Saalumarada Thimmakka: ಪರಿಸರಕ್ಕೆ ಗಣನೀಯ ಕೊಡುಗೆ ನೀಡಿದ ಸಾಲು ಮರದ ತಿಮ್ಮಕ್ಕ 114ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಸಸಿ ನೆಡುವ ಕಾರ್ಯಕ್ಕೆ ಅನೇಕ ವೇದಿಕೆಗಳಲ್ಲಿ ಗೌರವ ಸಂದಿತ್ತು. ಜೆಎಫ್ಡಬ್ಲ್ಯೂ ಪ್ರಶಸ್ತಿ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ತಿಮ್ಮಕ್ಕರ ಬಗ್ಗೆ ಅರಿವಿಲ್ಲದಿದ್ದಾಗ, ಪರಭಾಷಾ ನಟ ವಿವೇಕ್ ಅವರು ತಿಮ್ಮಕ್ಕರ ಸಾಧನೆಯನ್ನು ಕೊಂಡಾಡಿದ್ದರು.
2025-11-14
ಭಯೋತ್ಪಾದನಾ ನಿಗ್ರಹ ದಳವು ಡಾ. ಶಾಹೀನ್ ಮತ್ತು ಅವರ ಸಹೋದರ ಡಾ. ಪರ್ವೇಜ್ ಅವರ ನೆರೆಹೊರೆಯವರನ್ನು ಪ್ರಶ್ನಿಸಿದೆ ಹಾಗೂ ಇಂಟಿಗ್ರಲ್ ವಿಶ್ವವಿದ್ಯಾಲಯವನ್ನೂ ತನಿಖೆ ಮಾಡಿದೆ.
2025-11-14
Rakshith Shetty - Rashmika Mandanna Relationship: ರಶ್ಮಿಕಾ ಮಂದಣ್ಣ ತಮ್ಮ ಹಳೆಯ ಸಂಬಂಧವನ್ನು 'ಟಾಕ್ಸಿಕ್' ಎಂದು ಪರೋಕ್ಷವಾಗಿ ಹೇಳಿ, ರಕ್ಷಿತ್ ಶೆಟ್ಟಿ ಅಭಿಮಾನಿಗಳಲ್ಲಿ ಆಕ್ರೋಶ ಮೂಡಿಸಿದ್ದಾರೆ. 'ಗರ್ಲ್ಫ್ರೆಂಡ್' ಸಿನಿಮಾ ಈವೆಂಟ್ನಲ್ಲಿ ರಶ್ಮಿಕಾ ಈ ಬಗ್ಗೆ ಮಾತನಾಡಿದ್ದು, ತಮ್ಮ ವೈಯಕ್ತಿಕ ನೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ರಕ್ಷಿತ್ ಬ್ರೇಕಪ್ ಕುರಿತು ಪ್ರಬುದ್ಧವಾಗಿ ಮಾತನಾಡಿದ ಹಳೆಯ ವಿಡಿಯೋಗಳನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ.
2025-11-14
ಪ್ರಧಾನಿ ಮೋದಿ ನಾಯಕತ್ವ ಮತ್ತು ಅಭಿವೃದ್ಧಿಗಾಗಿ ಹಾಗೂ ಅವರ ಭರವಸೆಯಲ್ಲಿ ಜನರು ನಂಬಿಕೆಯನ್ನು ತೋರಿಸಿದ್ದಾರೆ ಎಂದು ಮಾಜಿ ಕೇಂದ್ರ ಸಚಿವರು ಹೇಳಿದ್ದಾರೆ.
2025-11-14
Anirudh Ravichandran: ಅನಿರುದ್ಧ್ ರವಿಚಂದರ್ ಪ್ರಸ್ತುತ ಭಾರತೀಯ ಚಿತ್ರರಂಗದ ಬಲು ಬೇಡಿಕೆಯ ಸಂಗೀತ ನಿರ್ದೇಶಕ. ಅನಿರುದ್ಧ್ ಸಂಗೀತದ ಜೊತೆಗೆ ಅವರ ಖಾಸಗಿ ಜೀವನ, ಅವರ ಲವ್ ಲೈಫ್ ಬಗ್ಗೆಯೂ ಆಗಾಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ 400 ಕೋಟಿಗೂ ಹೆಚ್ಚು ಆಸ್ತಿ ಮೌಲ್ಯ ಹೊಂದಿರುವ ಖ್ಯಾತ ಉದ್ಯಮಿಯ ಪುತ್ರಿಯೊಂದಿಗೆ ಅನಿರುದ್ಧ್ ಸುತ್ತಾಡುತ್ತಿದ್ದಾರೆ.
2025-11-14
ಹತ್ತರಗಿ ಟೋಲ್ ಗೇಟ್ ಬಳಿ ಪ್ರತಿಭಟನೆ ವೇಳೆ ಕಲ್ಲು ತೂರಾಟ ಮಾಡಿದ ಪ್ರಕರಣದ ಸಂಬಂಧ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
2025-11-14
ಯುವ ರಾಜ್ಕುಮಾರ್ ನಟನೆಯ 'ಎಕ್ಕ' ಕನ್ನಡ ಸಿನಿಮಾ ಈಗ ಸನ್ NXT ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಥಿಯೇಟರ್ ಬಿಡುಗಡೆಯಾದ ನಾಲ್ಕು ತಿಂಗಳ ನಂತರ 'ಎಕ್ಕ' ಒಟಿಟಿಗೆ ಎಂಟ್ರಿ ಕೊಟ್ಟಿದೆ. ಕನ್ನಡ ಸಿನಿಮಾ ಒಟಿಟಿಗೆ ಬರುವುದು ಕಡಿಮೆ. ಹೀಗಾಗಿ ಅಭಿಮಾನಿಗಳಿಗೆ ಸಿನಿಮಾ ಒಟಿಟಿಗೆ ಬಂದಿದ್ದು ಖುಷಿ ಕೊಟ್ಟಿದೆ.
2025-11-14
ಏಷ್ಯಾದಲ್ಲಿಯೇ ಬೇಡಿಕೆ ಇರುವ ಹಾಗೂ ಅತ್ಯಂತ ದೊಡ್ಡ ಮಾರುಕಟ್ಟೆ ಹೊಂದಿರುವ ತಿಪಟೂರು ಕೊಬ್ಬರಿಗೆ ಭೌಗೋಳಿಕ ಸೂಚ್ಯಂಕ ಸಿಗಬೇಕು ಎಂಬುದು ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆ.
2025-11-14
ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿಸೆಂಬರ್ 8 ರಿಂದ ಚಳಿಗಾಲದ ಅಧಿವೇಶನಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಭದ್ರತೆಗೆ 6 ಸಾವಿರ ಪೊಲೀಸರು ನಿಯೋಜನೆಗೊಂಡಿದ್ದು, ಜಿಲ್ಲಾಡಳಿತ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ. ಆದರೆ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡಿದ್ದು, ಸರ್ಕಾರದ 3300 ರೂ. ಕಬ್ಬಿನ ಬೆಲೆ ನಿರ್ಧಾರದ ಬಳಿಕವೂ ಹಲವು ರೈತರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಈ ಅಧಿವೇಶನವು ರೈತರ ಹೋರಾಟಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.
2025-11-14
ಮಹಿಳೆಗೆ ತಾವು ಪೊಲೀಸ್ ಅಧಿಕಾರಿಗಳೆಂದು ನಂಬಿಸಿದ ಆರೋಪಿಗಳು, ಮಹಿಳೆಯಿಂದ ವಿವಿಧ ಖಾತೆಗಳಿಗೆ ಒಟ್ಟು 1.81 ಕೋಟಿ ರೂ. ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು.
2025-11-14
Bihar election astrology predictions: ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಬಂದಿದ್ದು, ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳ ಒಕ್ಕೂಟವಾದ ಎನ್ಡಿಎ ಅಭೂತಪೂರ್ವವಾದ ಜನಾದೇಶ ಪಡೆದುಕೊಂಡಿದೆ. ಇನ್ನು ಇದೇ ವೇಳೆ ಬೆಂಗಳೂರಿನಿಂದ ಪ್ರಕಟವಾಗುವ ಜ್ಯೋತಿಷ್ಯದ ಇಂಗ್ಲಿಷ್ ಮಾಸಪತ್ರಿಕೆ ಮಾಡರ್ನ್ ಅಸ್ಟ್ರಾಲಜಿ ಮತ್ತೆ ಸುದ್ದಿಯಲ್ಲಿದೆ. ಜ್ಯೋತಿಷ್ಯದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದ ಬಿ.ವಿ.ರಾಮನ್ ಅವರ ಮಗಳು ಗಾಯತ್ರಿ ದೇವಿ ವಾಸುದೇವ್ ಅವರ ಸಂಪಾದಕತ್ವದಲ್ಲಿ ಹೊರಬರುವ ಜ್ಯೋತಿಷ್ಯದ ನಿಯತಕಾಲಿಕೆಯಲ್ಲಿ ಬಿಹಾರದ ವಿಧಾನಸಭಾ ಚುನಾವಣೆ ಬಗ್ಗೆ ಏನು ಹೇಳಲಾಗಿತ್ತು ಎಂಬುದರ ವಿವರಣಾತ್ಮಕ ಲೇಖನ ಇಲ್ಲಿದೆ.
2025-11-14
ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 125ನೇ ನೀರಾವರಿ ಸಲಹಾ ಸಮಿತಿ ಸಭೆಯು ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯಿತು.
2025-11-14
ಬ್ಯಾಂಕ್ ಖಾತೆಯಲ್ಲಿದ್ದ 52 ಲಕ್ಷ ಹಣ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ದೂರುದಾರನೂ ವಂಚನೆ ಜಾಲದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.
2025-11-14
ಬಾಗಲಕೋಟೆಯ ಮುಧೋಳ ಕಬ್ಬು ಬೆಳೆಗಾರರ ಹೋರಾಟ ಸುಖಾಂತ್ಯ ಕಂಡಿದೆ. ಉಸ್ತುವಾರಿ ಸಚಿವ ಶಿವಾನಂದ ಪಾಟಿಲ್, ಡಿಸಿ ಮಧ್ಯಸ್ಥಿಕೆಯಲ್ಲಿ ಶುಕ್ರವಾರ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ರಿಕವರಿ ಪರಿಗಣಿಸದೆ 3300 ರೂ. ನೀಡಲು ಒಪ್ಪಿವೆ. ಹೀಗಾಗಿ ರೈತರು ಅಲ್ಪ ಸಮಾಧಾನದಿಂದ ಹೋರಾಟ ಕೈಬಿಟ್ಟಿದ್ದಾರೆ.
2025-11-14
ಬೆಂಗಳೂರಿನಲ್ಲಿ ಸಣ್ಣ ನಿವೇಶನಗಳ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಸೆಟ್ಬ್ಯಾಕ್ ನಿಯಮಗಳನ್ನು ನಗರಾಭಿವೃದ್ಧಿ ಇಲಾಖೆ ಸರಳಗೊಳಿಸಿದೆ. 150 ಚ.ಮೀ.ವರೆಗಿನ ನಿವೇಶನಗಳಿಗೆ ಸೆಟ್ಬ್ಯಾಕ್ ಅಂತರವನ್ನು ಕಡಿತಗೊಳಿಸಿ, ಹೊಸ ನಿಯಮಗಳನ್ನು ಪ್ರಸ್ತಾಪಿಸಲಾಗಿದೆ. ಮಾಸ್ಟರ್ ಪ್ಲಾನ್ 2015 ಅಡಿಯಲ್ಲಿ ಹೊರಡಿಸಲಾದ ಕರಡು ಅಧಿಸೂಚನೆಗೆ ಸಾರ್ವಜನಿಕರು 30 ದಿನಗಳೊಳಗೆ ಆಕ್ಷೇಪಣೆ/ಸಲಹೆ ನೀಡಬಹುದು.
2025-11-13
ಕೇಂದ್ರ ಸರ್ಕಾರ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳ ಮೇಲೆ ಜಿಎಸ್ಟಿ ದರ ಕಡಿಮೆ ಮಾಡಿದ್ದೇ ತಡ ಜನರು ನಾ ಮುಂದು ತಾ ಮುಂದು ಎಂದು ಹೊಸ ವಾಹನಗಳನ್ನು ಖರೀದಿಸಲು ಮುಂದಾಗಿದ್ದಾರೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಬೆಂಗಳೂರಿನ ಟ್ರಾಫಿಕ್ ಮೇಲೆ ಬೀಳಲಿದ್ದು, ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಪರದಾಡಬೇಕಾಗಲಿದೆ.
2025-11-13
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಯುವ ನಾಯಕ ಸಂತೋಷ್ ಕೋಟ್ಯಾನ್ ಅವರನ್ನು ಬಂಧಿಸಲಾಯಿತು. ಘಟನೆಯು ನಗರದಲ್ಲಿ ಬಿಜೆಪಿ ಪ್ರತಿಭಟನೆ ಮತ್ತು ಸ್ವಲ್ಪ ಸಮಯದ ಉದ್ವಿಗ್ನತೆಗೆ ಕಾರಣವಾಯಿತು.
2025-11-13
ಕರ್ನಾಟಕದಲ್ಲಿ ನವೆಂಬರ್ 17ರಿಂದ ಎರಡು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಕಡೆ ಮೋಡಕವಿದ ವಾತಾವರಣವಿದ್ದು, ಚಳಿ ಸಾಮಾನ್ಯವಿದೆ. ನವೆಂಬರ್ 17ರಿಂದ ಎರಡು ದಿನಗಳ ಕಾಲ ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಸಾಧಾರಣ ಮಳೆಯಾಗಲಿದೆ ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಮಳೆಯಾಗಲಿದೆ.
2025-11-13
ಬೃಹತ್ ಬೆಂಗಳೂರು ಪ್ರಾಧಿಕಾರವು ಆಸ್ತಿ ಮಾಲೀಕರಿಗೆ ಇ-ಖಾತಾ ನೋಂದಣಿ ಸಮಸ್ಯೆಗಳನ್ನು ನಿವಾರಿಸಲು ಫೇಸ್ಲೆಸ್, ಕಾಂಟ್ಯಾಕ್ಟ್ ಲೆಸ್, ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದ್ದು, ದಾಖಲೆ ಪರಿಶೀಲನೆ ಸುಲಭವಾಗಲಿದೆ. ಆಸ್ತಿ ಮಾಲೀಕರು ಸುಲಭವಾಗಿ ಮತ್ತು ತ್ವರಿತವಾಗಿ ಇ-ಖಾತಾ ಪಡೆಯಲು ಇದು ಸಹಾಯಕವಾಗಲಿದೆ.
2025-11-13
ಕ್ಯಾನ್ಸರ್ ಎಂಬ ಕೇಳಿದರೆ ಸಾಕು, ಒಂದು ರೀತಿಯಲ್ಲಿ ಎಲ್ಲರೂ ಬೆಚ್ಚಿ ಬೀಳುತ್ತೇವೆ. ವಯಸ್ಕರು, ವೃದ್ದರು, ಪುಟ್ಟಪುಟ್ಟ ಮಕ್ಕಳು ಎಂಬ ಭೇದಭಾವವಿಲ್ಲದೇ ಪ್ರತಿವರ್ಷವು ಸಾವಿರಾರು ಮಂದಿ ಕ್ಯಾನ್ಸರ್ಗೆ ತುತ್ತಾಗುತ್ತಿದ್ದು, ಅದರಲ್ಲೂ ಬೆಂಗಳೂರಂತೂ ಕ್ಯಾನ್ಸರ್ ಹಾಟ್ಸ್ಪಾಟ್ ಆಗಿ ಬದಲಾಗುತಿದೆ. ‘ಗೃಹ ಆರೋಗ್ಯ’ ಯೋಜನೆ ಅಡಿ ಸ್ಕ್ರೀನಿಂಗ್ ಮಾಡಿದಾಗ ಕ್ಯಾನ್ಸರ್ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
2025-11-13
ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ದಾಳಿ ಆತಂಕದ ನಡುವೆ, ಎಐ ನಿರ್ಮಿತ ಸುಳ್ಳು ಹುಲಿ ವಿಡಿಯೋಗಳು ಸಾರ್ವಜನಿಕರಲ್ಲಿ ಅನಗತ್ಯ ಭೀತಿ ಹುಟ್ಟಿಸುತ್ತಿವೆ. ಇಂತಹ ವಿಡಿಯೋಗಳನ್ನು ಹಂಚುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಇದರಿಂದ ಇಲಾಖೆಯ ಕಾರ್ಯನಿರ್ವಹಣೆಗೂ ತೊಂದರೆಯಾಗುತ್ತಿದ್ದು, ಜನ ಸಾಮಾನ್ಯರು ಆತಂಕಗೊಳ್ಳುತ್ತಿದ್ದಾರೆ. ಹೀಗಾಗಿ ಕಿಡಿಗೇಡಿಗಳ ವಿರುದ್ಧ ಕ್ರಮ ಅಗತ್ಯ ಎಂದು ಇಲಾಖೆ ಹೇಳಿದೆ.
2025-11-13
ದೆಹಲಿಯಲ್ಲಿ ನವೆಂಬರ್ 10ರಂದು ನಿಗೂಢ ಸ್ಫೋಟ(Blast)ವೊಂದು ಸಂಭವಿಸಿತ್ತು. ಪರಿಣಾಮ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಘಟನೆ ನಡೆದ ಸ್ಥಳದಿಂದ ಸುಮಾರು 300 ಮೀಟರ್ ದೂರದಲ್ಲಿರುವ ಅಂಗಡಿಯೊಂದರ ಮೇಲೆ ವ್ಯಕ್ತಿಯೊಬ್ಬರ ತೋಳು ಪತ್ತೆಯಾಗಿದೆ. 12 ಸೆಕೆಂಡುಗಳ ವೀಡಿಯೊದಲ್ಲಿ ಕೆಂಪು ಕೋಟೆ ಕಾರಿಡಾರ್ನ ಎದುರಿನ ಲಜಪತ್ ರಾಯ್ ಮಾರುಕಟ್ಟೆಯ ಅಂಗಡಿಯ ಮೇಲ್ಭಾಗದಲ್ಲಿ ಕತ್ತರಿಸಿದ ತೋಳು ಇರುವುದನ್ನು ತೋರಿಸಲಾಗಿದೆ.
2025-11-13
ದೆಹಲಿಯಲ್ಲಿ ಕೇಳಿಬಂದ ಮತ್ತೊಂದು ಸ್ಫೋಟದ ಶಬ್ದಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ., ಆದರೆ ಈ ಬಾರಿ ಯಾವುದೇ ಬಾಂಬ್ ಸ್ಫೋಟಗೊಂಡಿಲ್ಲ ಬದಲಾಗಿ ಸ್ಫೋಟಗೊಂಡಿದ್ದು, ಬಸ್ಸಿನ ಹಿಂಬದಿ ಟೈರ್ ಎಂಬುದು ತಿಳಿದುಬಂದಿದೆ. ಮಾಹಿತಿ ಪ್ರಕಾರ, ಮಹಿಳೆಯೊಬ್ಬರು ಅಲ್ಲಿ ಸ್ಫೋಟದ ಶಬ್ದ ಕೇಳಿ ಪಿಸಿಆರ್ಗೆ ಕರೆ ಮಾಡಿದ್ದರು. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ದೆಹಲಿ ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬಂದಿಲ್ಲ.
2025-11-13
ಒಟ್ಟು ಎಂಟು ಉಗ್ರರು ಭಾರತದ 4 ಕಡೆಗಳಲ್ಲಿ ಸರಣಿ ಸ್ಫೋಟಗಳನ್ನು ನಡೆಸಲು ಸಂಚು ರೂಪಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಯೋತ್ಪಾದಕರು ತಲಾ ಎರಡು ಗುಂಪುಗಳಾಗಿ ನಾಲ್ಕು ನಗರಗಳಿಗೆ ತೆರಳಲು ಯೋಜಿಸಿದ್ದರು, ಅವರು ತಮ್ಮೊಂದಿಗೆ ಬಹು ಐಇಡಿಗಳನ್ನು ಸಾಗಿಸಬೇಕಿತ್ತು. ಸುಮಾರು 8 ಶಂಕಿತರು ನಾಲ್ಕು ಸ್ಥಳಗಳಲ್ಲಿ ಸರಣಿ ಸ್ಫೋಟ ನಡೆಸಲು ಯೋಜಿಸಿದ್ದರು. ಅವರು ತಲಾ ಎರಡು ಗುಂಪುಗಳಾಗಿ ನಾಲ್ಕು ನಗರಗಳಿಗೆ ತೆರಳಲು ಯೋಜಿಸಿದ್ದರು. ತನಿಖಾ ಸಂಸ್ಥೆಯ ಮೂಲಗಳು ಎಎನ್ಐಗೆ ತಿಳಿಸಿರುವಂತೆ ಡಾ. ಮುಜಮ್ಮಿಲ್, ಡಾ. ಅದೀಲ್, ಉಮರ್ ಮತ್ತು ಶಾಹೀನ್ ಜಂಟಿಯಾಗಿ ಸುಮಾರು 20 ಲಕ್ಷ ರೂ. ನಗದನ್ನು ಸಂಗ್ರಹಿಸಿದ್ದು, ದೆಹಲಿ ಸ್ಫೋಟದ ಮೊದಲು ಅದನ್ನು ಉಮರ್ಗೆ ಹಸ್ತಾಂತರಿಸಲಾಗಿತ್ತು.
2025-11-13
ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಬಳಿ ನಡೆದ ಸ್ಫೋಟ(Blast)ದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ಕೆಲವು ಭಯಾನಕ ವಿಚಾರಗಳು ತಿಳಿದುಬಂದಿವೆ. ಜೈಶ್-ಎ-ಮೊಹಮ್ಮದ್ ಜೊತೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ವೈದ್ಯರನ್ನು ಒಳಗೊಂಡ ಶಂಕಿತ ಭಯೋತ್ಪಾದಕ ಘಟಕವು ಡಿಸೆಂಬರ್ 6 ರಂದು ರಾಷ್ಟ್ರೀಯ ರಾಜಧಾನಿ ಪ್ರದೇಶದ ಆರು ಸ್ಥಳಗಳಲ್ಲಿ ಸ್ಫೋಟಗಳನ್ನು ನಡೆಸಲು ಯೋಜಿಸಿತ್ತು ಎಂಬ ಮಾಹಿತಿ ತಿಳಿದುಬಂದಿದೆ.
2025-11-13
Lakhs_rupees_stolen_Bengaluru_man_cryptocurrency
Nitish_Kumar_take_oath_Bihar_CM
You_too_can_become_an_AI_expert
When_time_donate_kidney_father_son
Dr_Ahmed_imprisoned_Sabarmati_plotting_ricin_attack
© gokakica.in. All Rights Reserved. Designed by Image Computer Academy