಐದು ಪಂದ್ಯಗಳನ್ನಾಡಲಾಗುತ್ತದೆ. ಮೊದಲ ಮ್ಯಾಚ್ ಕ್ಯಾನ್ಬೆರಾದಲ್ಲಿ ನಡೆದರೆ, ದ್ವಿತೀಯ ಪಂದ್ಯವು ಮೆಲ್ಬೋರ್ನ್ನಲ್ಲಿ ಜರುಗಲಿದೆ. ಇನ್ನು ಮೂರನೇ ಪಂದ್ಯ ಹೋಬಾರ್ಟ್ನಲ್ಲಿ ಆಡಲಾಗುತ್ತದೆ. ಹಾಗೆಯೇ ಕೊನೆಯ ಎರಡು ಪಂದ್ಯಗಳಿಗೆ ಕ್ಯಾರರಾ ಹಾಗೂ ಬ್ರಿಸ್ಬೇನ್ ಆತಿಥ್ಯವಹಿಸಲಿದೆ.
2025-10-29
ನವೆಂಬರ್ 1ರಿಂದ ಬಿ-ಖಾತಾ ಆಸ್ತಿ ದಾಖಲೆಗಳ ಎ-ಖಾತಾ ಪರಿವರ್ತನೆಗೆ ಇ- ಖಾತಾ ಹೊಂದಿರುವುದು ಅಗತ್ಯ ಎಂದು ಗ್ರೇಟರ್ ಬೆಂಗಳೂರು ಸುಮಾರು 7.5 ಲಕ್ಷ ಬಿ-ಖಾತಾ ಆಸ್ತಿಗಳಲ್ಲಿ 2.6 ಲಕ್ಷ ಮಾತ್ರ ಈಗಾಗಲೇ ಇ-ಖಾತಾಗೆ ಪರಿವರ್ತನೆಗೊಂಡಿದ್ದು, ಈ ಕ್ರಮವು ಪಾರದರ್ಶಕತೆ ಮತ್ತು ಆಸ್ತಿ ತೆರಿಗೆ ವಸೂಲಾತಿ ಸುಧಾರಣೆಗೆ ಸಹಾಯಕವಾಗಲಿದೆ.
2025-10-29
ಬೆಂಗಳೂರಿನಲ್ಲಿ ಮೂಲಸೌಕರ್ಯ ಸರಿ ಇಲ್ಲ, ರಸ್ತೆ ಗುಂಡಿಗಳಿಂದಾಗಿ ಹೂಡಿಕೆದಾರರು ಬೇರೆ ರಾಜ್ಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಟೀಕೆಗಳ ಸಂದರ್ಭದಲ್ಲೇ, ಮರ್ಸಿಡಿಸ್ ಬೆಂಜ್ ಸಿಇಒ ಓಲಾ ಕ್ಯಾಲೆನಿಯಸ್ ಕರ್ನಾಟಕ ರಾಜಧಾನಿಯ ಬಗ್ಗೆ ಮೆಚ್ಚಗೆ ವ್ಯಕ್ತಪಡಿಸಿರುವ ವಿಡಿಯೋ ಮುನ್ನೆಲೆಗೆ ಬಂದಿದೆ. ಇದೇ ವಿಡಿಯೋ ಮುಂದಿಟ್ಟುಕೊಂಡು ಡಿಸಿಎಂ ಡಿಕೆ ಶಿವಕುಮಾರ್ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
2025-10-29
ಹೈಕಮಾಂಡ್ ತೀರ್ಮಾನ ಮಾಡಿದರೆ ಐದು ವರ್ಷ ಸಿಎಂ ಆಗಿರುತ್ತೇನೆ ಎನ್ನುವ ಮೂಲಕ ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಮೆತ್ತಗಾದರೇ ಅಥವಾ ಎಚ್ಚರಿಕೆಯ ಹೆಜ್ಜೆ ಇಟ್ಟರೇ ಎಂಬುದು ರಹಸ್ಯವಾಗಿದೆ. ಆದರೆ, ಸಿದ್ದರಾಮಯ್ಯ ಪಡೆ ಅವರೇ ಐದು ವರ್ಷ ಸಿಎಂ ಆಗಿರಬೇಕು. ಸಿದ್ದರಾಮಯ್ಯ ಅನಿವಾರ್ಯ ಎನ್ನುತ್ತಿದೆ. ಜತೆಗೆ, ಅಧಿಕಾರ ಹಂಚಿಕೆ ವಿಚಾರ ಮುನ್ನೆಲೆಗೆ ಬಂದರೆ 2 ಅಸ್ತ್ರ ಪ್ರಯೋಗಕ್ಕೆ ತಂತ್ರ ಹೂಡಿದೆ.
2025-10-29
ಬೆಂಗಳೂರಿನ 56 ವರ್ಷದ ಉದ್ಯಮಿಯೊಬ್ಬರು ನಕಲಿ ಅಧಿಕಾರಿಗಳಿಂದ 1.32 ಕೋಟಿ ರೂ. ವಂಚನೆಗೆ ಒಳಗಾಗಿದ್ದಾರೆ. ಮನಿ ಲಾಂಡರಿಂಗ್ ಮತ್ತು ಅಶ್ಲೀಲ ವಿಡಿಯೋಗಳ ಆರೋಪದಡಿ ತನಿಖೆ ನೆಪದಲ್ಲಿ ಕರೆ ಮಾಡಿದ್ದ ನಕಲಿ ಅಧಿಕಾರಿಗಳು, ಹಣ ವರ್ಗಾಯಿಸಿಕೊಂಡು ಬಳಿಕ ಸಂಪರ್ಕ ಕಡಿತಗೊಳಿಸಿದ್ದಾರೆ. ವಂಚನೆಗೆ ಒಳಗಾದ ಉದ್ಯಮಿ ನೀಡಿರುವ ದೂರಿನ ಅನ್ವಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
2025-10-29
Karnataka Weather: ಮೊಂತಾ ಚಂಡಮಾರುತದ ಹಿನ್ನಲೆ ರಾಜ್ಯದಲ್ಲಿಂದು ವರುಣನ ಆರ್ಭಟ ಹೆಚ್ಚಿರಲಿದ್ದು, 12 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರದಲ್ಲಿ ಮಳೆಯಾಗುವ ನಿರೀಕ್ಷೆ ಕಡಿಮೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ನೆರೆಯ ರಾಜ್ಯದಲ್ಲಿ ವರುಣಾರ್ಭಟ ಮುಂದುವರೆದಿದ್ದು, ಭಾರಿ ಗಾಳಿಯೊಂದಿಗೆ ಮೊಂಟಾ ಚಂಡಮಾರುತ ಅಪ್ಪಳಿಸುತ್ತಿದೆ.
2025-10-29
ಬೆಂಗಳೂರು ಪವರ್ ಕಟ್: ಬೆಂಗಳೂರಿನಲ್ಲಿ ಬೆಸ್ಕಾಂನಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಅಕ್ಟೋಬರ್ 29 ಮತ್ತು 30 ರಂದು 100 ಕ್ಕೂ ಅಧಿಕ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಕೆಪಿಟಿಸಿಎಲ್ ವತಿಯಿಂದ ನಡೆಯುತ್ತಿರುವ ಈ ಕಾಮಗಾರಿಯಿಂದಾಗಿ 5 ಗಂಟೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಲಿದೆ.
2025-10-29
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy