ಕರ್ನಾಟಕ ಸರ್ಕಾರಕ್ಕೆ ಮೇಕೆದಾಟು ಯೋಜನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ದೊಡ್ಡ ಗೆಲುವು ಸಿಕ್ಕಿದೆ. ಯೋಜನೆಗೆ 7 ವರ್ಷಗಳಿಂದ ಅಡ್ಡಗಾಲು ಹಾಕುತ್ತಾ ಬರುತ್ತಿದ್ದ ತಮಿಳುನಾಡಿಗೆ ಮುಖಭಂಗವಾಗಿದೆ. ಯೋಜನೆ ವಿರೋಧಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ. ಇದರೊಂದಿಗೆ, ಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕಕ್ಕೆ ಮೊದಲ ಜಯ ಸಿಕ್ಕಂತಾಗಿದೆ.
2025-11-13
ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಜುಲೈನಲ್ಲಿ ಪ್ರಾರಂಭವಾಗಿ ಕೇವಲ ನಾಲ್ಕು ತಿಂಗಳಿನಲ್ಲಿ ಶೂಟಿಂಗ್ ಪೂರ್ಣಗೊಳಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರ ಡಿಸೆಂಬರ್ 25ಕ್ಕೆ ಬಿಡುಗಡೆಯಾಗಲಿದೆ. ಟೀಸರ್ನಲ್ಲಿ ಸುದೀಪ್ ಆಕ್ಷನ್ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಸುದೀಪ್ ಇಷ್ಟು ವೇಗವಾಗಿ ಪೂರ್ಣಗೊಳಿಸಿದ ಮೊದಲ ಸಿನಿಮಾ.
2025-11-13
Vijay Deverakonda-Rashmika Mandanna: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪರಸ್ಪರ ವಿವಾಹವಾಗಲಿರುವುದು ಗುಟ್ಟಾಗಿ ಉಳಿದಿಲ್ಲ. ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್ಫ್ರೆಂಡ್’ ಸಿನಿಮಾ ಹಿಟ್ ಆಗಿದ್ದು, ಸಿನಿಮಾದ ಸಕ್ಸಸ್ಮೀಟ್ಗೆ ವಿಜಯ್ ದೇವರಕೊಂಡ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ತಮ್ಮ ಭಾವಿ ಪತ್ನಿ ರಶ್ಮಿಕಾ ಮಂದಣ್ಣ ಬಗ್ಗೆ ವಿಜಯ್ ಹೆಮ್ಮೆಯಿಂದ ಮಾತನಾಡಿದರು. ವಿಜಯ್ ಹೇಳಿದ್ದೇನು? ಇಲ್ಲಿದೆ ಮಾಹಿತಿ...
2025-11-13
ಬಿಗ್ ಬಾಸ್ ಮನೆಯಲ್ಲಿ ಜಾನ್ವಿ ಅವರು ವೋಟಿಂಗ್ ಪ್ರಕ್ರಿಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಚಾನೆಲ್ ಮಧ್ಯಸ್ಥಿಕೆ, ಸ್ಪಂದನಾ ಸೇವ್ ಆಗಿರುವುದರ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಸೂರಜ್ ತಿರುಗೇಟು ನೀಡಿದ್ದು, ಲವ್ ಟ್ರ್ಯಾಕ್ ಆರೋಪವನ್ನು ಅಲ್ಲಗಳೆದಿದ್ದಾರೆ. ವೀಕೆಂಡ್ನಲ್ಲಿ ಈ ವಿಷಯ ಪ್ರಸ್ತಾಪವಾದರೆ ಜಾನ್ವಿಗೆ ಸಮಸ್ಯೆ ಆಗುವ ಎಚ್ಚರಿಕೆ ನೀಡಿದ್ದಾರೆ.
2025-11-13
ದರೋಡೆಕೋರರು ಲಾರಿಯಲ್ಲಿದ್ದ 20 ಲಕ್ಷ ರೂ. ಮೌಲ್ಯದ ಪಾನ್ ಮಸಾಲ ಮತ್ತು ಗುಟ್ಕಾ ಉತ್ಪನ್ನಗಳನ್ನು ಹಾಗೂ ಲಾರಿ ಚಾಲಕರ ಬಳಿ ಇದ್ದ 42,000 ರೂ. ನಗದನ್ನು ಕದ್ದೊಯ್ದಿದ್ದಾರೆ.
2025-11-13
ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಪಾತ್ರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ 'ಮಾ ವಂದೇ' ಬಯೋಪಿಕ್ನಲ್ಲಿ ನಟಿಸುತ್ತಿದ್ದಾರೆ. 'ಕೆಜಿಎಫ್ 2' ನಂತರ ರವೀನಾ ಅವರಿಗೆ ಈ ಪ್ರಮುಖ ಪಾತ್ರ ಸಿಕ್ಕಿದೆ. ಚಿತ್ರವು ತಾಯಿ-ಮಗನ ಬಾಂಧವ್ಯ, ಹೀರಾಬೆನ್ ಅವರ ತ್ಯಾಗಗಳನ್ನು ಎತ್ತಿ ತೋರಿಸುತ್ತದೆ. ಸೆಪ್ಟೆಂಬರ್ 17ರಂದು ಘೋಷಣೆಯಾದ ಈ ಚಿತ್ರದಲ್ಲಿ ಉನ್ನಿ ಮುಕುಂದನ್ ಮೋದಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
2025-11-13
ಮೇಕೆದಾಟು ಯೋಜನೆಯ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದು ನಮಗೆ ಸಿಕ್ಕ ನ್ಯಾಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
2025-11-13
SS Rajamouli video: ಎಸ್ಎಸ್ ರಾಜಮೌಳಿ ನಿರ್ದೇಶನ ಮಾಡುತ್ತಿರುವ ಮಹೇಶ್ ಬಾಬು ನಟನೆಯ ಹೊಸ ಸಿನಿಮಾ ವಿಶ್ವಮಟ್ಟದಲ್ಲಿ ಕುತೂಹಲ ಕೆರಳಿಸಿದೆ. ವಿಶ್ವ ಸಿನಿಮಾ ಪ್ರೇಮಿಗಳು ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ. ಇದೀಗ ಸಿನಿಮಾದ ಟೈಟಲ್ ಹಾಗೂ ಟೀಸರ್ ಬಿಡುಗಡೆ ಇವೆಂಟ್ ಅನ್ನು ರಾಜಮೌಳಿ ಅದ್ಧೂರಿಯಾಗಿ ಆಯೋಜಿಸಿದ್ದು, ನವೆಂಬರ್ 15 ರಂದು ಇವೆಂಟ್ ನಡೆಯಲಿದೆ. ಆದರೆ ಅದಕ್ಕೆ ಮುಂಚೆ ರಾಜಮೌಳಿ ಅವರಿಗೆ ಭಯವೊಂದು ಕಾಡುತ್ತಿದೆ. ಇದೇ ಕಾರಣಕ್ಕೆ ಅವರು ಅಭಿಮಾನಿಗಳಲ್ಲಿ ಮನವಿ ಸಹ ಮಾಡಿದ್ದಾರೆ.
2025-11-13
ಡಿಜಿಟಲ್ ಅರೆಸ್ಟ್ ಮೂಲಕ ಕೇರಳದ ವ್ಯಕ್ತಿಗೆ 20 ಲಕ್ಷ ರೂ ವಂಚಿಸಿದ ಆರೋಪದ ಮೇಲೆ ಮೈಸೂರಿನ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
2025-11-13
Chittapur RSS Route March on November 16: ರಾಜ್ಯಾದ್ಯಂತ ಭಾರಿ ಕುತೂಹಲ ಮೂಡಿಸಿದ್ದ ಚಿತ್ತಾಪುರ ಆರ್ಎಸ್ಎಸ್ ಪಥಸಂಚನ ವಿಚಾರವಾಗಿ ಮಹತ್ವದ ನಿರ್ಧಾರ ಹೊರಬಿದ್ದಿದೆ. RSS ಪಥಸಂಚಲನಕ್ಕೆ ಕಬುರಗಿ ಜಿಲ್ಲಾಡಳಿತ ಅನುಮತಿ ನೀಡಿದ್ದು, ಒಟ್ಟು 325 ಜನರು ಮಾತ್ರ ಭಾಗಿಯಾಗಲು ಅವಕಾಶ ನೀಡಿರೋದಾಗಿ ತಿಳಿಸಿದೆ.
2025-11-13
ನಿರ್ವಾಹಕರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಬಸ್ ಅನ್ನು ಕನ್ನಡಮಯವಾಗಿಸಿದ್ದಾರೆ. ಪ್ರಯಾಣದ ವೇಳೆ ಕನ್ನಡದ ಬಗ್ಗೆ ರಸ ಪ್ರಶ್ನೆ ಏರ್ಪಡಿಸಿ, ಪುಸ್ತಕಗಳನ್ನು ಕೊಡುತ್ತಾ ಕನ್ನಡ ಸೇವೆ ಮಾಡುತ್ತಿದ್ದಾರೆ.
2025-11-13
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕೊರತೆಯಿಂದ ತುರ್ತು ಚಿಕಿತ್ಸೆಗೆ ಜನ ದೂರದ ಜಿಲ್ಲೆಗಳಿಗೆ ಅಲೆಯಬೇಕಿದೆ. ಅದೆಷ್ಟೋ ಜೀವಗಳು ದಾರಿ ಮಧ್ಯೆಯೇ ಅಸುನೀಗಿವೆ. ಹೀಗಾಗಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಜಿಲ್ಲೆಯ ಯುವಕರು ಮುಂದಾಗಿದ್ದು'ಆಸ್ಪತ್ರೆ ನೀಡಿ ಇಲ್ಲವೇ ದಯಾಮರಣ ಕರುಣಿಸಿ' ಎಂದು ಸಿಎಂಗೆ ರಕ್ತದಲ್ಲಿ ಪತ್ರ ಬರೆಯುವ ಅಭಿಯಾನ ಆರಂಭಿಸಿದ್ದಾರೆ.
2025-11-13
ರಾಜ್ಯದ ನಾಲ್ಕು ರೈಲು ನಿಲ್ದಾಣಗಳಿಗೆ ಸಂತರ ಹೆಸರಿಡುವಂತೆ ಸಚಿವ ಎಂ.ಬಿ.ಪಾಟೀಲ್ ಅವರು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ.
2025-11-13
ಕೊಪ್ಪಳದ ಬಲ್ಡೋಟಾ ಸ್ಟೀಲ್ ಕಾರ್ಖಾನೆ ಸ್ಥಾಪನೆಗೆ ಗವಿ ಮಠದ ಶ್ರೀಗಳು ಸೇರಿ ಹಲವರಿಂದ ತೀವ್ರ ವಿರೋಧದ ನಡುವೆಯೂ ಭೂಮಿ ನೀಡಿದವರು ಉದ್ಯೋಗಕ್ಕಾಗಿ ಕಾರ್ಖಾನೆ ಪರ ಪ್ರತಿಭಟನೆ ನಡೆಸಿದ್ದಾರೆ. ಕಾರ್ಖಾನೆ ಸ್ಥಾಪಿಸಿ ಅಥವಾ ಸರ್ಕಾರಿ ಉದ್ಯೋಗ ನೀಡಬೇಕೆಂದು ಪ್ರತಿಭಟನಾಕಾರು ಆಗ್ರಹಿಸಿದ್ದಾರೆ. ಕಾರ್ಖಾನೆ ಪರವಾಗಿ ನಡೆದ ಈ ಹೋರಾಟ ಭಾರಿ ಚರ್ಚೆಗೆ ಗ್ರಾಸವಾಗಿದೆ.
2025-11-13
ಸಬಲಾ ಇಂಡಿಯನ್ ಪಿಕಲ್ಬಾಲ್ ನ್ಯಾಷನಲ್ ಚಾಂಪಿಯನ್ಶಿಪ್ನ ಮೊದಲ ಆವೃತ್ತಿ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಇಂದು ಚಾಲನೆ ಸಿಕ್ಕಿದೆ.
2025-11-13
ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ತೀವ್ರ ಪರಿಶೀಲನೆಯಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (NAAC) ಶೋಕಾಸ್ ನೋಟಿಸ್ ಜಾರಿ ಮಾಡಿದೆ. ದೆಹಲಿಯ ಭಯೋತ್ಪಾದಕ ದಾಳಿಯ ನಂತರ, ಅಲ್-ಫಲಾಹ್ ವಿಶ್ವವಿದ್ಯಾಲಯವು ನಿಧಿಸಂಗ್ರಹಣೆಗಾಗಿ ಇಡಿ ತನಿಖೆಯನ್ನು ಎದುರಿಸುತ್ತಿದೆ. ತನ್ನ ವೆಬ್ಸೈಟ್ನಲ್ಲಿ ಸುಳ್ಳು ಮಾನ್ಯತೆಯನ್ನು ಪ್ರದರ್ಶಿಸಿದ್ದಕ್ಕಾಗಿ ಫರಿದಾಬಾದ್ನ ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಕ್) ಶೋಕಾಸ್ ನೋಟಿಸ್ ನೀಡಿದೆ.
2025-11-13
ಭಾರತ ತಂಡವನ್ನು ಅವರದ್ದೇ ನೆಲದಲ್ಲಿ ಮಣಿಸಲಿದ್ದೇವೆ ಎಂದು ದಕ್ಷಿಣ ಆಫ್ರಿಕಾ ಸ್ಪಿನ್ ಬೌಲರ್ ಕೇಶವ್ ಮಹಾರಾಜ್ ಹೇಳಿದ್ದಾರೆ.
2025-11-13
ಮಹಿಳಾ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ತಮ್ಮ ನೆಚ್ಚಿನ ಕ್ರಿಕೆಟರ್ ಯಾರು ಎಂದು ಬಹಿರಂಗಪಡಿಸಿದ್ದಾರೆ.
2025-11-13
2026ರ ಐಪಿಎಲ್ ಪ್ರಾರಂಭಕ್ಕೂ ಮುನ್ನ ಆರ್ಸಿಬಿ ಅಭಿಮಾನಿಗಳಿಗಿದು ಆಘಾತಕಾರಿ ಸುದ್ದಿ.
2025-11-13
ಎಲ್ಲಾ ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಿಂದ 1 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಅಭಯಾರಣ್ಯಗಳ ಒಳಗೆ ಮತ್ತು ಅವುಗಳ ಗಡಿಯಿಂದ 1 ಕಿಲೋಮೀಟರ್ ಒಳಗೆ ಗಣಿಗಾರಿಕೆಗೆ ಅನುಮತಿ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
2025-11-13
ಅನೇಕರು ತಮ್ಮ ದಿನವನ್ನು ಕಾಫಿಯೊಂದಿಗೆ ಪ್ರಾರಂಭಿಸುತ್ತಾರೆ. ಅದರಲ್ಲಿಯೂ ಎಲ್ಲಾ ರೀತಿಯ ಕಾಫಿಗಳಲ್ಲಿ, ಬ್ಲಾಕ್ ಕಾಫಿ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಕೆಲವರು ಬೆಳಗ್ಗಿನ ಸಮಯದಲ್ಲಿ ಕಾಫಿ ಕುಡಿಯುವುದು ಒಳ್ಳೆಯದಲ್ಲ ಎನ್ನುತ್ತಾರೆ. ಆದರೆ ನೀವು ತಯಾರಿಸುವ ಬ್ಲಾಕ್ ಕಾಫಿಗೆ ಹಾಲು ಸೇರಿಸದೆಯೇ ಕುಡಿಯುವುದು ಒಳ್ಳೆಯದು. ಅದರಲ್ಲಿಯೂ ಬೆಳಗ್ಗಿನ ಸಮಯದಲ್ಲಿ ರೂಢಿಸಿಕೊಂಡಿರುವ ಈ ಅಭ್ಯಾಸ ನಿಜಕ್ಕೂ ಪ್ರಯೋಜನಕಾರಿ. ಹಾಗಾದರೆ ಬ್ಲಾಕ್ ಕಾಫಿ ಯಾರಿಗೆ ಒಳ್ಳೆಯದು, ಇದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.
2025-11-13
ಇಸ್ಲಾಮಾಬಾದ್ನಲ್ಲಿ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದ ಬೆನ್ನಲ್ಲೇ ಸ್ವದೇಶಕ್ಕೆ ಮರಳಲು ಮುಂದಾಗಿದ್ದ ತಮ್ಮ ತಂಡದ ಆಟಗಾರರಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಎಚ್ಚರಿಕೆ ನೀಡಿದೆ.
2025-11-13
ಕಾವೇರಿ ಸಮಿತಿ ಮತ್ತು ನೀರಿನ ನಿಯಂತ್ರಣ ಪ್ರಾಧಿಕಾರದ ನಿರ್ದೇಶನದಂತೆ ಕರ್ನಾಟಕ ನೀರನ್ನು ಬಿಡುಗಡೆ ಮಾಡಲು ಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.
2025-11-13
Ravindra Jadeja IPL Trade: ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆದು ರಾಜಸ್ಥಾನ್ ರಾಯಲ್ಸ್ ಸೇರುವ ಸಾಧ್ಯತೆಯಿದೆ. ಟ್ರೇಡಿಂಗ್ ಮೂಲಕ ಈ ವರ್ಗಾವಣೆ ಖಚಿತವಾಗಿದ್ದು, ಅವರ 12 ವರ್ಷಗಳ CSK ಪ್ರಯಾಣ ಅಂತ್ಯವಾಗಲಿದೆ. ಜಡೇಜಾ CSKಗೆ ಮೂರು ಪ್ರಶಸ್ತಿ ಗೆಲ್ಲಲು ನೆರವಾಗಿದ್ದು, ಈ ಅವಧಿಯಲ್ಲಿ 123.4 ಕೋಟಿ ರೂ. ಸಂಪಾದಿಸಿದ್ದಾರೆ. ಮುಂದಿನ ಐಪಿಎಲ್ ಸೀಸನ್ನಲ್ಲಿ ಹೊಸ ತಂಡದಲ್ಲಿ ಜಡೇಜಾ ಆಡುವುದನ್ನು ಕಾಣಬಹುದು.
2025-11-13
Shane Watson Joins KKR: ಐಪಿಎಲ್ 2026 ಹರಾಜಿಗೆ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಕೋಚಿಂಗ್ ಸಿಬ್ಬಂದಿಯನ್ನು ಬಲಪಡಿಸಿದೆ. ಐಪಿಎಲ್ ಲೆಜೆಂಡ್ ಶೇನ್ ವ್ಯಾಟ್ಸನ್ ಅವರನ್ನು ಸಹಾಯಕ ಕೋಚ್ ಆಗಿ ನೇಮಿಸಿದೆ. ಆರ್ಸಿಬಿ, ರಾಜಸ್ಥಾನ್ ರಾಯಲ್ಸ್, ಸಿಎಸ್ಕೆ ಪರ ಮಿಂಚಿದ್ದ ಆಲ್ರೌಂಡರ್ ವ್ಯಾಟ್ಸನ್ ಸೇರ್ಪಡೆ ಕೆಕೆಆರ್ಗೆ 2026ರ ಐಪಿಎಲ್ ಪ್ರಶಸ್ತಿ ಗೆಲ್ಲಲು ನೆರವಾಗಲಿದೆ. ಅಭಿಷೇಕ್ ನಾಯರ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
2025-11-13
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy